For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ನಿರ್ಮಾಪಕ, ಖ್ಯಾತ ಬಾಣಸಿಗ ನೌಶಾದ್ ನಿಧನ

  |

  ಮಲಯಾಳಂ ಖ್ಯಾತ ನಿರ್ಮಾಪಕ ಹಾಗೂ ಬಾಣಸಿಗ ನೌಶಾದ್ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೊಟ್ಟೆಗೆ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ನೌಶಾದ್ ಹೃದಯಘಾತದಿಂದ ಆಗಸ್ಟ್ 27 ರಂದು ಕೊನೆಯುಸಿರೆಳೆದರು.

  ಕಳೆದ ಮೂರು ವರ್ಷಗಳಿಂದ ನೌಶಾದ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ತಿಂಗಳೂ ಸಹ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿದೆ. 55 ವರ್ಷದ ನೌಶಾದ್ 13 ವರ್ಷದ ಮಗಳನ್ನು ಬಿಟ್ಟು ಅಗಲಿದ್ದಾರೆ. ವಿಪರ್ಯಾಸ ಅಂದ್ರೆ ಎರಡು ವಾರಗಳ ಹಿಂದೆಯಷ್ಟೇ ತನ್ನ ಪತ್ನಿಯನ್ನು ಕಳೆದುಕೊಂಡಿದ್ದರು.

  ಇತ್ತೀಚೆಗೆ ನೌಷಾದ್ ಆಲತ್ತೂರ್ ಸ್ನೇಹಿತ ನೌಶಾದ್ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನೌಶಾದ್ ಆರೋಗ್ಯ ಗಂಭೀರವಾಗಿದೆ ಎಂದು ಬಹಿರಂಗಪಡಿಸಿದ್ದರು. ಅಂದ್ಹಾಗೆ, ಕೇರಳದ ಕ್ಯಾಟರಿಂಗ್ ಮತ್ತು ರೆಸ್ಟೋರೆಂಟ್ ಗ್ರೂಪ್‌ 'ನೌಶಾದ್ ದಿ ಬಿಗ್ ಶೆಫ್' ಮಾಲೀಕರಾಗಿದ್ದರು.

  ರಜನಿಕಾಂತ್ ಆಪ್ತ ಸ್ನೇಹಿತ 'ಕಡ್ಡಿ' ರಾಮಚಂದ್ರ ರಾವ್ ನಿಧನರಜನಿಕಾಂತ್ ಆಪ್ತ ಸ್ನೇಹಿತ 'ಕಡ್ಡಿ' ರಾಮಚಂದ್ರ ರಾವ್ ನಿಧನ

  2004ರಲ್ಲಿ ಮಮ್ಮುಟ್ಟಿ ಮತ್ತು ಪದ್ಮಪ್ರಿಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದ ಕಾಜ್ಜ ಚಿತ್ರದ ಮೂಲಕ ನೌಶಾದ್ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಈ ಚಿತ್ರವನ್ನು ಚೊಚ್ಚಕ ನಿರ್ದೇಶಕ ಬ್ಲೆಸ್ಸಿಯ ಮಾಡಿದ್ದರು. ಈ ಚಿತ್ರಕ್ಕೆ ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ತಂದುಕೊಟ್ಟಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ಬಾಲನಟ, ಅತ್ಯುತ್ತಮ ಚೊಚ್ಚಲ ನಿರ್ದೇಶಕ ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಲಭಿಸಿತ್ತು.

  ಇದರ ಜೊತೆಗೆ 'ಸ್ಪ್ಯಾನಿಷ್ ಮಸಾಲಾ' (2012), 'ಲಯನ್' (2006), 'ಚಟ್ಟಂಬಿನಾಡು' (2009) ಮತ್ತು 'ಬೆಸ್ಟ್ ಆಕ್ಟರ್' (2010) ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೌಶಾದ್ ನಿರ್ಮಿಸಿದ್ದರು.

  ಇನ್ನು ಕಿರುತೆರೆಯಲ್ಲಿ ನೌಶಾದ್ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಮಲಯಾಳಂನ ವಿವಿಧ ವಾಹಿನಿಗಳಲ್ಲಿ ಅವರು ಶೋ ಪ್ರಸಾರವಾಗಿದೆ. ಕಿರುತೆರೆ ಪ್ರೇಕ್ಷಕರಿಂದಲೂ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು.

  English summary
  Popular Malayali chef Naushad died Friday in Kerala at the age of 55 two weeks after his wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X