For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಹಿರಿಯ ನಟ ರಿಜಭಾವ ನಿಧನ

  |

  ಮಲಯಾಳಂ ಚಿತ್ರರಂಗದ ಹಿರಿಯ ನಟ ರಿಜಭಾವ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

  ರಿಜಭಾವಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು, ಹಲವು ದಿನಗಳಿಂದಲೂ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು (ಸೆಪ್ಟೆಂಬರ್ 13) ರಿಜಭಾವ ನಿಧನರಾಗಿದ್ದಾರೆ.

  1990ರಿಂದಲೂ ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ರಿಜಭಾವ ಈವರೆಗೆ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಜಭಾವ ನಟನಾಗಿ ಮಾತ್ರವೇ ಅಲ್ಲದೆ ಡಬ್ಬಿಂಗ್ ಕಲಾವಿದರಾಗಿಯೂ ಜನಪ್ರಿಯರಾಗಿದ್ದರು. ಜೊತೆ 20 ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

  ರಿಜಭಾವ ಪೋಷಕ ಪಾತ್ರ, ವಿಲನ್ ಪಾತ್ರ, ಹಾಸ್ಯ ಪಾತ್ರ ಎಲ್ಲದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿಯೂ ನಟಿಸಿದ್ದಾರೆ. ರಿಜಭಾವ, ಮಮ್ಮುಟಿ, ಮೋಹನ್‌ಲಾಲ್ ಸೇರಿ ಮಲಯಾಳಂ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಮಮ್ಮುಟಿ ಜೊತೆಗೆ ಅತ್ಯಾಪ್ತ ಬಂಧನವನ್ನು ಸಹ ರಿಜಭಾವ ಹೊಂದಿದ್ದರು.

  ರಿಜಭಾವ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ, ರಿಜಭಾವ ನಟಿಸಿದ್ದ ಮೊದಲ ಸಿನಿಮಾ 'ಡಾ ಪಶುಪತಿ' ಸಿನಿಮಾ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಶಾಜಿ ಕೈಲಾಸ್ ಮಾತನಾಡಿ, ''ಅವರೊಬ್ಬ ಬಹಳ ಸರಳ ವ್ಯಕ್ತಿ, ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಸುಲಭವಾಗಿರುತ್ತಿತ್ತು'' ಎಂದಿದ್ದಾರೆ.

  ''ನಾನು ಅವರೊಟ್ಟಿಗೆ ಸದಾ ಸಂಪರ್ಕದಲ್ಲಿದ್ದೆ. ಕೆಲವು ದಿನಗಳ ಹಿಂದೆಯಷ್ಟೆ ಅವರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಸದಾ ಹೊಸ ವಿಷಯಗಳ ಬಗ್ಗೆ ಅವರು ಚರ್ಚಿಸುತ್ತಿದ್ದರು. ನಾನು ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಈ ಕ್ಷಣ ನಾನು ಬಹಳ ದುಃಖವನ್ನು ಅನುಭವಿಸುತ್ತಿದ್ದೇನೆ'' ಎಂದಿದ್ದಾರೆ.

  'ಇನ್ ಹರಿಹರ ನಗರ', 'ಮಲ್ಲಪುರಂ ಹಾಜಿ, ಮಹನಾಯ ಜೋಜಿ', 'ಡಾ ಪಶುಪತಿ', 'ಪೋಕಿರಿರಾಜ', 'ಅಸುರವಂಶಂ ', 'ಡ್ಯೂಪ್ಲಿಕೇಟ್' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಮಮ್ಮುಟಿ ನಟನೆಯ 'ಒನ್' ಸಿನಿಮಾದಲ್ಲಿ ನಟಿಸಿದ್ದರು ರಿಜಭಾವ.

  ನಿನ್ನೆಯಷ್ಟೆ (ಸೆಪ್ಟೆಂಬರ್ 12) ಮಲಯಾಳಂನ ಜನಪ್ರಿಯ ಕಿರುತೆರೆ ನಟ ರಮೇಶ್ ವಲಿಯಾಶಲ ನಿಧನ ಹೊಂದಿದರು. ಅವರ ಮೃತದೇಹ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಮೇಶ್ ವಲಿಯಾಶಲ ಸಾವಿನ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.

  English summary
  Malayalam senior actor Rizabawa passed away. He is suffering from kidney disease. He acted in more than 130 Malayalam movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X