ಮರದಿಂದ ಬಿದ್ದು ನಟ ನಿವಿನ್ ಪೌಲಿ ಮೇಕಪ್ ಮ್ಯಾನ್ ನಿಧನ

ಮಲಯಾಳಂ ಸಿನಿಮಾರಂಗದ ಖ್ಯಾತ ನಟ ನಿವಿನ್ ಪೌಲಿ ಮೇಕಪ್ ಮ್ಯಾನ್ ಶಬು ಪುಲ್ಪಲ್ಲಿ ಮರದಿಂದ ಬಿದ್ದು ನಿಧನರಾಗಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದೆ.

ನಿವಿನ್ ಪೌಲಿ ಅವರ ವೈಯಕ್ತಿಕ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ಶಬು, ಭಾನುವಾರ ಸಂಜೆ ನಿಧರಾಗಿದ್ದಾರೆ. ಶಬು ಅನೇಕ ವರ್ಷಗಳಿಂದ ನಿವಿನ್ ಪೌಲಿ ಜೊತೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.

ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿರುವ ಈ ಸಮಯದಲ್ಲಿ, ಕ್ರಿಸ್ಮಸ್ ಟ್ರೀಗೆ ಕ್ರಿಸ್ಮಸ್ ಸ್ಟಾರ್ ಕಟ್ಟಲು ಹೋಗಿದ್ದ ಶಬು ಆಯತಪ್ಪಿ ಕೆಳಗೆಬಿದ್ದಾರೆ. ಆಂತರಿಕ ಗಾಯದಿಂದ ಶಬು ನಿಧನರಾಗಿದ್ದಾರೆ ಎಂದು ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ನಿರ್ದೇಶಕರ ಸಂಘವು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Malayam Actor Nivin Paulys Make up man Shabu Pulpally dies fall from tree

ಶಬು ಮರದಿಂದ ಬಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಸಹ ಅವರು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. 2012ರಿಂದ ಶಬು ನಟ ನಿವಿನ್ ಪೌಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಸಿದ್ಧ ಮೇಕಪ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಮೇಕಪ್ ಮ್ಯಾನ್ ಶಬು ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟ ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕರು ಶಬು ಜೊತೆ ಕಳೆದ ನೆನಪನ್ನು ಹಂಚಿಕೊಂಡಿದ್ದಾರೆ. ನಟ ದುಲ್ಕರ್, ಬೆಂಗಳೂರು ಡೇಸ್ ಮತ್ತು ವಿಕ್ರಮಾದಿತ್ಯನ್ ಸಿನಿಮಾಗಳಲ್ಲಿ ಅವರ ಜೊತೆ ಕೆಲಸ ಮಾಡಿದ್ದನ್ನು ಯಾವಾಗಲು ಪ್ರೀತಿಸುತ್ತೇನೆ. ದುಃಖ ಬರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಶಬು ಅವರಿಗೆ ಪತ್ನಿ ರೇಷ್ಮಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಇಂದು (ಡಿಸೆಂಬರ್ 21) ಶಬು ಅವರ ಅಂತ್ಯ ಕ್ರೀಯೆ ನೆರವೇರಲಿದ್ದು, ಅನೇಕ ಗಣ್ಯರು ಭಾಗಿಯಾಗಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

More from Filmibeat

English summary
Malayam Actor Nivin Pauly's Make up man Shabu Pulpally dies fall from tree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X