Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
275 ದಿನಗಳ ಬಳಿಕ ಮನೆಯಿಂದ ಹೊರಗೆ ಬಂದ ಮಲಯಾಳಂ ಸೂಪರ್ ಸ್ಟಾರ್
ಲಾಕ್‌ಡೌನ್ ಘೋಷಣೆ ಆದ್ಮೇಲೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟಿ ಎಲ್ಲಿಯೂ ಹೊರಗೆ ಕಾಣಿಸಿಕೊಂಡಿಲ್ಲ. ಏಂಟು ತಿಂಗಳು ಕಾಲ ಮಮ್ಮೂಟಿ ಸಾರ್ವಜನಿಕರ ಮುಂದೆ ಬಂದಿಲ್ಲ. ಕನಿಷ್ಠ ಅವರ ಫೋಟೋ ಸಹ ಬಹಿರಂಗವಾಗಿರಲಿಲ್ಲ.
ಇದೀಗ, ಸುಮಾರು 275 ದಿನಗಳ ಬಳಿಕ ಮಮ್ಮೂಟಿ ಮೊದಲ ಸಲ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಬಹಳ ದಿನಗಳ ನಂತರ ಕಾಣಿಸಿಕೊಂಡ ಮಮ್ಮೂಟಿ ಅವರ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಆಫ್ ದಿನ ಟೌನ್ ಆಗಿದೆ.
ಅಪ್ಪನಿಗೆ ಆಕ್ಷನ್-ಕಟ್ ಹೇಳಲಿದ್ದಾರೆಯೇ ದುಲ್ಕರ್ ಸಲ್ಮಾನ್?
ಕೊಚ್ಚಿಯ ತಮ್ಮ ಮೂಲ ನಿವಾಸದಲ್ಲಿ 275ಕ್ಕೂ ಅಧಿಕ ದಿನಗಳು ಕ್ವಾರಂಟೈನ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಮಮ್ಮೂಟಿ ಅಪರೂಪದ ದಾಖಲೆ ಬರೆಯಲು ಮುಂದಾಗಿದ್ದಾರೆ. ಅತಿ ಹೆಚ್ಚು ದಿನ ಮನೆಯಲ್ಲಿ ಉಳಿಯುವ ಮೂಲಕ ಸೂಪರ್ ಸ್ಟಾರ್ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಗಡ್ಡ ಬಿಟ್ಟು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಟೈಲ್ ಆಗಿ ಕಾಣಿಸಿಕೊಂಡಿರುವ ಮಮ್ಮೂಟಿ ಫೋಟೋಗಳು ಈಗ ಟ್ರೆಂಡ್ ಆಗ್ತಿದೆ. ಮೂಲಗಳ ಪ್ರಕಾರ ಜಾಹೀರಾತು ಚಿತ್ರೀಕರಣದಲ್ಲಿ ಮಮ್ಮೂಟಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಅಮಲ್ ನೀರಾದ್ ನಿರ್ದೇಶನದ 'ಬಿಲಾಲ್' ಚಿತ್ರದಲ್ಲಿ ಮಮ್ಮೂಟಿ ನಟಿಸುತ್ತಿದ್ದು, ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಹಾಕಿದೆ. ಇದಕ್ಕೂ ಮುಂಚೆ ಅಮಲ್ ನೀರಾದ್ ನಿರ್ದೇಶನದಲ್ಲಿ ಇನ್ನೊಂದು ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ವಿಲನ್ ಪಾತ್ರ ಮಾಡಿ ಎಂದಿದ್ದಕ್ಕೆ ಅಚ್ಚರಿ ಪ್ರತಿಕ್ರಿಯೆ ನೀಡಿದ ಮಮ್ಮುಟ್ಟಿ!
ಮತ್ತೊಂದೆಡೆ ಸಿಬಿಐ 5 ಸಿನಿಮಾದಲ್ಲೂ ಮಮ್ಮೂಟಿ ಅಭಿನಯಿಸಲಿದ್ದಾರೆ. ಇನ್ನು ಮಮ್ಮೂಟಿ ನಟನೆಯ 'ಒನ್' ಚಿತ್ರದ ಬಿಡುಗಡೆಗೆ ಸಜ್ಜಾಗಿದೆ. ಸಂತೋಷ್ ವಿಶ್ವನಾಥ್ ಈ ಚಿತ್ರ ನಿರ್ದೇಶಿಸಿದ್ದಾರೆ.