For Quick Alerts
  ALLOW NOTIFICATIONS  
  For Daily Alerts

  ಬಂಧನ ಹಿನ್ನೆಲೆ ದಿಲೀಪ್‌ ಬಳಿ ಮಗಳು ಸುರಕ್ಷಿತವಲ್ಲ: ಮಂಜು ವಾರಿಯರ್

  By Suneel
  |

  ಬಹುಭಾಷಾ ನಟಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಅರೆಸ್ಟ್ ಆಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ನಟನ ಮಾಜಿ ಪತ್ನಿ ಮಂಜು ವಾರಿಯರ್ ತಂದೆಯ ಬಳಿ ಮಗಳು ಇರುವುದು ಸೇಫ್ ಅಲ್ಲ. ಆಕೆಯನ್ನು ನನ್ನ ವಶಕ್ಕೆ ಬಿಟ್ಟುಕೊಡಿ ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ನಟ ದಿಲೀಪ್ ಬಂಧನದ ಹಿಂದಿರುವ ಸಾಕ್ಷಿಗಳೇನು?

  ಪ್ರೇಮ ವಿವಾಹವಾಗಿದ್ದ ಖ್ಯಾತ ನಟಿ ಮಂಜು ವಾರಿಯರ್ ಮತ್ತು ನಟ ದಿಲೀಪ್ 17 ವರ್ಷಗಳ ನಂತರ ಪರಸ್ಪರ ಒಪ್ಪಿಗೆಯಿಂದ ದಾಂಪತ್ಯ ಜೀವನವನ್ನು ಡೈವೋರ್ಸ್ ಮೂಲಕ ಅಂತ್ಯಗೊಳಿಸಿದ್ದರು. ಆ ಸಮಯದಲ್ಲಿ ಮಗಳು ಮೀನಾಕ್ಷಿ ತಂದೆಯ ಬಳಿ ಇರುವುದಾಗಿ ಹೇಳಿದ್ದಳು. ಇದಕ್ಕೆ ಮಂಜು ವಾರಿಯರ್ ಸಹ ಒಪ್ಪಿದ್ದರು. ಆದರೆ ಈಗ ನಟ ದಿಲೀಪ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಕಾರಣ ಮಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

  ಮಂಜು ವಾರಿಯರ್ ಹಣಕಾಸು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಮಗಳು ಮೀನಾಕ್ಷಿ ಸಹ ಮೈನರ್ ಗರ್ಲ್ ಆಗಿರುವ ಕಾರಣ ಕೋರ್ಟ್ ಭಾಗಶಃ ಮಗಳನ್ನು ತಾಯಿ ವಶಕ್ಕೆ ಕಳುಹಿಸಿಕೊಡಲು ಅನುಮತಿ ನೀಡಬಹುದು. ಆದರೆ ನಟ ದಿಲೀಪ್ ಮತ್ತು ಅವರ ಕುಟುಂಬ ಮೀನಾಕ್ಷಿಯನ್ನು ಅವರ ತಾಯಿ ಬಳಿ ಕಳುಹಿಸಲು ಒಪ್ಪುವ ಸಾಧ್ಯತೆಗಳು ಇಲ್ಲ ಎಂದು ಮೂಲಗಳಿಂದ ತಿಳಿದಿದೆ.

  ನಟಿ ದಿಲೀಪ್ ಬಂಧನದ ನಂತರ ಕೇರಳದ ಚಲನಚಿತ್ರ ಕಲಾವಿದರ ಸಂಘ AMMA, FEFKA, ನಿರ್ಮಾಪಕರ ಸಂಘ, FEUOK ಮತ್ತು ಇತರೆ ಪ್ರಮುಖ ಸಂಘಗಳಿಂದ ಅವರನ್ನು ಹೊರಹಾಕಲಾಗಿದೆ. ಅಲ್ಲದೇ ಕೇರಳದ ಜನತೆ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  English summary
  Following Dileep’s arrest, Manju Warrier to move to court for the custody of her daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X