For Quick Alerts
  ALLOW NOTIFICATIONS  
  For Daily Alerts

  ಪೃಥ್ವಿರಾಜ್‌ಗೆ ದುಬಾರಿ ಉಡುಗೊರೆ ನೀಡಿದ ಮೋಹನ್ ಲಾಲ್

  |

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪ್ರಸ್ತುತ 'ಬ್ರೋ ಡ್ಯಾಡಿ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡ್ತಿದ್ದು, ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಜುಲೈ ತಿಂಗಳಿಂದ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿರುವ ಚಿತ್ರತಂಡ ಬಹುತೇಕ ಕೊನೆಯ ಹಂತದಲ್ಲಿದೆ.

  ಈ ನಡುವೆ ನಟ ಮೋಹನ್ ಲಾಲ್, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ಗೆ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಪೃಥ್ವಿರಾಜ್ ಸನ್‌ಗ್ಲಾಸ್ ಫೋಟೋ ಹಂಚಿಕೊಂಡಿದ್ದಾರೆ. ಹಾಗೂ ಈ ಉಡುಗೊರೆ ನೀಡಿದ್ದಕ್ಕೆ ಮೋಹನ್ ಲಾಲ್ ಅವರಿಗೆ ಧನ್ಯವಾದ ಹೇಳಿದ್ದಾರೆ.

  ಹೆತ್ತ ತಾಯಿಗೆ ಆಕ್ಷನ್ ಕಟ್ ಹೇಳಿದ ಪೃಥ್ವಿರಾಜ್ ಸುಕುಮಾರನ್ಹೆತ್ತ ತಾಯಿಗೆ ಆಕ್ಷನ್ ಕಟ್ ಹೇಳಿದ ಪೃಥ್ವಿರಾಜ್ ಸುಕುಮಾರನ್

  ಸದ್ಯದ ವರದಿ ಪ್ರಕಾರ ಬ್ರೋ ಡ್ಯಾಡಿ ಸಿನಿಮಾದ ಚಿತ್ರೀಕರಣ ಮುಗಿದಿದೆ. ಅಂದ್ಹಾಗೆ, ಮೋಹನ್ ಲಾಲ್ ನಟಿಸಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಇದಕ್ಕೂ ಮುಂಚೆ ಮೋಹನ್ ಲಾಲ್ ಅಭಿನಯದ ಲೂಸಿಫರ್ ಚಿತ್ರವನ್ನು ಪೃಥ್ವಿರಾಜ್ ನಿರ್ದೇಶಿಸಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಈಗ ಕುತೂಹಲ ಮೂಡಿಸಿದೆ.

  ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಬ್ರೋ ಡ್ಯಾಡಿ' ಚಿತ್ರದಲ್ಲಿ ಪೃಥ್ವಿರಾಜ್ ಅವರ ತಾಯಿ ಮಲ್ಲಿಕಾ ಸುಕುಮಾರ್ ಸಹ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಮೋಹನ್ ಲಾಲ್ ಮತ್ತು ಮಲ್ಲಿಕಾ ಅವರು ಒಟ್ಟಿಗೆ ನಟಿಸುವ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದ ಸುಕುಮಾರನ್ ಇತ್ತೀಚಿಗಷ್ಟೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದರು. ''ಸಾರ್ವಕಾಲಿಕ ಶ್ರೇಷ್ಠ ನಟ ಮತ್ತು ಶ್ರೇಷ್ಠ ತಾಯಿಯನ್ನು ಒಂದೇ ಫ್ರೆಮ್‌ನಲ್ಲಿ ನಿರ್ದೇಶಿಸಲು ಅವಕಾಶ ಸಿಕ್ಕಾಗ'' ಎಂದು ಫೋಟೋ ಹಂಚಿಕೊಂಡಿದ್ದರು.

  ಕೋವಿಡ್ ಭೀತಿಯಲ್ಲೇ ಚಿತ್ರೀಕರಣ ಆರಂಭಿಸಿದ 'ಬ್ರೋ ಡ್ಯಾಡಿ'ಕೋವಿಡ್ ಭೀತಿಯಲ್ಲೇ ಚಿತ್ರೀಕರಣ ಆರಂಭಿಸಿದ 'ಬ್ರೋ ಡ್ಯಾಡಿ'

  ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ ಮಲ್ಲಿಕಾ ಮಲಯಾಳಂ ಇಂಡಸ್ಟ್ರಿಯಲ್ಲಿ ದೊಡ್ಡ ನಟಿ. 1974ರಲ್ಲಿ ನಟನೆ ಚೊಚ್ಚಲ ಸಿನಿಮಾ ಮಾಡಿದ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ, ಮಗನ ನಿರ್ದೇಶನದಲ್ಲಿ ಮೊದಲ ಸಲ ನಟಿಸುವ ಅವಕಾಶ ಪಡೆದಿರುವುದು ಅಪರೂಪದ ಸಂಗತಿ ಆಗಿದೆ.

   Mohan Lal Gifts Special Sunglasses to Prithviraj sukumaran

  'ಬ್ರೋ-ಡ್ಯಾಡಿ' ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಕಲ್ಯಾಣಿ ಪ್ರಿಯದರ್ಶನ್, ಮಲ್ಲಿಕಾ ಸುಕುಮಾರನ್, ಮೀನಾ, ಕನಿಹಾ ಮತ್ತು ಸೌಬಿನ್ ಶಾಹಿರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಂಟನಿ ಪೆರುಂಬಾವೂರ್ ನಿರ್ಮಿಸುತ್ತಿದ್ದು, ಬರಹಗಾರರಾದ ಶ್ರೀಜಿತ್ ಮತ್ತು ಬಿಬಿನ್ ಸ್ಕ್ರಿಪ್ಟ್ ಬರೆದಿದ್ದಾರೆ.

  ಈ ಚಿತ್ರದ ನಂತರ 'ಲೂಸಿಫರ್ 2' ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಮೋಹನ್ ಲಾಲ್ ಮತ್ತು ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಮೂರನೇ ಸಿನಿಮಾ ಇದಾಗಿದೆ.

  English summary
  Malayalam Superstar Mohan Lal Gifts expensive Sunglasses to Prithviraj sukumaran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X