ಡಬ್ಬಿಂಗ್ ಆರಂಭಿಸಿದ ಮೋಹನ್ ಲಾಲ್ 'ರಾಮ್' ಸಿನಿಮಾ

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗುತ್ತಿದೆ. ಮರಕ್ಕರ್, ದೃಶ್ಯಂ 2 ಹಾಗೂ ರಾಮ್ ಚಿತ್ರಗಳು ಶೂಟಿಂಗ್ ಮುಗಿಸಿದೆ. ಲಾಕ್‌ಡೌನ್ ಕಾರಣದಿಂದ ರಿಲೀಸ್ ವಿಳಂಬವಾಗಿದೆ.

ಬಹುನಿರೀಕ್ಷೆಯ ರಾಮ್ ಚಿತ್ರ ಈಗ ಡಬ್ಬಿಂಗ್ ಕೆಲಸ ಆರಂಭಿಸಿದೆ. ಈ ಕುರಿತು ಸ್ವತಃ ನಿರ್ದೇಶಕ ಜಿತು ಜೊಸೇಫ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದು, ಇತರೆ ಕಲಾವಿದರ ಜೊತೆ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ.

ರಾಮ್ ಸಿನಿಮಾದ ಪೋಸ್ಟರ್‌ನಿಂತ ಕುತೂಹಲ ಕಾಪಾಡಿಕೊಂಡಿರುವ ಚಿತ್ರತಂಡ ಬಹುಶಃ ಟೀಸರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಹೊಸ ವರ್ಷದ ಪ್ರಯುಕ್ತ ಟೀಸರ್ ಬರಬಹುದು ಎಂದು ಮೂಲಗಳು ಹೇಳಿದೆ.

Mohan Lals Ram Movie starts Dubbing Work

ಅಂದ್ಹಾಗೆ, ರಾಮ್ ಸಿನಿಮಾ ಆಕ್ಷನ್ ಡ್ರಾಮಾ ಆಗಿದ್ದು ಈ ಚಿತ್ರದಲ್ಲಿ ಮೋಹಲ್ ಲಾಲ್ ಪವರ್ ಫುಲ್ ಪಾತ್ರ ನಿಭಾಯಿಸುತ್ತಿದ್ದಾರೆ. ನೈಜ ಘಟನೆಯನ್ನಾಧರಿಸಿ ಕಥೆ ಮಾಡಲಾಗಿದೆಯಂತೆ.

ಮೋಹನ್ ಲಾಲ್ ಜೊತೆ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಅವರ ಪತ್ನಿ ಪಾತ್ರದಲ್ಲಿ ತ್ರಿಷಾ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಇಂದ್ರಜಿತ್ ಸುಕುಮಾರ್, ಬಾಲಿವುಡ್ ನಟ ಆದಿಲ್ ಹುಸೇನ್, ಪ್ರಾಚಿ ತೆಹ್ಲನ್, ಸಾಯಿ ಕುಮಾರ್, ಸಿದ್ದೀಕಿ, ದುರ್ಗ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Malayalam superstar Mohanlal starrer 'Ram' movie dubbing works starts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X