For Quick Alerts
  ALLOW NOTIFICATIONS  
  For Daily Alerts

  ಉನ್ನಿಕೃಷ್ಣನ್-ಮೋಹನ್ ಲಾಲ್ ಮುಂದಿನ ಚಿತ್ರದ ಬಜೆಟ್ ಎಷ್ಟು?

  |

  ಮಲಯಾಳಂ ಸ್ಟಾರ್ ನಿರ್ದೇಶಕ ಉನ್ನಿಕೃಷ್ಣನ್ ಜೊತೆ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತೊಮ್ಮೆ ಸಿನಿಮಾ ಮಾಡಲು ಮುಂದಾಗಿದ್ದು, ಈ ಚಿತ್ರ ಬಜೆಟ್ ಕುರಿತು ಚರ್ಚೆಯಾಗುತ್ತಿದೆ. 'ಪುಲಿಮುರುಗನ್' ಚಿತ್ರಕ್ಕೆ ಕಥೆ ಮಾಡಿದ್ದ ಉದಯ್ ಕೃಷ್ಣ ಈ ಕಾಂಬಿನೇಷನ್‌ಗೆ ಸ್ಕ್ರಿಪ್ಟ್ ಮಾಡುತ್ತಿದ್ದಾರೆ.

  ಸದ್ಯದ ಮಾಹಿತಿ ಪ್ರಕಾರ ಉನ್ನಿಕೃಷ್ಣನ್-ಮೋಹನ್‌ ಲಾಲ್ ಜೋಡಿಯ ಸಿನಿಮಾ 30 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಲಿದೆ. ಮೋಹನ್ ಲಾಲ್ ಅವರ ಹಲವು ಚಿತ್ರಗಳು ಇದೇ ಬಜೆಟ್‌ನಲ್ಲಿ ತಯಾರಾಗಿದೆ. ಆದರೂ ಮಲಯಾಳಂ ಇಂಡಸ್ಟ್ರಿಯ ದುಬಾರಿ ನಟ ಎನಿಸಿಕೊಂಡಿರುವ ಮೋಹನ್ ಲಾಲ್ ಚಿತ್ರದ ಬಜೆಟ್ ಇಷ್ಟೇನಾ ಎಂಬ ಮಾತು ಸಹ ಇದೆ.

  ಜಾಕಿ ಚಾನ್ ಜೊತೆ ಮೋಹನ್ ಲಾಲ್ ಸಿನಿಮಾ: ಶೀರ್ಷಿಕೆ ಬಹಿರಂಗ!ಜಾಕಿ ಚಾನ್ ಜೊತೆ ಮೋಹನ್ ಲಾಲ್ ಸಿನಿಮಾ: ಶೀರ್ಷಿಕೆ ಬಹಿರಂಗ!

  ಮೂಲಗಳ ಪ್ರಕಾರ, ಮೋಹನ್ ಲಾಲ್-ಬಿ ಉನ್ನಿಕೃಷ್ಣನ್ ಸಿನಿಮಾ ನವೆಂಬರ್ 2020ರಲ್ಲಿ ಪ್ರಾರಂಭವಾಗಲಿದೆ. ಗ್ರಾಮೀಣ ಹಿನ್ನೆಲೆ ಕಥೆ ಹೊಂದಿದ್ದು, ಸಂಪೂರ್ಣವಾಗಿ ಮನರಂಜನೆಯಿಂದ ಕೂಡಿರಲಿದೆ ಎಂದು ಹೇಳಲಾಗಿದೆ. ಆಯುಧ ಪೂಜೆಯ ಶುಭದಿನದಂದು ಅಧಿಕೃತವಾಗಿ ಈ ಸಿನಿಮಾ ಸೆಟ್ಟೇರಬಹುದು ಎಂಬ ನಿರೀಕ್ಷೆಯೂ ಇದೆ.

  ಈಗಾಗಲೇ ಉನ್ನಿಕೃಷ್ಣನ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್‌ನಲ್ಲಿ ಮಡಂಬಿ, ಗ್ರ್ಯಾಂಡ್ ಮಾಸ್ಟರ್, ಮಿಸ್ಟರ್ ಫ್ರಾಡ್, ಹಾಗೂ ವಿಲನ್ ಅಂತಹ ಚಿತ್ರಗಳು ಮೂಡಿ ಬಂದಿದೆ.

  Arjun Sarja : ಚಿರು ಮಗನನ್ನು ನೋಡಲು ಚೆನ್ನೈನಿಂದ ಹೋರಟ ಅರ್ಜುನ್ ಸರ್ಜಾ | Filmibeat Kannada

  ಈ ಚಿತ್ರಗಳ ಪೈಕಿ ಮಡಂಬಿ, ಗ್ರ್ಯಾಂಡ್ ಮಾಸ್ಟರ್ ಚಿತ್ರಗಳು ಕಮರ್ಷಿಯಲ್ ಆಗಿ ದೊಡ್ಡ ಸಕ್ಸಸ್ ಕಂಡಿದೆ. ಮಿಸ್ಟರ್ ಫ್ರಾಡ್ ಸಿನಿಮಾಗೆ ಭಾರಿ ಹಿನ್ನಡೆ ಆಗಿತ್ತು. ವಿಲನ್ ಚಿತ್ರ ಸಾಧಾರಣ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

  English summary
  Malayalam Superstar Mohanlal once again collaborating with director B Unnikrishnan for upcoming project. this movie Budget is Revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X