Just In
Don't Miss!
- News
ಕಾರ್ಕಳದ ಅಜೆಕಾರದಲ್ಲಿ ಬಡ ವಿದ್ಯಾರ್ಥಿನಿಗೆ ನವೀಕೃತ ಮನೆ ಹಸ್ತಾಂತರ
- Finance
ಅದಾನಿಗೆ ಆಘಾತ, ಯುಎಸ್ ಷೇರುಪೇಟೆಯಿಂದ ಹೊರಕ್ಕೆ
- Sports
ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ಗೆ 8 ವರ್ಷಗಳ ನಿಷೇಧ
- Automobiles
ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ದವಾದ ಚೀನಿ ಕಂಪನಿ ಬಿವೈಡಿ
- Lifestyle
ರಂಜಾನ್ 2021:ಉಪವಾಸದ ಸಂದರ್ಭದಲ್ಲಿ ನಿರ್ಜಲೀಕರಣದಿಂದ ದೂರವಿರಲು ತಪ್ಪಿಸಬೇಕಾದ ಆಹಾರಗಳು
- Education
CBSE Board Exams 2021: ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ದೇಶನಕ್ಕೆ ಕೈ ಹಾಕಿದ ಮೋಹನ್‌ಲಾಲ್: ಗುಡ್‌ಲಕ್ ಎಂದ ಅಮಿತಾಬ್
ನಟ ಮೋಹನ್‌ಲಾಲ್ ಅವರಿಗೆ ಈಗ 60 ವರ್ಷ ವಯಸ್ಸು. ಈಗಲೂ ಮಲಯಾಳಂನ ನಂಬರ್ 1 ನಟ. ಈಗಲೂ ಅವರ ಕೈಲಿ ಐದು ಸಿನಿಮಾಗಳಿವೆ.
ನಟನೆಗೆ ಎರಡು ರಾಷ್ಟ್ರಪ್ರಶಸ್ತಿ, ಒಂದು ವಿಶೇಷ ಜ್ಯೂರಿ ಅವಾರ್ಡ್, ಹಲವು ಫಿಲಂಫೇರ್, ಕೇರಳ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಈ ನಟ ಎಂದರೆ ಬಾಲಿವುಡ್ಡಿಗರಿಗೂ ಗೌರವ. ನಟನೆಯಲ್ಲಿ ಇನ್ನೂ ಉತ್ತುಂಗದಲ್ಲಿ ಇರುವಾಗಲೇ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಮೋಹನ್‌ಲಾಲ್.
ಮಲಯಾಳಿಗರ ಮೆಚ್ಚಿನ ಲಾಲೆಟ್ಟಾ ಮೋಹನ್‌ಲಾಲ್ ಮೊದಲ ಬಾರಿಗೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಕೆಲವಾರು ಸಿನಿಮಾಗಳು ನಿರ್ಮಾಣ ಮಾಡಿರುವ ಮೋಹನ್‌ಲಾಲ್ ನಿರ್ದೇಶಕರಾಗುತ್ತಿರುವುದು ಇದೇ ಮೊದಲು.
170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೋಹನ್‌ಲಾಲ್‌ಗೆ ಸಿನಿಮಾದ ಆಳ-ಅಗಲದ ಅರಿವಿದೆ. ನಟನೆಯ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಒಂದು ಭಿನ್ನ ಮಾದರಿಯ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಮೋಹನ್‌ಲಾಲ್. ಸಿನಿಮಾದ ಹೆಸರು 'ಬರ್ರೋಜ್; ನಿಧಿ ಕಕ್ಕುಮ್ ಭೂತಂ' ಎಂದು ಹೆಸರು.
ಹೆಸರು ವಿಚಿತ್ರವಾಗಿರುವಂತೆಯೇ ಕತೆಯೂ ಸಹ ಭಿನ್ನವಾಗಿಯೇ ಇರಲಿದೆ. ವಾಸ್ಕೋಡಿಗಾಮಾ ಭಾರತಕ್ಕೆ ಬಂದಾಗ ಹೂತಿಟ್ಟಿದ್ದ ಎನ್ನಲಾಗುವ ಸಂಪತ್ತನ್ನು ಕಾಯುವ ಭೂತದ ಕತೆ ಇದಾಗಿರಲಿದೆಯಂತೆ.
'ಬರ್ರೋಜ್; ಗಾರ್ಡಿಯನ್ ಆಫ್ ಡಿ'ಗಾಮಾಸ್ ಟ್ರೆಶರ್' ಎಂಬ ಕತೆಯನ್ನಾಧಿರಿಸಿದ ಸಿನಿಮಾ ಇದಾಗಿದೆ. ಕತೆಯನ್ನು ಜಿಜೊ ಪುನ್ನೋಸೆ ಬರೆದಿದ್ದಾರೆ. ಮೋಹನ್‌ಲಾಲ್ ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಚಿತ್ರಕತೆಯೂ ಅವರದ್ದೇ.
ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶಾಲ್ಯಾ ಮೆಕ್‌ಫ್ರೀ, ಸಾರಾ ವೆಗಾ ಇನ್ನೂ ಹಲವರು ಇರಲಿದ್ದಾರೆ. ಮೋಹನ್‌ಲಾಲ್ ಅವರ ಮಾಜಿ ಕಾರು ಚಾಲಕ ಆಂಟೊನಿ ಪೆರುಂಬವೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ