twitter
    For Quick Alerts
    ALLOW NOTIFICATIONS  
    For Daily Alerts

    ಐದೇ ದಿನಕ್ಕೆ 86 ಕೋಟಿ ಬಾಚಿದ ಹಿಂದಿ 'ದೃಶ್ಯಂ- 2': ಒಳ್ಳೆ ಛಾನ್ಸ್ ಮಿಸ್ ಮಾಡಿಕೊಂಡ್ರಾ ಮೋಹನ್ ಲಾಲ್?

    |

    'ದೃಶ್ಯಂ' ಈ ಸಿನಿಮಾ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ದಶಕದ ಹಿಂದೆ ಸೂಪರ್ ಹಿಟ್ ಆಗಿದ್ದ ಸಿನಿಮಾ ನಂತರ ಹಲವು ಭಾಷೆಗಳಿಗೆ ರೀಮೆಕ್ ಆಗಿ ಸಕ್ಸಸ್ ಕಂಡಿತ್ತು. ಸೀಕ್ವೆಲ್ ಹಿಟ್ ಆಗಿ ಅದರ ರೀಮೆಕ್‌ ಸಿನಿಮಾಗಳು ಸದ್ದು ಮಾಡ್ತಿವೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ - 2' ಹವಾ ಜೋರಾಗಿದೆ.

    ಅಜಯ್ ದೇವಗನ್, ಶ್ರಿಯಾ ಶರಣ್ ಹಾಗೂ ತಬು ನಟನೆಯ 'ದೃಶ್ಯಂ - 2' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಹಿಂದಿ ಚಿತ್ರರಂಗಕ್ಕೆ ಈ ಸಕ್ಸಸ್ ಟಾನಿಕ್ ನೀಡಿದಂತಾಗಿದೆ. 5 ದಿನಕ್ಕೆ ಸಿನಿಮಾ 86 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಚಿತ್ರವನ್ನು ಹಿಂದಿಯಲ್ಲಿ ಒಂದಷ್ಟು ಬದಲಾವಣೆಯೊಂದಿಗೆ ತೆರೆಗೆ ತರಲಾಗಿದೆ. ಬಾಲಿವುಡ್‌ನಲ್ಲಿ 'ದೃಶ್ಯಂ' ಪ್ರೀಕ್ವೆಲ್‌ಗಿಂತ ಸೀಕ್ವೆಲ್ ಸೂಪರ್ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿದೆ.

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?

    ಬಾಲಿವುಡ್‌ನಲ್ಲಿ 'ದೃಶ್ಯಂ - 2' ಸಕ್ಸಸ್ ನೋಡಿದ ಮೇಲೆ ಮೋಹನ್ ಲಾಲ್ ಒಳ್ಳೆ ಅವಕಾಶ ಮಿಸ್ ಮಾಡಿಕೊಂಡರಾ ಎನ್ನುವ ಚರ್ಚೆ ನಡೀತಿದೆ. ಥಿಯೇಟರ್‌ಗಳಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವ ಸಾಮರ್ಥ್ಯ ಇರುವ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಿ ತಪ್ಪಿ ಮಾಡಿಬಿಟ್ಟರು ಎಂದು ಕೆಲವರು ಹೇಳುತ್ತಿದ್ದಾರೆ.

    ನೇರವಾಗಿ ಓಟಿಟಿಗೆ 'ದೃಶ್ಯಂ- 2'

    ನೇರವಾಗಿ ಓಟಿಟಿಗೆ 'ದೃಶ್ಯಂ- 2'

    2013ರಲ್ಲಿ ಜಿತು ಜೋಸೆಫ್ ನಿರ್ದೇಶನದ ಮಲಯಾಳಂನ 'ದೃಶ್ಯಂ' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಒಂದು ಸಿಂಪಲ್ ಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. ಜಾರ್ಜ್‌ ಕುಟ್ಟಿಯಾಗಿ ಮೋಹನ್ ಲಾಲ್, ರಾಣಿ ಜಾರ್ಜ್ ಆಗಿ ಮೀನಾ ಮಿಂಚಿದ್ದರು. ಮಗಳು ಅಚಾನಕ್ ಆಗಿ ಮಾಡಿದ ಒಂದು ಕೊಲೆಯಿಂದ ತನ್ನ ಇಡೀ ಕುಟುಂಬವನ್ನು ರಕ್ಷಿಸಿಕೊಳ್ಳಲು ಜಾರ್ಜ್‌ ಕುಟ್ಟಿ ಮಾಡಿದ ಸಾಹಸವನ್ನು ನೋಡಿ ಪ್ರೇಕ್ಷಕರು ಬರಗಾಗಿದ್ದರು. 3 ವರ್ಷಗಳ ಹಿಂದೆ ಚಿತ್ರದ ಸೀಕ್ವೆಲ್ ಶುರುವಾಗಿತ್ತು. ಅಷ್ಟರಲ್ಲಿ ಕೊರೋನಾ ಹಾವಳಿ ಶುರುವಾಗಿ ಥಿಯೇಟರ್‌ಗಳು ಬಂದ್ ಆಗಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿದ್ದರು.

    ಒಳ್ಳೆ ಅವಕಾಶ ಮಿಸ್

    ಒಳ್ಳೆ ಅವಕಾಶ ಮಿಸ್

    ಜಿತು ಜೋಸೆಫ್ ಮತ್ತವರ ತಂಡ ಕೊಂಚ ತಾಳ್ಮೆಯಿಂದ ಕಾದಿದ್ದು ಮಲಯಾಳಂ 'ದೃಶ್ಯಂ-2' ಚಿತ್ರವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡಿದ್ದರೆ ಒಳ್ಳೆ ಕಲೆಕ್ಷನ್ ಆಗುತ್ತಿತ್ತು. ಕೆಲವರು ಇದು ಓಟಿಟಿಗೆ ಹೇಳಿ ಮಾಡಿಸಿದ ಸಿನಿಮಾ ಎಂದಿದ್ದರು. ಆದರೆ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಅದೇ ಸಿನಿಮಾ ಸದ್ದು ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಂಟೆಂಟ್ ಚೆನ್ನಾಗಿದ್ದರೆ, ಚಿತ್ರಕ್ಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಮರ್ಥ್ಯ ಇದ್ದರೆ ಬಾಕ್ಸಾಫೀಸ್‌ನಲ್ಲಿ ಗೆದ್ದೇ ಗೆಲ್ಲುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

    5 ದಿನಕ್ಕೆ 86 ಕೋಟಿ ಕಲೆಕ್ಷನ್

    5 ದಿನಕ್ಕೆ 86 ಕೋಟಿ ಕಲೆಕ್ಷನ್

    ಹಿಂದಿ 'ದೃಶ್ಯಂ-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಶುಕ್ರವಾರ 15.38 ಕೋಟಿ ಗಳಿಸಿದ್ದ ಸಿನಿಮಾ ಶನಿವಾರ 21.59 ಕೋಟಿ ಬಾಚಿತ್ತು. ಭಾನುವಾರ 27.17, ಸೋಮವಾರ 11.97 ಹಾಗೂ ಮಂಗಳವಾರ 10.48 ಕೋಟಿ ಕಲೆಕ್ಷನ್ ಮಾಡಿದೆ. ಆ ಮೂಲಕ 5 ದಿನಕ್ಕೆ ಒಟ್ಟು 86.49 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾಗಳು ಫಸ್ಟ್ ವೀಕೆಂಡ್ ನಂತರ ಸೋತುಬಿಡುತ್ತಿದ್ದವು. ಆದರೆ 'ದೃಶ್ಯಂ-2' ವೀಕೆಂಡ್‌ ನಂತರವೂ ಭರ್ಜರಿ ಕಲೆಕ್ಷನ್ ಮಾಡ್ತಿದೆ.

    'ದೃಶ್ಯ- 3' ಚಿತ್ರಕ್ಕೆ ಭರ್ಜರಿ ಪ್ಲ್ಯಾನ್

    'ದೃಶ್ಯ- 3' ಚಿತ್ರಕ್ಕೆ ಭರ್ಜರಿ ಪ್ಲ್ಯಾನ್

    ಜಿತು ಜೋಸೆಫ್ ಈಗಾಗಲೇ 'ದೃಶ್ಯಂ' ಸರಣಿಯ 3ನೇ ಚಿತ್ರಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಅಜಯ್ ದೇವಗನ್ ಕೂಡ ಕಥೆಯನ್ನು ಮುಂದುವರೆಸುವ ಲೆಕ್ಕಾಚಾರದಲ್ಲಿದ್ದಾರೆ. 2 ಬಾರಿ ಕುಟುಂಬವನ್ನು ರಕ್ಷಿಸಿಕೊಂಡಿರುವ ಜಾರ್ಜ್ ಕುಟ್ಟಿಗೆ ಮತ್ತೆ ಸಮಸ್ಯೆ ಎದುರಾಗುತ್ತಾ? ಅದನ್ನು ಹೇಗೆ ನಿಭಾಯಿಸುತ್ತಾನೆ? ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಕಥೆಯ ಸುಳಿವು ಬಿಟ್ಟುಕೊಡಬಾರದು ಎನ್ನುವ ಕಾರಣಕ್ಕೆ ಏಕಕಾಲಕ್ಕೆ ಹಿಂದಿ, ಮಲಯಾಳಂ ವರ್ಷನ್ ಸಿನಿಮಾಗಳನ್ನು ನಿರ್ಮಿಸಿ ಒಂದೇ ದಿನ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ.

    English summary
    Mohanlal's Drishyam 2 Missed 100 cr box office collection chance. Hindi Drishyam 2 Unstoppable on Box office. 10.48cr on 5th day. 5 Day Total 86.49 India Nett. Know More.
    Wednesday, November 23, 2022, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X