60ನೇ ವಯಸ್ಸಿನಲ್ಲಿ ಮೋಹನ್ ಲಾಲ್ ವರ್ಕೌಟ್: ವಿಡಿಯೋ ನೋಡಿ ಬೆರಗಾದ ಫ್ಯಾನ್ಸ್

ಕೆಲವು ನಟರಿಗೆ ವಯಸ್ಸು ಎನ್ನುವುದು ಕೇವಲ ನಂಬರ್ ಅಷ್ಟೇ....ಅಮಿತಾಭ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್ ಜೀವಂತ ಸಾಕ್ಷಿ ಎನ್ನಬಹುದು. 60 ದಾಟಿದ ಮೇಲೆ ಬೇಡಿಕೆ ಕಮ್ಮಿಯಾಗುವುದು, ನಟನೆಯಿಂದ ಹಿಂದೆ ಸರಿಯುವುದು, ಅವಕಾಶಗಳು ಕಡಿಮೆಯಾಗುವುದು ಸಹಜ.

ಆದ್ರೆ, ಮೋಹನ್ ಲಾಲ್ ವಿಚಾರದಲ್ಲಿ ಇದೆಲ್ಲವೂ ಬರಿ ಮಾತಷ್ಟೇ. ಈ ವಯಸ್ಸಿನಲ್ಲಿಯೂ ಬೆರಗುಗೊಳಿಸುವ ವರ್ಕೌಟ್ ಮಾಡ್ತಿದ್ದಾರೆ. ಈ ಈ ವಿಡಿಯೋ ನೋಡಿದ ಯುವ ನಟರು ಒಂದು ಕ್ಷಣ ಮೂಕವಿಸ್ಮಿತರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಮೋಹನ್ ಲಾಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. 3.11 ನಿಮಿಷದ ಈ ವಿಡಿಯೋದಲ್ಲಿ ಮೋಹನ್ ಲಾಲ್ ಜಿಮ್‌ನಲ್ಲಿ ನೋಡಬಹುದಾದ ಎಲ್ಲ ರೀತಿಯ ವರ್ಕೌಟ್ ಮಾಡಿದ್ದಾರೆ.

ಸಖತ್ ಫಿಟ್ ಹಾಗೂ ಆರೋಗ್ಯವಾಗಿ ಕಾಣುವ ನಟ ಮೋಹನ್ ಲಾಲ್ ''ಒಳ್ಳೆಯ ಆರೋಗ್ಯಕ್ಕಾಗಿ ಒಳ್ಳೆಯ ಅಭ್ಯಾಸ ಮುಂದುವರಿಸಿ, ವರ್ಕೌಟ್ ಮಾಡುವುದರಿಂದ ಆರೋಗ್ಯವಾಗಿರಬಹುದು'' ಎಂದು ಹೇಳಿದ್ದಾರೆ.

ಮೋಹನ್ ಲಾಲ್ ಅವರ ಸಿನಿಮಾ ವಿಚಾರಕ್ಕೆ ಬಂದ್ರೆ ಮರಕ್ಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೋಹನ್ ಲಾಲ್ ಜೊತೆ ಅರ್ಜುನ್ ಸರ್ಜಾ, ಮಂಜು ವಾರಿಯರ್, ಸುನೀಲ್ ಶೆಟ್ಟಿ, ಪ್ರಭು, ಕೀರ್ತಿ ಸುರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.

Mohanlal Workout Video Viral in Social Media

ಜಿತು ಜೋಸೆಫ್ ನಿರ್ದೇಶನದ ದೃಶ್ಯಂ 2 ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ರೆಡಿಯಿದೆ. ರಾಮ್ ಎಂಬ ಚಿತ್ರದಲ್ಲಿಯೂ ಮೋಹನ್ ಲಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ.

More from Filmibeat

English summary
Malayalam Superstar Mohanlal shares workout video in his facebook. 'Age is just a number for this man' said Netizens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X