For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಸೆಟ್ ಹಾಳು: ಭಜರಂಗದಳ ಜಿಲ್ಲಾಧ್ಯಕ್ಷನ ಬಂಧನ

  |

  ಸಿನಿಮಾ ಒಂದಕ್ಕಾಗಿ ಹಾಕಿದ್ದ ಸೆಟ್‌ನಲ್ಲಿ ದಾಂಧಲೆ ನಡೆಸಿ, ಸೆಟ್ ಅನ್ನು ಹಾಳುಗೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳ ಜಿಲ್ಲಾಧ್ಯಕ್ಷ ಸೇರಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

  ನಟ ಜಗ್ಗೇಶ್ 75 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಯಾಕೆ? ಹೇಗೆ? | Jaggesh | FILMIBEAT KANNADA

  ಕೇರಳದ ಪೆರಿಯಾರ್ ನದಿಯ ದಂಡೆಯಲ್ಲಿ ಮಲೆಯಾಳಂ ಸಿನಿಮಾ 'ಮಿನ್ನಲ್ ಮುರಲಿ' ಸೆಟ್ ಹಾಕಲಾಗಿತ್ತು. ಕೆಲವು ದುಷ್ಕರ್ಮಿಗಳು ಅದನ್ನು ಹಾಳೆಗೆಡವಿದ್ದಾರೆ.

  ಕೊರೊನಾ ಭೀತಿ ನಡುವೆಯೇ ಬಿಗ್‌ಬಾಸ್ ಸ್ಪರ್ಧಿಗೆ ಭರ್ಜರಿ ಸ್ವಾಗತ: ಬುಕ್ ಆಯ್ತು ಕೇಸ್ಕೊರೊನಾ ಭೀತಿ ನಡುವೆಯೇ ಬಿಗ್‌ಬಾಸ್ ಸ್ಪರ್ಧಿಗೆ ಭರ್ಜರಿ ಸ್ವಾಗತ: ಬುಕ್ ಆಯ್ತು ಕೇಸ್

  ಮಿನ್ನಲ್ ಮುರಲಿ ಸಿನಿಮಾಕ್ಕಾಗಿ ಚರ್ಚ್ ಮಾದರಿಯ ಸೆಟ್ ಅನ್ನು ಹಾಕಲಾಗಿತ್ತು. ಅದನ್ನು ದುಷ್ಕರ್ಮಿಗಳು ಸುತ್ತಿಗೆ ಇನ್ನಿತರ ಆಯುಧಗಳೊಂದಿಗೆ ಸೆಟ್‌ ಮೇಲೆ ದಾಳಿ ನಡೆಸಿ ಒಡೆದು ಹಾಕಿದ್ದಾರೆ. ಸೆಟ್ ಅನ್ನು ಒಡೆದು ಹಾಕುತ್ತಿರುವ ಚಿತ್ರಗಳನ್ನು ಚಿತ್ರದ ನಟ, ತಂತ್ರಜ್ಞರು ಹಂಚಿಕೊಂಡಿದ್ದಲ್ಲದೆ, ಸೆಟ್ ಒಡೆದುಹಾಕಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.

  ಖಂಡಿಸಿದ ಕೇರಳ ಸಿಎಂ ವಿಜಯನ್

  ಖಂಡಿಸಿದ ಕೇರಳ ಸಿಎಂ ವಿಜಯನ್

  ಕೇರಳ ಸಿಎಂ ಪಿಣರಾಯಿ ವಿಜಯನ್ ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, 'ಈ ರೀತಿಯ ಕೋಮು ಗಲಾಟೆಗೆ ಕೇರಳದಲ್ಲಿ ಜಾಗವಿಲ್ಲ. ಸೆಟ್ ಅನ್ನು ಲಕ್ಷಾಂತರ ವ್ಯಯಿಸಿ ಮಾರ್ಚ್‌ನಲ್ಲಿ ನಿರ್ಮಿಸಲಾಗಿತ್ತು, ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ಬಂದ್ ಮಾಡಲಾಗುತ್ತು. ಈಗ ಕೋಮುವಾದಿಗಳು ಸೆಟ್ ಅನ್ನು ಒಡೆದುಹಾಕಿದ್ದಾರೆ. ಆದರೆ ಕೇರಳ ರಾಜ್ಯ ಇದನ್ನು ಸಹಿಸುವುದಿಲ್ಲ' ಎಂದಿದ್ದಾರೆ.

  ಫೆಸ್‌ಬುಕ್‌ನಲ್ಲಿ ಪೋಸ್ಟ್‌

  ಫೆಸ್‌ಬುಕ್‌ನಲ್ಲಿ ಪೋಸ್ಟ್‌

  ಅಂತರಾಷ್ಟ್ರ ಹಿಂದು ಪರಿಷದ್ ಗೆ ಸೇರಿದ ಹರಿ ಪಲೋಡೆ ಎಂಬಾತ, ಸೆಟ್ ಅನ್ನು ಒಡೆದು ಹಾಕಿದ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು. ಭಜರಂಗದಳ ಜಿಲ್ಲಾ ಅಧ್ಯಕ್ಷನಿಗೆ ಫೇಸ್‌ಬುಕ್‌ನಲ್ಲಿ ಧನ್ಯವಾದ ಹೇಳಿದ್ದಾನೆ. ಇದರ ಆಧಾರದಲ್ಲಿ ಆತನನ್ನು ಜೊತೆಗೆ ಸೆಟ್ ಅನ್ನು ಒಡೆದು ಹಾಕಿದ ಇನ್ನೂ ಕೆಲವರನ್ನು ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

  ಲಾಕ್‌ಡೌನ್ ನಿಯಮ ಪಾಲಿಸಿ ಸರಳ ವಿವಾಹದ ಮೂಲಕ ಮಾದರಿಯಾದ ನಟಲಾಕ್‌ಡೌನ್ ನಿಯಮ ಪಾಲಿಸಿ ಸರಳ ವಿವಾಹದ ಮೂಲಕ ಮಾದರಿಯಾದ ನಟ

  ಸೆಟ್‌ ನ ಸಮೀಪದಲ್ಲಿ ದೇವಸ್ಥಾನ ಇತ್ತು

  ಸೆಟ್‌ ನ ಸಮೀಪದಲ್ಲಿ ದೇವಸ್ಥಾನ ಇತ್ತು

  ಸೆಟ್ ಅನ್ನು ನಿರ್ಮಾಣ ಮಾಡಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಮಹದೇವ ದೇವಸ್ಥಾನ ಇತ್ತು. ಹಾಗಾಗಿ ಸೆಟ್ ಅನ್ನು ತೆಗೆದು ಹಾಕುವಂತೆ ಭಜರಂಗದಳ ಮತ್ತು ಇನ್ನೂ ಕೆಲವು ಹಿಂದು ಸಂಘಟನೆಗಳು ಒತ್ತಾಯ ಹೇರಿದ್ದವು. ಕೊನೆಗೆ ಅವರೇ ಸುತ್ತಿಗೆ, ಪಿಕಾಸಿಗಳನ್ನು ಹಿಡಿದು ಸೆಟ್ ಅನ್ನು ಒಡೆದು ಹಾಕಿದ್ದಾರೆ.

  ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇತ್ತು

  ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇತ್ತು

  'ಮಿನಾಲ್ ಮುರಲಿ' ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು, ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಪೆರಿಯಾರ್ ನದಿಯ ದಂಡೆಯ ಮೇಲೆ ಚರ್ಚ್‌ ನ ಸೆಟ್ ಅನ್ನು ಮಾರ್ಚ್‌ನಲ್ಲಿ ಹಾಕಲಾಗಿತ್ತು. ಆದರೆ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ನಡೆಸಲಾಗದೆ, ಸೆಟ್ ಅನ್ನು ಹಾಗೆಯೇ ಬಿಡಲಾಗಿತ್ತು. ಈಗ ಅದನ್ನು ಒಡೆದು ಹಾಕಲಾಗಿದೆ.

  ಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿ

  English summary
  Minnal Murali movie set vandalized in Kerala. Bhajarangadal district president ans several arrested by the police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X