Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಲೆಗೆ ಅಂಟಿದ ಧರ್ಮ: ಮುಸ್ಲಿಂ ನೃತ್ಯಗಾರ್ತಿಗೆ ಅವಕಾಶ ನಿರಾಕರಿಸಿದ ದೇವಾಲಯ
ಕಲೆ ಧರ್ಮಾತೀತವಾದುದು, ಕಾಲಾತೀತವಾದುದು ಎಂಬುದೆಲ್ಲ ಇನ್ನು ಪುಸ್ತಕದ ಮಾತಾಗಿ ಉಳಿಯುವ ಕಾಲ ಸಮೀಪಿಸುತ್ತಿರುವ ಆತಂಕ ಎದುರಾಗಿದೆ.
ರಾಜಕೀಯ, ಸಾಮಾಜಿಕ ಜಾಲತಾಣಗಳಿಗಷ್ಟೆ ಸೀಮಿತವಾಗಿದ್ದ ಧರ್ಮ ಈಗ 'ಹಿಜಾಬು ವಿವಾದ'ದ ಮೂಲಕ ಶಾಲೆ-ಕಾಲೇಜುಗಳನ್ನು ಸೇರಿಕೊಂಡಿದೆ. ಧರ್ಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದ ಕಲೆಗೂ ಈಗ ಧರ್ಮ ಅಂಟಿಕೊಂಡಿದೆ.
The
Kashmir
Files:
'ದಿ
ಕಾಶ್ಮೀರ್
ಫೈಲ್ಸ್'
ಸಿನಿಮಾ
ನಿರ್ದೇಶಕನ
ವಿರುದ್ಧ
ದೂರು
ಭರತನಾಟ್ಯ ದೇವರನ್ನು ಪೂಜಿಸುವ ಸಾಧನಗಳಲ್ಲಿ ಒಂದು, ಭರತ ಮುನಿ ಸೃಷ್ಟಿಸಿದ ಈ ಅದ್ಭುತ ಕಲೆ ಭಾರತದ ಸಂಸ್ಕೃತಿಯ ಭಾಗವಾಗಿ ಶತಮಾನಗಳಿಂದಲೂ ಉಳಿದು, ಬೆಳೆದು ಬರುತ್ತಿದೆ. ದೇವರ ಆರಾಧನೆ, ಸಾತ್ವಿಕ ಮನೊರಂಜನೆಯಷ್ಟೆ ಉದ್ದೇಶವಾಗಿದ್ದ ಈ ಅದ್ಭುತ ಕಲೆಗೆ ಈಗ ಧರ್ಮ ಅಂಟಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಕೇರಳದ ತ್ರಿಶೂರ್‌ನ ಕೂಡಲಮಾಣಿಕ್ಯಂ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವತಿಯೊಬ್ಬಾಕೆ ಭರತ ನಾಟ್ಯ ಪ್ರದರ್ಶಿಸಬೇಕಿತ್ತು. ಆದರೆ ದೇವಾಲಯ ಆಡಳಿತ ಮಂಡಳಿ ಹಠಾತ್ತನೆ ಯುವತಿಯ ಭರತ ನಾಟ್ಯ ಕಾರ್ಯಕ್ರಮವನ್ನು ರದ್ದು ಮಾಡಿದೆ ಇದಕ್ಕೆ ಕಾರಣ ಯುವತಿಯ ಧರ್ಮ.
KGF
2
vs
Beast:
ಬೀಸ್ಟ್-ಕೆಜಿಎಫ್
ಕಾಳಗ
ಅಂತ್ಯ,
ಅಭಿಮಾನಿಗಳನ್ನು
ಒಂದು
ಮಾಡಿದ
ನೀಲ್-ನೆಲ್ಸನ್!
ಮುಸ್ಲಿಂ ಯುವತಿ ಮನ್ಸಿಯಾ ಭರತ ನಾಟ್ಯ ಕಲಾವಿದೆ. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಸಂಪಾದಿಸಿದ್ದಾರೆ. ಅವರು ಕೂಡಲಮಾಣಿಕ್ಯಂ ದೇವಾಲಯ ಆಯೋಜಿಸಿದ್ದ ಹತ್ತು ದಿನದ ರಾಷ್ಟ್ರೀಯ ಕಲಾ ಕಾರ್ಯಕ್ರಮದಲ್ಲಿ ಭರತ ನಾಟ್ಯ ಪ್ರದರ್ಶಿಸಬೇಕಿತ್ತು. ಅವರ ಹೆಸರನ್ನು ಒಳಗೊಂಡಂತೆ ಕಾರ್ಯಕ್ರಮ ಪಟ್ಟಿಯೂ ತಯಾರಾಗಿತ್ತು. ಆದರೆ ದೇವಾಲಯದ ಆಡಳಿತ ಮಂಡಳಿ, ಮನ್ಸಿಯಾಗೆ ಕರೆ ಮಾಡಿ ಅವರಿಗೆ ನೃತ್ಯ ಪ್ರದರ್ಶಿಸುವ ಅವಕಾಶ ನಿರಾಕರಿಸಿರುವುದಾಗಿ ಹೇಳಿದೆ.
RRR
ಕಾರಣಕ್ಕೆ
ಚಿತ್ರಮಂದಿರ
ಸಿಗದೆ
ಪರದಾಡುತ್ತಿರುವ
ಕನ್ನಡ
ಸಿನಿಮಾಗಳು!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮನ್ಸಿಯಾ, ''ಕಾರ್ಯಕ್ರಮದ ಆಯೋಜಕರು ನನಗೆ ಕರೆ ಮಾಡಿ ನೀವು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡುವಂತಿಲ್ಲ ಎಂದರು. ಏಕೆ ಎಂದು ಕೇಳಿದಾಗ, ಇತರ ಧರ್ಮೀಯರು ದೇವಾಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ ಎಂದರು. ಇದು ರಾಷ್ಟ್ರೀಯ ನೃತ್ಯೋತ್ಸವ ನಾನು ಪ್ರದರ್ಶನ ನೀಡಲೇ ಬೇಕು ಎಂದೆ. ನಾನು ಹುಟ್ಟಿನಿಂದ ಮುಸ್ಲಿಂ ಆದರೆ ಮೊದಲು ಮಾನವಳು'' ಎಂದಿದ್ದಾರೆ.

ನಾನು ಯಾವ ಧರ್ಮವನ್ನೂ ಪಾಲಿಸುವುದಿಲ್ಲ: ಮನ್ಸಿಯಾ
''ನಾನು ಮುಸ್ಲಿಂ ಆಗಿ ಹುಟ್ಟಿರಬಹುದು ಆದರೆ ನಾನು ಯಾವ ಧರ್ಮವನ್ನೂ ಪಾಲಿಸುವುದಿಲ್ಲ ಎಂದು ಅವರಿಗೆ ಹೇಳಿದೆ. 'ನೀವು ಹಿಂದುವನ್ನು ಮದುವೆ ಆಗಿದ್ದೀರಲ್ಲ ಹಾಗೆ ಹಿಂದು ಧರ್ಮಕ್ಕೆ ಮತಾಂತರ ಆಗಿ' ಎಂದು ಹೇಳಿದರು. ಆದರೆ ನಾನು ಯಾವ ಧರ್ಮಕ್ಕೂ ಮತಾಂತರ ಆಗುವ ಅವಶ್ಯಕತೆ ಇಲ್ಲ. ಏಕೆಂದರೆ ನಾನು ಯಾವ ಧರ್ಮವನ್ನೂ ಪಾಲಿಸುವುದಿಲ್ಲ'' ಎಂದಿದ್ದಾರೆ ಮನ್ಸಿಯಾ. ಸಂಗೀತಗಾರ ಶ್ಯಾಮ್ ಕಲ್ಯಾಣ್ ಅನ್ನು ಮನ್ಸಿಯಾ ವಿವಾಹವಾಗಿದ್ದಾರೆ.

ಕೇರಳದ ಘನತೆಗೆ ತಕ್ಕುದಾದುದಲ್ಲ: ಮನ್ಸಿಯಾ
''ನಿಮ್ಮ ನೃತ್ಯ ಚೆನ್ನಾಗಿಲ್ಲ ಎಂದು ಹೇಳಿದಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಕೇರಳ ರಾಜ್ಯ ಕಲಾವಿದರನ್ನು ಹಾಗೆಯೇ ನೋಡಿಕೊಂಡಿದೆ. ಆದರೆ ಧರ್ಮದ ಕಾರಣಕ್ಕೆ ಪ್ರದರ್ಶನಕ್ಕೆ ಅವಕಾಶ ನಿರಾಕರಿಸುವುದು ಕೇರಳದ ಘನತೆಗೆ ತಕ್ಕುದಾದುದಲ್ಲ. ನಾನು ಈ ವರೆಗೆ ಸಾಕಷ್ಟು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಹಲವು ದೇವಾಲಯಗಳಲ್ಲಿ ನಾನು ನೃತ್ಯ ಪ್ರದರ್ಶನ ನೀಡಿದ್ದೇನೆ. ಆದರೆ ಈ ಸನ್ನಿವೇಶವನ್ನು ಇದೇ ಮೊದಲ ಬಾರಿಗೆ ಎದುರಿಸುತ್ತಿದ್ದೇನೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಮನ್ಸಿಯಾ.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ್ ಮೆನನ್ ಮಾತು
ಕೂಡಲಮಾಣಿಕ್ಯಂ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ್ ಮೆನನ್ ಮಾತನಾಡಿ, ''ಕಾರ್ಯಕ್ರಮವು ದೇವಾಲಯದ ಆವರಣದ ಒಳಗೆ ನಡೆಯಲಿದೆ ಹಾಗಾಗಿ ದೇವಾಲಯದ ಸಂಪ್ರದಾಯ ಪಾಲನೆ ಮಾಡುವ ಸಲುವಾಗಿ ಅನ್ಯ ಧರ್ಮೀಯರು ಕಾರ್ಯಕ್ರಮ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ನಾವು ಕಾರ್ಯಕ್ರಮಕ್ಕೆ ನೀಡಿದ್ದ ಜಾಹೀರಾತಿನಲ್ಲಿ ಸಹ ಕೇವಲ ಹಿಂದುಗಳಷ್ಟೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬೇಕು ಎಂದು ನಮೂದಿಸಿದ್ದೆವು. ದೇವಾಲಯ ಆಡಳಿತ ಮಂಡಳಿ ಕಲಾವಿದರನ್ನು ಗೌರವಿಸುತ್ತದೆ. ಆದರೆ ಅದರ ಜೊತೆಗೆ ನಮಗೆ ದೇವಾಲಯದ ಸಂಪ್ರದಾಯವನ್ನೂ ಪಾಲಿಸಬೇಕಿದೆ'' ಎಂದಿದ್ದಾರೆ.
Recommended Video


ಯೇಸುದಾಸ್‌ಗೆ ದೇವಾಲಯದ ಪ್ರವೇಶ ನಿರಾಕರಿಸಲಾಗಿತ್ತು
ಕೇರಳದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದು ಮೊದಲೇನೂ ಅಲ್ಲ. ಭಾರತದ ಅತ್ಯುತ್ತಮ ಗಾಯಕರಲ್ಲಿ ಒಬ್ಬರಾಗಿರುವ ಯೇಸುದಾಸ್ ಅವರು ಗುರುವಾಯೂರ್‌ನ ಕೃಷ್ಣ ದೇವಾಲಯಕ್ಕೆ ಹೋಗಲು ಯತ್ನಿಸಿದಾಗ ಅವರು ಕ್ರಿಶ್ಚಿಯನ್ ಸಮುದಾಯದವರು ಎಂದು ಹೇಳಿ ಪ್ರವೇಶ ನಿರಾಕರಿಸಲಾಗಿತ್ತು. ಬಳಿಕ ದೇವಾಲಯದ ಬಾಗಿಲ ಹೊರಗೆ ನಿಂತು ಕೃಷ್ಣನ ಹಾಡುಗಳನ್ನು ಹಾಡಿದ್ದರು ಯೇಸುದಾಸ್. ಈ ಘಟನೆ ದೇಶವನ್ನೇ ಸೆಳೆದಿತ್ತು. ಗುರುವಾಯೂರು ಮಾತ್ರವಲ್ಲ ಇನ್ನೂ ಕೆಲವು ಕೇರಳ ದೇವಾಲಯಗಳಲ್ಲಿದ ಯೇಸುದಾಸ್‌ಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ಹಿಂದು ದೇವತೆಗಳ ಬಗ್ಗೆ ಬಹುವಾಗಿ ಭಕ್ತಿಯುಳ್ಳ ಯೇಸುದಾಸ್ ಪ್ರತಿವರ್ಷ ತಪ್ಪದೆ ಶಬರಿಮಲೆಗೆ ಹೋಗುತ್ತಾರೆ. ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಪ್ರತಿವರ್ಷ ಭೇಟಿ ನೀಡಿ ಕೀರ್ತನೆಗಳನ್ನು ಹಾಡುತ್ತಾರೆ. ಶಬರಿಮಲೆಯಲ್ಲಿ ಯೇಸುದಾಸ್ ಹಾಡಿರುವ 'ಹರಿವರಾತ್ಮಜಂ' ಹಾಡನ್ನು ಪ್ರತಿನಿತ್ಯ ಹಾಕಲಾಗುತ್ತದೆ.