For Quick Alerts
  ALLOW NOTIFICATIONS  
  For Daily Alerts

  ನಿತ್ಯಾ ಮೆನನ್ ಮತ್ತು ಪಾರ್ವತಿ ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್: ಆದರೆ ಇಬ್ಬರೂ ಗರ್ಭಿಣಿಯರಲ್ಲ!

  By ಫಿಲ್ಮಿಬೀಟ್ ಡೆಸ್ಕ್
  |

  ಮಲಯಾಳಂ ನಟಿಯರಿಬ್ಬರ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ಹಲ್‌ಚಲ್ ಎಬ್ಬಿಸಿದೆ. ನಿತ್ಯಾ ಮೆನನ್ ಹಾಗೂ ಪಾರ್ವತಿ ಇಬ್ಬರೂ ಒಂದು ಕಾಮನ್ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

  ನಿತ್ಯಾ ಮೆನನ್ ಹಾಗೂ ಪಾರ್ವತಿ ಇಬ್ಬರೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರೂ, ಕನ್ನಡಿಗರಿಗೂ ಚಿರಪರಿಚಿತ. ಇಬ್ಬರೂ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಹೀಗಾಗಿ ಕನ್ನಡಿಗರೂ ಕೂಡ ಇವರಿಬ್ಬರ ಹಂಚಿಕೊಂಡ ಫೋಟೊಗಳನ್ನಿಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ.

  ಇಷ್ಟು ಸಣ್ಣ ವಿಚಾರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ 'ಮಹಾನಟಿ' ಪಾತ್ರ ಕೈಬಿಟ್ಟಿದ್ರಾ ನಿತ್ಯಾ ಮೆನನ್?ಇಷ್ಟು ಸಣ್ಣ ವಿಚಾರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ 'ಮಹಾನಟಿ' ಪಾತ್ರ ಕೈಬಿಟ್ಟಿದ್ರಾ ನಿತ್ಯಾ ಮೆನನ್?

  ನಿತ್ಯಾ ಮೆನೆನ್ ಹಾಗೂ ಪಾರ್ವತಿ ಇಬ್ಬರೂ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನೂ ಮದುವೆ ಆಗದ ನಟಿಯರಿಬ್ಬರ ಈ ಫೋಟೊ ಸಹಜವಾಗಿಯೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಈ ಫೋಟೊ ಹಿಂದಿನ ಅಸಲಿ ಗುಟ್ಟೇನು? ತಿಳಿಯಲು ಮುಂದೆ ಓದಿ.

  ನಿತ್ಯಾ ಮೆನನ್-ಪಾರ್ವತಿ ಫೋಟೊ ರಹಸ್ಯ!

  ನಿತ್ಯಾ ಮೆನನ್-ಪಾರ್ವತಿ ಫೋಟೊ ರಹಸ್ಯ!

  ನಿತ್ಯಾ ಮೆನನ್ ಹಾಗೂ ಪೃಥ್ವಿ ಸಿನಿಮಾದ ನಾಯಕಿ ಪಾರ್ವತಿ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ದಿಢೀರನೇ ಒಂದೇ ದಿನ ಹಲ್‌ಚಲ್ ಎಬ್ಬಿಸುವಂತಹ ಇಂತಹದ್ದೊಂದು ಫೋಟೊಗಳನ್ನು ಶೇರ್ ಮಾಡಿದ್ದೇಕೆ? ಇಬ್ಬರೂ ಒಂದೇ ದಿನ ಫೋಟೊ ಹಂಚಿಕೊಂಡಿದ್ದೇಕೆ? ಇಬ್ಬರೂ ಗರ್ಭಿಣಿಯರಾಗಿದ್ದಾರಾ? ಇಂತಹದ್ದೇ ಒಂದಿಷ್ಟು ಗೊಂದಲಕ್ಕೆ ಇಬ್ಬರ ಅಭಿಮಾನಿಗಳೂ ಬಿದ್ದಿದ್ದಾರೆ.

  ಪ್ರೆಗ್ನೆನ್ಸಿ ಟೆಸ್ಟ್‌ ಫೋಟೊ ಗುಟ್ಟೇನು?

  ಪ್ರೆಗ್ನೆನ್ಸಿ ಟೆಸ್ಟ್‌ ಫೋಟೊ ಗುಟ್ಟೇನು?

  ಪಾರ್ವತಿ ಹಾಗೂ ನಿತ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಫೋಟೊ ಶೇರ್ ಮಾಡಿದ್ದರು. ಇದರೊಂದಿಗೆ " ಇಲ್ಲಿಂದ ಅದ್ಭುತದ ಆರಂಭ" ಎಂದು ಬರೆದುಕೊಂಡಿದ್ದರು. ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ. ಈ ಫೋಟೊಗಳನ್ನು ಹಂಚಿಕೊಂಡಿದ್ದರ ಹಿಂದಿನ ರಹಸ್ಯವೇನು? ಅನ್ನುವುದನ್ನು ಹುಡುಕಲು ಆರಂಭಿಸಿದ್ದಾರೆ. ಅಸಲಿಗೆ ಇವ್ರಿಬ್ಬರೂ ನಿಜವಾಗಲೂ ಗರ್ಭಿಣಿಯರಾಗಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ. ಅಂದ್ಹಾಗೆ, ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ ಆಕ್ಷನ್ ಕಟ್ ಹೇಳುತ್ತಿರೋ ಹೊಸ ಸಿನಿಮಾದ ಕಾನ್ಸೆಪ್ಟ್ ಪೋಸ್ಟರ್ ಇದು.

  ಬೆಂಗಳೂರು ಡೇಸ್ ನಿರ್ದೇಶಕಿಯ 'ವಂಡರ್‌ ವುಮನ್'

  ಬೆಂಗಳೂರು ಡೇಸ್ ನಿರ್ದೇಶಕಿಯ 'ವಂಡರ್‌ ವುಮನ್'

  ನಿತ್ಯಾ ಮೆನನ್ ಹಾಗೂ ಪಾರ್ವತಿ ಇಬ್ಬರೂ 2014ರ 'ಬೆಂಗಳೂರು ಡೇಸ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಅಂಜಲಿ ಮೆನನ್ ನಿರ್ದೇಶನ ಮಾಡಿದ್ದರು. ಇದೇ ಸ್ನೇಹದ ಮೇರೆಗೆ ನಿತ್ಯಾ ಹಾಗೂ ಪಾರ್ವತಿ ಇಬ್ಬರೂ ಅಂಜಲಿ ಮೆನನ್ ಹೊಸ ಸಿನಿಮಾ 'ವಂಡರ್ ವುಮನ್' ಕಾನ್ಸೆಪ್ಟ್ ಲುಕ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೊ ಮೂಲಕ ಸಿನಿಮಾ ಗರ್ಭಿಣಿ ಮಹಿಳೆಯರ ಕಥೆಯನ್ನು ಆಧರಿಸಿದೆ ಎನ್ನಲಾಗುತ್ತಿದೆ.

  ಪ್ರೆಗ್ನೆನ್ಸಿ ಟೆಸ್ಟ್‌ ಫೋಟೊ ಶೇರ್ ಮಾಡಿದ್ಯಾರು?

  ಪ್ರೆಗ್ನೆನ್ಸಿ ಟೆಸ್ಟ್‌ ಫೋಟೊ ಶೇರ್ ಮಾಡಿದ್ಯಾರು?

  ಕೇವಲ ನಿತ್ಯಾ ಮೆನನ್ ಹಾಗೂ ಪಾರ್ವತಿಯಷ್ಟೇ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್‌ ಫೋಟೊವನ್ನು ಶೇರ್ ಮಾಡಿಲ್ಲ. ಇವರೊಂದಿಗೆ ಬಾಲಿವುಡ್ ನಟಿ ಸ್ವರ ಭಾಸ್ಕರ್, ರಿಮಾ ಕಲ್ಲಿಂಗಲ್, ನಿರ್ಮಾಪಕಿ ಗುನೀತ್ ಮೊಂಗಾ, ಗಾಯಕಿ ಚಿನ್ಮಯಿ ಶ್ರೀಪಾದ ಮತ್ತು ಸ್ಟೈಲಿಸ್ಟ್ ಏಕ ಲಖಾನಿ ಜೊತೆ ಇನ್ನೂ ಹಲವು ಮಂದಿ ಈ ಪ್ರೆಗ್ನೆನ್ಸಿ ಕಿಟ್ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  English summary
  Nithya Menon And Parvathy Post Positive Pregnancy Tests Photo Goes Viral, Know More.
  Friday, October 28, 2022, 16:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X