For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ 'ಮಿಲನ' ನಟಿ

  |

  ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ, ರಾಷ್ಟ್ರಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸೂಪರ್ ಸ್ಟಾರ್ ನಟನ ವಿರುದ್ಧ ನಟಿಯೊಬ್ಬರು ಹಲವು ಆರೋಪಗಳನ್ನು ಮಾಡಿದ್ದಾರೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಮಲೆಯಾಳಂ ನಟಿ ಪಾರ್ವತಿ ತಿರುವೋತು ಅಲಿಯಾನ್ ಪಾರ್ವತಿ ಮಿಲ್ಟನ್ ಮಲೆಯಾಳಂ ಸಿನಿಮಾದ ಸೂಪರ್ ಸ್ಟಾರ್ ನಟನೊಬ್ಬನ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದು, 'ಚಿತ್ರೀಕರಣದ ಸೆಟ್‌ನಲ್ಲಿ ಆತನನ್ನು ಸಹಿಸಿಕೊಳ್ಳುವುದು ಕಷ್ಟ' ಎಂದಿದ್ದಾರೆ.

  ಮಿಲನ, ನಟಿ ಪಾರ್ವತಿ ತಿರುವೋತು ಇನ್ನೂ ಹಲವು ಆರೋಪಗಳನ್ನು ಸೂಪರ್ ಸ್ಟಾರ್ ನಟನ ವಿರುದ್ಧ ಮಾಡಿದ್ದಾರಾದರೂ, ಯಾರು ಆ ನಟ ಎಂದು ಹೆಸರು ಹೇಳಿಲ್ಲ. ಆದರೆ ಅಭಿಮಾನಿಗಳು, ಪಾರ್ವತಿ ತಿರುವೋತು ಯಾವ ನಟನ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದಾರೆ.

  'ಆ ನಟನ ವರ್ತನೆ ಸಹಿಸಿಕೊಳ್ಳುವುದು ಅಸಾಧ್ಯ'

  'ಆ ನಟನ ವರ್ತನೆ ಸಹಿಸಿಕೊಳ್ಳುವುದು ಅಸಾಧ್ಯ'

  'ಆ ಸೂಪರ್ ಸ್ಟಾರ್ ನಟನನ್ನು ಚಿತ್ರೀಕರಣದ ಸ್ಥಳದಲ್ಲಿ ಸಹಿಸಿಕೊಳ್ಳುವುದು ಅಸಾಧ್ಯ. ಆತನ ವರ್ತನೆಗಳು ವಿಚಿತ್ರವಾಗಿರುತ್ತವೆ. ಆತನ ವರ್ತನೆಗಳನ್ನು ಸಹಿಸಿಕೊಳ್ಳುವುದು ಕಷ್ಟ. ನಾನು ಈ ಹಿಂದೆ ಆತನೊಂದಿಗೆ ಕೆಲಸ ಮಾಡಿದ್ದಾಗ ಇದು ನನ್ನ ಅನುಭವಕ್ಕೆ ಬಂದಿತ್ತು' ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ ಪಾರ್ವತಿ ತಿರುವೋತು.

  ಮುಮ್ಮುಟಿ ಬಗ್ಗೆ ನಟಿಯ ಮಾತು

  ಮುಮ್ಮುಟಿ ಬಗ್ಗೆ ನಟಿಯ ಮಾತು

  ಪಾರ್ವತಿ ಆರೋಪ ಮಾಡಿದ ಸ್ಟಾರ್ ನಟ ಮುಮುಟ್ಟಿ ಬಗ್ಗೆಯಾಗಿದ್ದು. ಈ ಬಗ್ಗೆ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ. ಮುಮ್ಮುಟಿ ಅಭಿಮಾನಿಗಳು ಪಾರ್ವತಿ ವಿರುದ್ಧ ಬೈಗುಳಗಳ ಸುರಿಮಳೆ ಸುರಿಸುತ್ತಿದ್ದಾರೆ.

  'ಸ್ಟಾರ್ ನಟ ನನ್ನನ್ನು ಹುಚ್ಚಿ ಎಂದು ಕರೆದಿದ್ದರು'

  'ಸ್ಟಾರ್ ನಟ ನನ್ನನ್ನು ಹುಚ್ಚಿ ಎಂದು ಕರೆದಿದ್ದರು'

  'ಆ ಸ್ಟಾರ್ ನಟ ನನ್ನನ್ನು ಒಮ್ಮೆ 'ಹುಚ್ಚಿ' ಎಂದು ಕರೆದಿದ್ದರು. ನನ್ನನ್ನು ಪ್ರತಿಭಾವಂತ ನಟಿ ಮೀರಾ ಜಾಸ್ಮಿನ್‌ಗೆ ಹೋಲಿಸಿದ್ದ ಆ ನಟ. ಇಬ್ಬರೂ ಪ್ರತಿಭಾವಂತರು. ಆದರೆ ಇಬ್ಬರೂ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಎಂದಿದ್ದರು' ಎಂದು ಹೇಳಿದ್ದಾರೆ ಪಾರ್ವತಿ ತಿರುವೋತು.

  ಮುಮ್ಮುಟಿ ಸಿನಿಮಾ ಬಗ್ಗೆ ತೀವ್ರ ಅಸಮಾಧಾನ

  ಮುಮ್ಮುಟಿ ಸಿನಿಮಾ ಬಗ್ಗೆ ತೀವ್ರ ಅಸಮಾಧಾನ

  ಪಾರ್ವತಿ ತಿರುಪೋವು ತಮ್ಮ ಬಿಡು-ಬೀಸು ಮಾತುಗಳಿಗೆ ಖ್ಯಾತರು. 'ನಾನು ಇದ್ದದ್ದು ಇದ್ದಂತೆ ಮಾತನಾಡುತ್ತೇನೆ, ಹಾಗಾಗಿ ನನ್ನನ್ನು ಮಾನಸಿಕ ಸ್ಥಿಮಿತ ಇಲ್ಲದಾಕೆ ಎಂದು ಕರೆಯುತ್ತಾರೆ' ಎಂದಿದ್ದಾರೆ ಪಾರ್ವತಿ. ಈ ಹಿಂದೆ ಮುಮ್ಮುಟಿ ನಟನೆಯ 'ಕಸಬಾ' ಸಿನಿಮಾದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೆ ಅಲ್ಲದೆ, ಹಿಂಸೆ ವೈಭವೀಕರಿಸುವ ಆ ಪಾತ್ರವನ್ನು ಮಾಡಿದ್ದನ್ನು ಪ್ರಶ್ನೆ ಮಾಡಿದ್ದರು ಪಾರ್ವತಿ ತಿರುವೋತು.

  English summary
  Actress Parvathi Thiruvothu made allegation against Malyalam super star. Fans finds that she talking about Mummootty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X