For Quick Alerts
  ALLOW NOTIFICATIONS  
  For Daily Alerts

  ಕುಡಿದು ಕಾರು ಚಲಾಯಿಸಿ ಅಪಘಾತ: ನಟಿ-ನಟಿಯ ಗೆಳೆಯನ ಬಂಧನ

  |

  ನಟಿಯೊಬ್ಬಾಕೆ ತನ್ನ ಗೆಳೆಯನ ಜೊತೆ ಸೇರಿಕೊಂಡು ಚೆನ್ನಾಗಿ ಕುಡಿದು ಮತ್ತಿನಲ್ಲಿ ವಾಹನ ಚಲಾಯಿಸಿ ಐದು ವಾಹನಗಳಿಗೆ ಢಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದೆ.

  ನಟಿ ಅಶ್ವಥಿ ಬಾಬು (26) ಮತ್ತು ಆಕೆಯ ಗೆಳೆಯ ನೌಫಾಲ್ ಅವರುಗಳು ಕುಡಿದು ವಾಹನ ಚಲಾಯಿಸಿರುವ ಆರೋಪ ಎದುರಿಸುತ್ತಿದ್ದಾರೆ ಅವರನ್ನು ಕೇರಳದ ತ್ರಿಕ್ಕರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ತ್ರಿಕ್ಕಕರ ಹೆದ್ದಾರಿಯಲ್ಲಿ ಅಶ್ವಿಥಿ ಬಾಬು ಗೆಳೆಯ ನೌಫಾಲ್ ಅತ್ಯಂತ ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾನೆ. ಈ ವೇಳೆ ಒಂದು ವಾಹನಕ್ಕೆ ಢಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದ್ದಾನೆ ಆ ನಂತರ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ.

  ವಾಹನಕ್ಕೆ ಢಿಕ್ಕಿ ಹೊಡೆದು ಕಾರು ನಿಲ್ಲಿಸದೇ ಮುಂದೆ ಹೋದ ಕಾರಣ ಸ್ಥಳೀಯರು ತಮ್ಮ ವಾಹನಗಳಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಇದರಿಂದ ಭೀತಿಗೊಂಡು ಇನ್ನಷ್ಟು ವೇಗವಾಗಿ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿರುವ ನೌಫಾಲ್ ಇನ್ನಷ್ಟು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ.

  ಕಾರನ್ನು ನಿಲ್ಲಿಸಲು ಅಡ್ಡ ಬಂದ ವಾಹನಗಳ ಮೇಲೂ ನೌಫಾಲ್ ಕಾರು ಹತ್ತಿಸಲು ಯತ್ನಿಸಿದ್ದಾನೆ. ಕೊನೆಗೆ ಮುಂದೆ ಹೋಗಲಾರದ ಸ್ಥಿತಿ ನಿರ್ಮಾಣವಾದಾಗ ಕಾರನ್ನು ರಸ್ತೆಯಿಂದ ಕೆಳಗೆ ಇಳಿಸಿದ್ದಾನೆ ಆಗ ಕಾರಿನ ಚಕ್ರ ಒಡೆದು ಹೋಗಿದೆ. ಬಳಿಕ ಕಾರನ್ನು ಅಲ್ಲಿಯೇ ಬಿಟ್ಟು ನೌಫಾಲ್ ಹಾಗೂ ಕಾರಿನಲ್ಲಿದ್ದ ನಟಿ ಅಶ್ವಥಿ ಬಾಬು ಕಾರಿಳಿದು ಓಡಿ ಪರಾರಿಯಾಗಲು ಯತ್ನಿಸಿದ್ದಾರೆ ಆಗ ಸ್ಥಳೀಯರು ಅವರನ್ನು ಹಿಡಿದಿದ್ದಾರೆ. ಪೊಲೀಸರು ಸಹ ಅದೇ ಸಮಯಕ್ಕೆ ಸ್ಥಳಕ್ಕೆ ಬಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

  ಕಾರಿನಿಂದ ಇಳಿದ ಬಳಿಕವೂ ಅಶ್ವಥಿ, ನೌಫಾಲ್ ಅನ್ನು ತಪ್ಪಿಸಿಕೊಳ್ಳುಲು ಸಹಾಯ ಮಾಡಲು ಯತ್ನಿಸಿದ್ದಾಳೆ. ಕೊನೆಗೆ ಇಬ್ಬರೂ ಅಲ್ಲಿಯೇ ಇದ್ದ ಶಾಲೆಯೊಂದರ ಒಳಗೆ ಓಡಿದ್ದಾರೆ. ಆದರೆ ಜನ ಅವರನ್ನು ಹಿಂಬಾಲಿಸಿ ವಾಗ್ವಾದ ಮಾಡಿದ್ದಾರೆ. ಪೊಲೀಸರು ಬಂದು ಮೊದಲಿಗೆ ನೌಫಾಲ್ ಅನ್ನು ಮಾತ್ರವೇ ವಶಕ್ಕೆ ಪಡೆದಿದ್ದಾರೆ ಬಳಿಕ ಅವರ ಹಳೆಯ ಪ್ರಕರಣಗಳ ಮಾಹಿತಿ ತಿಳಿದ ಬಳಿಕ ನಟಿ ಅಶ್ವಥಿಯನ್ನೂ ವಶಕ್ಕೆ ಪಡೆದಿದ್ದಾರೆ.

  ಅಶ್ವಥಿ ಹಾಗೂ ನೌಫಾಲ್ ಇಬ್ಬರನ್ನು 2018 ರಲ್ಲಿ ಮಾದಕ ವಸ್ತು ಎಂಡಿಎಂಎ ಡ್ರಗ್ಸ್ ಹೊಂದಿದ್ದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅದಕ್ಕೂ ಮುಂಚೆ 2016 ರಲ್ಲಿ ಅಶ್ವಥಿಯನ್ನು ದುಬೈನಲ್ಲಿ ಡ್ರಗ್ಸ್ ಪ್ರಕರಣದಲ್ಲಿಯೇ ಬಂಧಿಸಲಾಗಿತ್ತು.

  ಅಶ್ವಥಿ ಹಾಗೂ ನೌಫಾಲ್ ಇಬ್ಬರೂ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹೊರಗೆ ಬಂದ ಬಳಿಕವೂ ಅದರ ಬಳಕೆ, ವ್ಯಾಪಾರ ನಿಲ್ಲಿಸಿರಲಿಲ್ಲ ಎಂಬುದು ತ್ರಿಕ್ಕರ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮಾದಕ ವ್ಯಸನ ಮಾಡಲು ಹಣಕ್ಕೆ ಕೆಲವು ಅನೈತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಸಹ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ನಟಿ ಅಶ್ವಥಿ ಬಾಬು ತಿರುವನಂತಪುರಂನ ಅರಟ್ಟುವಳಿಯವರಾಗಿದ್ದಾರೆ.

  English summary
  Police arrested actress Ashwathy Babu and her friend Naoufal for drunken drive in Kerala's Trikakkara.
  Friday, July 29, 2022, 22:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X