For Quick Alerts
  ALLOW NOTIFICATIONS  
  For Daily Alerts

  'ಅಂಧಾದುನ್' ಮಲಯಾಳಂ ರೀಮೇಕ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆ

  |

  2018ರ ಬಾಲಿವುಡ್ ಸೂಪರ್ ಹಿಟ್ ಚಿತ್ರ ಅಂಧಾದುನ್ ರೀಮೇಕ್ ಮಾಡಲು ದಕ್ಷಿಣ ಇಂಡಸ್ಟ್ರಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಪಕರು ಈ ಚಿತ್ರ ರೀಮೇಕ್ ಮಾಡಲು ಮುಂದಾಗಿದೆ.

  ಸದ್ಯದ ಮಾಹಿತಿ ಪ್ರಕಾರ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಅಂಧಾದುನ್ ರೀಮೇಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ರವಿ ಕೆ ಚಂದ್ರನ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ, ಆಯುಷ್ಮಾನ್ ಖುರಾನ್ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಲು ಸಹಿ ಮಾಡಿದ್ದಾರೆ ಎಂದು ಸುದ್ದಿಯನ್ನು ಮಲಯಾಳಂ ದೈನಂದಿನ ಪತ್ರಿಕೆಯೊಂದು ವರದಿ ಮಾಡಿದೆ. ಮುಂದೆ ಓದಿ....

  'ಅಂಧಾದುನ್' ತಮಿಳು ರೀಮೇಕ್‌ನಲ್ಲಿ ಐಶ್ವರ್ಯ ರೈ ನಟನೆ!

  ಟಬು ಪಾತ್ರದಲ್ಲಿ ಯಾರು?

  ಟಬು ಪಾತ್ರದಲ್ಲಿ ಯಾರು?

  ಮೂಲ ಚಿತ್ರದಲ್ಲಿ ಟಬು ನಿರ್ವಹಿಸಿದ್ದ ವಿಲನ್ ಪಾತ್ರದಲ್ಲಿ ಮಮತಾ ಮೋಹನ್‌ದಾಸ್ ನಟಿಸಬಹುದು ಎನ್ನಲಾಗಿದೆ. ಇನ್ನು ರಾಧಿಕಾ ಆಪ್ಟೆ ನಟಿಸಿದ್ದ ಪಾತ್ರದಲ್ಲಿ ಅಹನಾ ಕೃಷ್ಣ ಬಣ್ಣ ಹಚ್ಚುವ ಸಾಧ್ಯತೆ ಇದೆ. ಈ ಎರಡು ಚಿತ್ರಕ್ಕೆ ಬಹಳ ಪ್ರಧಾನವಾಗಿರುವವರ ಪಾತ್ರಗಳು.

  2021ಕ್ಕೆ ಅಧಿಕೃತವಾಗಿ ಆರಂಭ

  2021ಕ್ಕೆ ಅಧಿಕೃತವಾಗಿ ಆರಂಭ

  ಈ ಪ್ರಾಜೆಕ್ಟ್ ಬಗ್ಗೆ ನಟ ಪೃಥ್ವಿರಾಜ್ ಆಗಲಿ ಅಥವಾ ರವಿ ಕೆ ಚಂದ್ರನ್ ಆಗಲಿ ಇದುವರೆಗೂ ಅಧಿಕೃತ ಮಾಡಿಲ್ಲ. ಸದ್ಯದ ವರದಿ ಪ್ರಕಾರ 2021ರ ಜನವರಿಯಲ್ಲಿ ಈ ಪ್ರಾಜೆಕ್ಟ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ, ಮುಂದಿನ ವರ್ಷ ಪೃಥ್ವಿ ರಾಜ್ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ಆರಂಭಿಸಲಿದ್ದಾರೆ.

  'ಕೋಲ್ಡ್ ಕೇಸ್' ಚಿತ್ರೀಕರಣ ಆರಂಭಿಸಿದ ಪೃಥ್ವಿರಾಜ್ ಸುಕುಮಾರನ್

  ತೆಲುಗು ಮತ್ತು ತಮಿಳಿನಲ್ಲೂ ರೀಮೇಕ್

  ತೆಲುಗು ಮತ್ತು ತಮಿಳಿನಲ್ಲೂ ರೀಮೇಕ್

  ತಮಿಳಿನಲ್ಲಿ ಈ ಚಿತ್ರವನ್ನು ನಟ-ನಿರ್ಮಾಪಕ ತ್ಯಾಗರಾಜ್ ನಿರ್ಮಾಣ ಮಾಡಲಿದ್ದು, ಪ್ರಶಾಂತ್ ಮತ್ತು ಐಶ್ವರ್ಯ ರೈ ಅವರನ್ನು ಈ ಚಿತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದ್ದಾರೆ. ತೆಲುಗಿನಲ್ಲಿ ನಿತೀನ್, ರಮ್ಯಾಕೃಷ್ಣ ಹಾಗೂ ಕೀರ್ತಿ ಸುರೇಶ್ ಅವರ ಹೆಸರುಗಳು ಚರ್ಚೆಯಲ್ಲಿದೆ.

  ಏರ್ ಪೋರ್ಟ್ ಗೆ ಆಗಮಿಸಿದ Nora Fatehi | Filmibeat Kannada
  ರಾಷ್ಟ್ರ ಪ್ರಶಸ್ತಿ ಸಿನಿಮಾ

  ರಾಷ್ಟ್ರ ಪ್ರಶಸ್ತಿ ಸಿನಿಮಾ

  ಅಂದ್ಹಾಗೆ, ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ ಅಂಧಾದುನ್ ಚಿತ್ರ 2019ನೇ ಸಾಲಿನಲ್ಲಿ ಮೂರು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಹಿಂದಿ ಸಿನಿಮಾ, ಅತ್ಯುತ್ತಮ ನಟ ಹಾಗು ಅತ್ಯುತ್ತಮ ಎರವಲು ಚಿತ್ರಕಥೆಗೆ ಪ್ರಶಸ್ತಿ ಪಡೆದಿದೆ.

  English summary
  Mollywood actor Prithviraj Sukumaran to play lead role In Andhadhun malayalam Remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X