Don't Miss!
- News
ವಿದ್ಯುತ್ ಕ್ಷೇತ್ರದ ಖಾಸಗೀಕರಣ; ಸಿದ್ದರಾಮಯ್ಯ ಕಿಡಿ
- Sports
Asia Cup 2022: ದಿನೇಶ್ ಕಾರ್ತಿಕ್ ಉತ್ತಮ ಫಿನಿಶರ್ ಆದರೆ, ನಿಜವಾದ ಫಿನಿಶರ್ಗಳು ಬೇರೆ; ಕ್ರಿಸ್ ಶ್ರೀಕಾಂತ್
- Lifestyle
ಚೀನಾದಲ್ಲಿ ಹೊಸ ಲಂಗ್ಯಾ ವೈರಸ್ ಪತ್ತೆ..! ಇದು ಸಾಂಕ್ರಾಮಿಕವೇ..? ಮಾರಣಾಂತಿಕವೇ..?
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಯಮ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Technology
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂ ಬ್ಯಾನ್!
ನಟಿ ರಶ್ಮಿಕಾ ಮಂದಣ್ಣ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅಭಿನಯದ 'ಸೀತಾ ರಾಮಂ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳ ಸಾಲಿನಲ್ಲಿ ಈ ಸಿನಿಮಾ ಕೂಡ ಒಂದು. ಚಿತ್ರ ಟ್ರೈಲರ್ ಮತ್ತು ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾ ರಿಲೀಸ್‌ಗೂ ಮುನ್ನವೆ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ.
ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ನಾಳೆ (ಆಗಸ್ಟ್ 5) ಬಿಡುಗಡೆ ಆಗಲಿದೆ. ಆದರೆ ರಿಲೀಸ್‌ಗೂ ಮುನ್ನವೇ ಚಿತ್ರತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. 'ಸೀತಾ ರಾಮಂ' ಸಿನಿಮಾದ ವಿರುದ್ಧ ಬ್ಯಾನ್ ಕೂಗು ಕೇಳಿ ಬರ್ತಿದೆ.
ಕೆಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ವಿಷಯಗಳಿವೆ ಎಂದು ಚಿತ್ರ ಬಿಡುಗಡೆಗೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆಯಂತೆ. ವರದಿಯ ಪ್ರಕಾರ ಕುವೈತ್, ಖತಾರ್, ಸೌದಿ ಅರೇಬಿಯಾ, ಬಹ್ರೇನ್, ಓಮನ್ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರವನ್ನು ಬ್ಯಾನ್ ಮಾಡಿರುವುದಾಗಿ ತಿಳಿದುಬಂದಿದೆ.
ಲೆಫ್ಟಿನೆಂಟ್ ರಾಮ್ ಎನ್ನುವ ವ್ಯಕ್ತಿಯ ಜೀವನದ ಒಳನೋಟವನ್ನು ನೀಡುತ್ತದೆ. ಆ ವ್ಯಕ್ತಿ ಕಾಶ್ಮೀರ ಕಣಿವೆಯಲ್ಲಿ ಒಂಟಿ ಸೈನಿಕನಾಗಿ ಗಸ್ತು ತಿರುಗುತ್ತಿರುವ ಅನಾಥ. ಅವನಿಗಾಗಿ, ಅವನ ಬಗ್ಗೆ ಕೇಳಲು ಯಾರೂ ಇಲ್ಲ, ಅವನಿಗೆ ಪತ್ರ ಬರೆಯಲು ಯಾರೂ ಇಲ್ಲ ಎನ್ನಲಾಗುತ್ತದೆ. ಎಲ್ಲರೂ ಹಾಗೆಯೇ ಅಂದುಕೊಂಡಿರುತ್ತಾರೆ. ಆದರೆ ಒಂದು ದಿನ ಅವನಿಗೆ ತನ್ನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿಯಿಂದ ಸರಣಿ ಪತ್ರಗಳು ಬರುತ್ತದೆ. ಇಲ್ಲಿಂದ ಕಥೆಗೆ ಟ್ವಿಸ್ಟ್ ಸಿಗುತ್ತದೆ.

ಸೀತಾ ರಾಮಂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು, ರಶ್ಮಿಕಾ ಮಂದಣ್ಣ ಜೊತೆ ದುಲ್ಕರ್ ಸಲ್ಮಾನ್ , ಮೃಣಾಲ್ ಠಾಕೂಲ್ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ. ಇನ್ನು, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರವು ಚಿತ್ರದಲ್ಲಿನ ಬಹುಮುಖ್ಯ ಪಾತ್ರವಾಗಿದೆ ಎಂದು ನಿರ್ದೇಶಕರು ಈಗಾಗಲೇ ತಿಳಿಸಿದ್ದಾರೆ.