Just In
Don't Miss!
- News
ಕೊರೊನಾ ಲಸಿಕೆ ಪಡೆದವರೂ ಸೋಂಕು ಹರಡಬಹುದು: ತಜ್ಞರು
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 24ರ ಚಿನ್ನ, ಬೆಳ್ಳಿ ದರ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೆಕ್ಕಿ ಕುಟ್ಟಿದ ಭಟ್ಟರ ಜಾಕಿ ರಿಮಿಕ್ಸ್ ಸಾಂಗ್
ಯೋಗರಾಜ್ ಭಟ್ ಅವರ ಕ್ಷಮೆಕೋರಿ ಅಥವಾ ಅವರ ಕೃಪೆ ಕೋರುತ್ತಾ ಜಾಕಿ ಚಿತ್ರದ ಮಾಸ್ ಸಾಂಗ್ "ಶಿವ ಅಂತ ಹೋಗುತ್ತಿದ್ದೆ "ಸಾಹಿತ್ಯಕ್ಕೆ ಸಾಫ್ಟ್-ವೇರ್ ಶೈಲಿಯಲ್ಲಿ ಮಿಕ್ಸ್ ಮಾಡಿ ಅನುಭವಾಮೃತದಿಂದ ಪದಗಳ ಹೊಸೆದಿದ್ದೇನೆ. ಒಪ್ಪಿಸಿಕೊಳ್ಳಿ ಸಾಫ್ಟ್ ವೇರ್ ರಿಮಿಕ್ಸ್ ಹಾಡು!
* ಅಮರನಾಥ್.ವಿ.ಬಿ, ಸಾಫ್ಟ್ ವೇರ್ ಇಂಜಿನಿಯರ್, ಬೆಂಗಳೂರು
ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
ಮ್ಯಾನೇಜರ್ ಬಂದ್ರು ಸೈಡಿನಲಿ
ಕಣ್ಣು ಕಣ್ಣು ಬಿಟ್ಟಂಗಾಯಿತು ನೋಡುತಲಿ
ಚಾಕು ತಂದು ಚುಚ್-ದಂಗಾಯಿತು ಹಾರ್ಟಿನಲಿ
ಉಸಿರು ಹಿಡಿದು ಎಳ್ದಂಗಾಯಿತು ಮೂಗಿನಲಿ
ಮ್ಯಾನೇಜರ್ ಕುಂತಾಗ ಛೇರಿನಲಿ
ಛೇರಿನಲಿ... ಛೇರಿನಲಿ... ಛೇರಿನಲಿ
ಎದ್ದು ಊಟಕ್ಕೆ ಹೋಗಂಗಿಲ್ಲ
ಮನೆಗೆ ಫೋನು ಮಾಡಂಗಿಲ್ಲ
ಎದ್ದು ಊಟಕ್ಕೆ ಹೋಗಂಗಿಲ್ಲ...ಮನೆಗೆ ಫೋನು ಮಾಡಂಗಿಲ್ಲ
ಅಯ್ಯೋ ನಂಗೆ ಯಾಕೆ ಇಷ್ಟು ಹಸಿವು
ಎಷ್ಟು ತಿಂದ್ರು ಯಾಕೆ ಹೀಗೆ ಕಾಡುವುದು
ನನ್ನ ಮಾತು ಕೇಳಲಿಲ್ಲ
ಚೂರು ಸಹನೆ ತೋರಲಿಲ್ಲ... ಹಸಿವು ಕಣ್ಣಿಗೆ ಕಾಣಲಿಲ್ಲ
ನನ್ನ ಮಾತು ಮೀರಿ ನಡೆದುಕೊಂಡು
ತಡ ಮಾಡದೆ ಮೇಲು ಕಳಿಸಿ ಬಿಟ್ರು
ಹೊಟ್ಟೆಪಾಡಿಗಾಗಿ ಕೆಲ್ಸ ನಂದು
ಹೊಟ್ಟೆಪಾಡಿಗಾಗಿ ಕೆಲ್ಸ ನಂದು
ಹೊಟ್ಟೆಯೇ ಕಾಣಂಗಿಲ್ಲ ಮ್ಯಾನೇಜರ್ರಿಗೆ ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರು
ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
ಮ್ಯಾನೇಜರ್ ಬಂದರು ಸೈಡಿನಲಿ
ಉಣ್ಣಲಿಲ್ಲ.. ತಿನ್ನಲಿಲ್ಲ.. ರಾತ್ರೋ ರಾತ್ರಿ.. ಕೆಲಸವೇ
ಉಣ್ಣಲಿಲ್ಲ.. ತಿನ್ನಲಿಲ್ಲ.. ರಾತ್ರೋ ರಾತ್ರಿ.. ಕೆಲಸ
ಕುಂತು ಬಿಟ್ರು ಪಕ್ಕದ ಛೇರಿನಲಿ
ಹೊಟ್ಟೆ ತುಂಬಿಸ್ಕೋ ಬೇಕು ನೀರು ಕುಡಿಯುತಲಿ
ನನ್ನ ಹೇಂಡ್ತಿ... ಒಬ್ಳೇ ಮನೇಲಿ
ನನ್ನ ಹೇಂಡ್ತಿ ಒಬ್ಳೇ ಮನೇಲಿ ಕಾದು ಕಾದು ಮಲ್ಗೇ ಬಿಟ್ಳು
ಈಜಿಯಾಗಿ ಹೇಗೆ ನಾನು ಸಂತೈಸಲಿ ಅದರಲ್ಲು ಮಧ್ಯರಾತ್ರಿ ಹೋಗುತಲಿ
ಬೇಗ ಮನೆಗೆ ಬರ್ಲೆ ಬೇಕು ಊಟ ಸಿಗಲು
ಬೇಗ ಮನೆಗೆ ಬರ್ಲೆ ಬೇಕು ಊಟ ಸಿಗಲು
ಇಂಥಾ ಕೆಲ್ಸ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರು
ಮನೆಗೋಗದೆ ಕೆಲ್ಸ ಮಾಡುತ್ತಿದ್ದೆ ಕೂತಲ್ಲಿ
ಸಿಕ್ಕಾಪಟ್ಟೆ ಪ್ರೆಜರ್ರು ಇತ್ತು ಆಫೀಸಿನಲಿ
ಹೆಂಡತಿ ಕರೆ ಬರ್ತಾಯಿತ್ತು ಫೋನಿನಲಿ
ಮ್ಯಾನೇಜರ್ ಬಂದರು ಸೈಡಿನಲಿ