»   »  ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ

ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ

By: *ನಿಸ್ಮಿತಾ
Subscribe to Filmibeat Kannada
Raaj The Showman audio review
ಬ್ಯಾನರ್: ಸೀತಾಭೈರವೇಶ್ವರ ಪ್ರೊಡಕ್ಸನ್ಸ್
ನಿರ್ಮಾಪಕ: ಸುರೇಶ್ ಗೌಡ, ಪಿ ಎಸ್ ಶ್ರೀನಿವಾಸಮೂರ್ತಿ
ನಿರ್ದೇಶನ: ಪ್ರೇಮ್
ಕ್ಯಾಸೆಟ್ ವಿತರಕರು: ಅಶ್ವಿನಿ ಡಿಜಿಟಲ್ ಆಡಿಯೊ
ಗೀತರಚನೆಕಾರರು: ವಿ. ನಾಗೇಂದ್ರಪ್ರಸಾದ್, ಪ್ರೇಮ್ ಮತ್ತು ಕವಿರಾಜ್
ಹಾಡಿರುವವರು: ಟಿಪ್ಪು, ಶಂಕರ್ ಮಹಾದೇವನ್, ಶ್ರೇಯಾಘೋಷಾಲ್, ಕೃಷ್ಣಬರುವಾ, ಪ್ರೇಮ್
ಸಂಗೀತ: ವಿ.ಹರಿಕೃಷ್ಣ

ಶ್ರೇಯಾಘೋಷಾಲ್ ಹಾಡಿರುವ "ಪೋಲಿ ಇವನೂ" ಮತ್ತು ಪ್ರೇಮ್, ಶ್ರೇಯಾ ಹಾಡಿರುವ "ರಾಜಾ ಹೇಳುವಾಗೆಲ್ಲ" ಹಾಡುಗಳು ಇಂಪಾಗಿವೆ. ಈ ಎರಡು ಹಾಡಿನ ಸಾಹಿತ್ಯಕೂಡಾ ಚೆನ್ನಾಗಿದೆ. ಪಡ್ಡೆ ಹುಡುಗರಿಗೋಸ್ಕರ ಟಿಪ್ಪು ಹಾಡಿರುವ "ಹೇ ಹೇ ಪಾರೂ" ಮತ್ತು ಶಂಕರ್ ಮಹಾದೇವನ್ ಹಾಡಿರುವ "ಮುತ್ತುರಾಜ್ ಕಾಲಿಟ್ಟ" ಹಾಡುಗಳಿವೆ. ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ.

ಡಾ. ರಾಜ್ ಅವರ ಜನಪ್ರಿಯ ಹಾಡು 'ಬೆಳ್ಳಿ ಮೂಡಿತೋ ಕೋಳಿ ಕೂಗಿತೊ...'(ಕವಿರತ್ನ ಕಾಳಿದಾಸ), ಶಂಕರ್ ನಾಗ್ ಅವರ 'ಸಂತೋಷಕ್ಕೆ ಹಾಡು ಸಂತೋಶಕ್ಕೆ' (ಗೀತಾ), ಅಂಬರೀಷ್ ಅವರ 'ನಾನು ಯಾರು ಯಾವ ಊರು...'(ಅಂತ), ವಿಷ್ಣುವರ್ಧನ್ ಅವರ 'ಪ್ರೇಮದ ಕಾದಂಬರಿ...'(ಬಂಧನ) ಹಾಗೂ ರವಿಚಂದ್ರನ್ ಅವರ 'ಲೋಕವೇ ಹೇಳಿದ ಮಾತಿದು...'(ಪ್ರೇಮಲೋಕ) ಈ ಎಲ್ಲಾ ಜನಪ್ರಿಯ ಹಾಡಿನ ತುಣುಕುಗಳನ್ನು ಒಂದು ಹಾಡಿನಲ್ಲಿ ಅಳವಡಿಸಿಕೊಂಡಿದ್ದಾರೆ.

ಕೊನೆ ಹನಿ: ರಾಜೇಶ್ ಕೃಷ್ಣನ್, ನಂದಿತಾ, ಹೇಮಂತ್, ಕ್ಯಾಸೆಟ್ ಸಂಸ್ಥೆ ಮಾಲೀಕ ವೇಲು ಮುಂತಾದವರ ಪ್ರತಿಭಟನೆಯ ನಡುವೆಯೂ ಕನ್ನಡದ ಯಾವ ಗಾಯಕ/ಗಾಯಕಿಯರಿಂದಲೂ (ನಿರ್ದೇಶಕ ಪ್ರೇಮ್ ಹೊರತು ಪಡಿಸಿ)ಒಂದೇ ಒಂದು ಹಾಡು ಹಾಡಿಸದೆ ಅವರನ್ನು ಕಡೆಗಣಿಸಿದ್ದು ವಿಪರ್ಯಾಸ.

ಪೂರಕ ಓದಿಗೆ
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada