For Quick Alerts
  ALLOW NOTIFICATIONS  
  For Daily Alerts

  ಚಿರು ಹಾಡು ಕೇಳಿ ಚಿನ್ನದ ನಾಣ್ಯ ಗೆಲ್ಲಿ

  By Mahesh
  |

  ಹೋಗ್ರಿ ಹೋಗ್ರಿ ಇನ್ನೂ ರಿಲೀಸ್ ಆಗ್ದೆ ಇರೋ ಸಿನಿಮಾ ಸಿಡಿ ಬಿಟ್ಟಿ ಕೋಡ್ತಾ ಇದ್ದರಾ..ಏನು ಪ್ಲಾನ್ ಇರ್ಬೇಕು..ಹಾಡು ಕೇಳಿದ್ರೆ ಚಿನ್ನದ ನಾಣ್ಯನಾ? ಯಾವುದ್ರಿ ಅದು ಫಿಲ್ಮಂ ಹೀಗೆ ಸಾಗಿತ್ತು, ಬೆಳ್ಳಂಬೆಳ್ಳಗೆ ದಿನಪತ್ರಿಕೆ ಕೈಲಿ ಹಿಡಿದುಕೊಂಡ ನಾಗರೀಕರಿಬ್ಬರ ಮಾತಿನ ವರಸೆ.

  ಹೌದು, ಇಂದಿನ ಉದಯವಾಣಿ ದಿನಪತ್ರಿಕೆ ಜೊತೆಗೆ ಚಿರಂಜೀವಿ ಸರ್ಜಾ ಅಭಿನಯದ 'ಚಿರು' ಚಿತ್ರದ ಧ್ವನಿ ಸುರುಳಿ ಉಚಿತವಾಗಿ ನೀಡಲಾಯಿತು. ಸಾಮಾನ್ಯವಾಗಿ ಹೊಸ ನಾಯಕ ನಾಯಕಿಯರಿರುವ ಚಿತ್ರದಲ್ಲಿ ಈ ರೀತಿಯ ಗಿಮಿಕ್ ಸಾಮಾನ್ಯ.

  ಆದರೆ, ಮಹೇಶ್ ಬಾಬು ನಿರ್ದೇಶನವಿರುವ ಈ ಚಿತ್ರದ ಆಡಿಯೋ ಕ್ಯಾಸೆಟ್ ಈ ರೀತಿ ಹಂಚಿದ್ದು ಯಾಕೆ ಇನ್ನೂ ಯಕ್ಷ ಪ್ರಶ್ನೆ. ಮಾರ್ಸ್ ಫಿಲಂಸ್ ಲಾಂಛನದಲ್ಲಿ, ಸುರೇಶ್ ಜೈನ್ ನಿರ್ಮಾಣದ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನವಿರುವ ಚಿತ್ರದಲ್ಲಿ ಐದು ಹಾಡುಗಳಿವೆ.

  ವಾಯುಪುತ್ರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚಿರಂಜೀವಿ ಸರ್ಜಾ ಅವರ ಗಂಡೆದೆ ಇತ್ತೀಚಿಗೆ ಪ್ರದರ್ಶನ ಕಂಡಿದೆ. ಚಿರು ಚಿತ್ರದಲ್ಲಿ ಕೃತಿ ಖರಬಂಧ ಮುಖ್ಯ ಭೂಮಿಕೆಯಲ್ಲಿದ್ದಾರೆ.

  ಈ ಆಡಿಯೋ ಸಿಡಿಯನ್ನು ಕೊಂಡು ಹಾಡುಗಳನ್ನು ಕೇಳಿ ಆನಂದಿಸುತ್ತಾ ನಿಮ್ಮ ಇಷ್ಟದ ಹಾಡಿನ ಸಾಲುಗಳ ಮೊದಲ 3 ಸಾಲನ್ನು CHIRRU (ನಿಮ್ಮ ಇಷ್ಟವಾದ ಹಾಡು) ಟೈಪ್ ಮಾಡಿ 9591349222ಗೆ SMS ಕಳುಹಿಸಿ.

  ಆ.3 ರ ಸಂಜೆ 6 ಗಂಟೆಯೊಳಗೆ ನಿಮ್ಮ ಎಸ್ ಎಂಎಸ್ ತಲುಪಬೇಕು. ನಮ್ಮ ಕರೆ ನಿಮಗೆ ತಲುಪುವಾಗ ಚಿರು ಚಿತ್ರದ ಹಾಡು ನಿಮ್ಮ ಹಲೋ ಟ್ಯೂನ್ ಆಗಿರಬೇಕು. ವಿಜೇತರಿಗೆ ಚಿನ್ನದ ನಾಣ್ಯಗಳು ಸಿಗುತ್ತವೆ ಎಂದು ಚಿರು ಚಿತ್ರತಂಡ ಪ್ರಕಟಿಸಿದೆ. ಧ್ವನಿಸುರಳಿಯಲ್ಲಿ ಹಲೋಟ್ಯೂನ್ ಅಳವಡಿಸಿಕೊಳ್ಳಲು ಬೇಕಾದ ಕೋಡ್ ಕೂಡಾ ಇದೆ.

  ಜಯಂತ್ ಕಾಯ್ಕಿಣಿ, ಗೌಸ್ ಪೀರ್, ರಾಮ್ ನಾರಾಯಣ್ ಹಾಗೂ ಮಹೇಶ್ ಬಾಬು ಗೀತೆ ರಚನೆ ಹೊಂದಿರುವ ಹಾಡುಗಳನ್ನು ಕೇಳಿ ಸಿನಿರಸಿಕರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು. ಚಿನ್ನದ ನಾಣ್ಯದ ಜೊತೆಗೆ ಲ್ಯಾಪ್ ಟಾಪ್, ಮೊಬೈಲ್..ಇತ್ಯಾದಿ ನಿಮಗಾಗಿ ಕಾದಿದೆ. ಹೆಚ್ಚಿನ ವಿವರಗಳಿಗೆ ಚಿರು ವೆಬ್ ತಾಣ ನೋಡಿ

  ಅಂದಹಾಗೆ, ಇಂದು ದಿನಪತ್ರಿಕೆ ಜೊತೆ ಬಂದ ಸಿಡಿಗಳಲ್ಲಿ ಬಹುತೇಕ ಪೇಪರ್ ಹುಡುಗರ ಕೈ ಸೇರಿವೆ. ಕಾಳಸಂತೆಯಲ್ಲಿ 5 ರುಗೆ ಒಂದರಂತೆ ಭರ್ಜರಿ ಮಾರಾಟವಾಗಿದೆ ಎಂದು ಸುದ್ದಿ ಸಿಕ್ಕಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X