»   » ಅಂತರ್ಜಾಲದಲ್ಲಿ ಎ ಆರ್ ರೆಹಮಾನ್ ಗೆ ಜೈ ಹೋ

ಅಂತರ್ಜಾಲದಲ್ಲಿ ಎ ಆರ್ ರೆಹಮಾನ್ ಗೆ ಜೈ ಹೋ

Posted By:
Subscribe to Filmibeat Kannada

ಮೊಬೈಲ್ ಫೋನ್ ಕಂಪನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ಖ್ಯಾತ ಸಂಗೀತ ಸಂಯೋಜಕ ರೆಹಮಾನ್ ಬಗ್ಗೆ ಅಚ್ಚರಿಯ ವಿಷಯವೊಂದು ಬೆಳಕುಕಂಡಿದೆ. ಅಂತರ್ಜಾಲದಲ್ಲಿ ಅತ್ಯಧಿಕ ಡೌನ್ ಲೋಡ್ ಮಾಡಲ್ಪಟ್ಟ ಭಾರತೀಯ ಕಲಾವಿದ ಎಂಬ ಅಂಶ ಬಹಿರಂಗವಾಗಿದೆ.

ಬಾಲಿವುಡ್ ಸಂಗೀತವನ್ನು ಅತ್ಯಧಿಕವಾಗಿ ಡೌನ್ ಮಾಡುವ ದೇಶಗಳಲ್ಲಿ ಬ್ರಿಟನ್ ಗೆ ಮೊದಲ ಸ್ಥಾನ ಧಕ್ಕಿದೆ. ರೆಹಮಾನ್ ನಂತರದ ಜನಪ್ರಿಯರಲ್ಲಿ ಗಾಯಕರಲ್ಲಿ ಸೋನು ನಿಗಂ, ಜೊಜೊ, ಹಿಮೇಶ್ ರೇಷ್ಮಿಯಾ, ಶಾನ್, ಉದಿತ್ ನಾರಯಣ್, ಆಶಾ ಭೋಂಸ್ಲೆ, ಕಿಶೋರ್ ಕುಮಾರ್ ಮತ್ತು ಸಲಿಂ ಸುಲೈಮಾನ್ ಇದ್ದಾರೆ.

ಡೌಲ್ ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಸಿಂಗಪುರ, ಪಿನ್ ಲ್ಯಾಂಡ್, ಜರ್ಮನಿ, ಆಸ್ಟ್ರೇಲಿಯಾ, ಯುಎಇ, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ ಲ್ಯಾಂಡ್, ಮೆಕ್ಸಿಕೊ ಮತ್ತು ರಷ್ಯಾ ಸ್ಥಾನ ಪಡೆದಿದೆ. ಒಟ್ಟಿನಲ್ಲಿ ಈ ಸಮೀಕ್ಷೆಯಿಂದ ರೆಹಮಾನ್ ಗೆ ಅಂತರ್ಜಾಲದಲ್ಲೂ ಅಭಿಮಾನಿಗಳು ಜೈ ಹೋ ಎನ್ನುತ್ತಿರುವುದು ಸಾಬೀತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada