»   »  ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ

ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ

Posted By: *ಜಯಂತಿ
Subscribe to Filmibeat Kannada

ಇಪ್ಪತ್ತು ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಸಿನಿಮಾ ಕ್ಯಾಸೆಟ್, ಸೀಡಿಗಳನ್ನು ಮಾರುತ್ತಾ ಬಂದಿರುವ ಆದಿತ್ಯಾ ಆಡಿಯೋ ಕಂಪೆನಿ ಕನ್ನಡಕ್ಕೆ ಕಾಲಿಟ್ಟಿದೆ; ದುಬಯ್ ಬಾಬು ಚಿತ್ರದ ಮೂಲಕ. ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ನಾಯಕ ಉಪೇಂದ್ರ ತಮಗಿರುವ ಕಾಂಟಾಕ್ಟನ್ನು ಮುಂದುಮಾಡಿ ಈ ಬೆಳವಣಿಗೆಗೆ ಕಾರಣರಾಗಿದ್ದಾರೆ.

ಕನ್ನಡ ಸಿನಿಮಾಗಳ ಸಂಗೀತ ಈಗ ತುಟ್ಟಿಯ ಬಾಬತ್ತು. ಹಾಡುಗಳ ಧ್ವನಿಮುದ್ರಣ ಮುಗಿಸುವ ಹೊತ್ತಿಗೇ ಮೂವತ್ತೈದು ನಲವತ್ತು ಲಕ್ಷ ಕೈಬಿಟ್ಟಿರುತ್ತದೆ. ಶೈಲೇಂದ್ರ ಬಾಬು ಮೊದಲೇ ಅದ್ದೂರಿತನ ಬಯಸುವವರ ಪೈಕಿ. ಅವರೇ ಹೇಳಿಕೊಳ್ಳುವಂತೆ ದುಬಯ್ ಬಾಬು ದುಬಾರಿ ಬಾಬು ಆಗಿದೆ. ಆದಿತ್ಯಾ ಆಡಿಯೋ ಕಂಪೆನಿಯ ಜೊತೆ ಯಾವ ರೀತಿಯ ಡೀಲ್ ಆಗಿದೆ ಅನ್ನೋದು ಮಾತ್ರ ರಹಸ್ಯ.

ಆದರೆ, ಕನ್ನಡ ಆಡಿಯೋ ಜಗತ್ತಿಗೆ ಅದು ಕಾಲಿಟ್ಟಿದೆ ಎಂಬುದು ಬೇರೆ ಆಡಿಯೋ ಕಂಪೆನಿಗಳ ಕಣ್ಣು, ಕಿವಿ ತೆರೆಸಿದರೆ ಸಾಕು. ಬಿಗ್ ಮ್ಯೂಸಿಕ್‌ನಂಥ ಕಂಪೆನಿ ಕೂಡ ಹಿಂದೆ ಕನ್ನಡ ಕನ್ನಡ ಅಂತ ಬಂದಿತ್ತು. ಈಗ ಯಾಕೋ ಅದು ತಣ್ಣಗಾಗಿಬಿಟ್ಟಿದೆಯಲ್ಲ. ಆದಿತ್ಯಾ ಕಂಪೆನಿ ಇಲ್ಲಿ ಏನು ಕಿಸಿಯುತ್ತದೋ ನೋಡೋಣ ಅಂತ ಸ್ಥಳೀಯ ಆಡಿಯೋ ಕಂಪೆನಿಯ ಒಬ್ಬರು ಈಗಾಗಲೇ ಗುಟುರು ಹಾಕಿರುವ ಸುದ್ದಿಯೂ ಹೊರಬಿದ್ದಿದೆ.

ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ
ಬಾಲಿವುಡ್ ನಟ ಆರ್ಯನ್ ವೈದ್ ಕನ್ನಡ ಪ್ರೇಮ
ಎಲ್ಲಾ ಓಕೆ ಮೀಸೆ ಯಾಕೆ ಎಂದ ದುಬೈ ಬಾಬು!
ಹದಿನೇಳರ ಗೆಟಪ್ಪಿನಲ್ಲಿ ಉಪೇಂದ್ರ ಅವತಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada