»   » ಉಲ್ಲಾಸ ಉತ್ಸಾಹದಿಂದ ಬಾಲಿವುಡ್ ಗೆ ಜಿವಿ

ಉಲ್ಲಾಸ ಉತ್ಸಾಹದಿಂದ ಬಾಲಿವುಡ್ ಗೆ ಜಿವಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಬರುವ ರಿಮೇಕ್ ಚಿತ್ರ ಉಲ್ಲಾಸ ಉತ್ಸಾಹಕ್ಕೆ ಸಂಗೀತ ನೀಡಿರುವ ಜಿವಿ ಪ್ರಕಾಶ್ ಬಾಲಿವುಡ್ ಗೆ ಹಾರಲಿದ್ದಾರೆ. ಸೋದರ ಮಾವ ಖ್ಯಾತ ಸಂಗೀತಗಾರ ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರಂತೆ ಬಾಲಿವುಡ್ ನಲ್ಲೂ ತಮ್ಮ ಸಂಗೀತದ ಛಾಪು ಮೂಡಿಸಲು ಜಿವಿ ತಯಾರಾಗುತ್ತಿದ್ದಾರೆ.

ಮೈ ಹೂಂ ನಾ, ಓಂ ಶಾಂತಿ ಓಂ ಖ್ಯಾತಿಯ ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರ ಪತಿ ಶಿರಿಷ್ ಕುಂದರ್ ನಿರ್ದೇಶನದ ಹೊಸ ಚಿತ್ರಕ್ಕೆ ಜಿವಿ ಪ್ರಕಾಶ್ ಅವರನ್ನು ಸಂಗೀತ ನಿರ್ದೇಶಕರಾಗಿ ಆರಿಸಲಾಗಿದೆ. ಜಾನ್ ಅಬ್ರಹಾಂ ಈ ಚಿತ್ರದ ನಾಯಕರಾಗುವ ಸಾಧ್ಯತೆಗಳಿವೆ. ಇದಲ್ಲದೆ ವಿಕ್ರಮ್ ಭಟ್ ನಿರ್ಮಾಣದ ಚಿತ್ರವೊಂದಕ್ಕೆ ಕೂಡ ಜಿವಿ ಸಂಗೀತ ನೀಡುವ ಸಾಧ್ಯತೆಗಳಿವೆ.

ಈಗಾಗಲೇ ಅತ್ಯಂತ ಕಿರಿಯ ಸಂಗೀತ ನಿರ್ದೇಶಕ ಎಂದು ಹೆಸರಾಗಿರುವ ಜಿವಿ ಪ್ರಕಾಶ್, ತಮಿಳು, ತೆಲುಗು, ಕನ್ನಡ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಆಯಿರತ್ತಿಲ್ ಒರುವನ್, ಉಲ್ಲಾಸಂಗಾ ಉತ್ಸಾಹಂಗಾ ಇವರು ಸಂಗೀತ ನೀಡಿದ ಪ್ರಮುಖ ಯಶಸ್ವಿ ಚಿತ್ರಗಳು. 23ರ ಹರೆಯದ ಈ ಯುವ ನಿರ್ದೇಶಕನ ತಾಯಿ, ರೆಹಮಾನ್ ಅವರ ಅಕ್ಕ ಎಆರ್ ರೆಹಾನಾ ಅವರು ಇತ್ತೀಚೆಗೆ ಯೋಗೀಶ್ ಅಭಿನಯದ 'ಯೋಗಿ' ಚಿತ್ರದಲ್ಲಿ ಒಂದು ಗೀತೆ ಹಾಡಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada