»   »  ದೇವರು ಕೊಟ್ಟ ತಂಗಿ ಧ್ವನಿಸುರುಳಿ ಹಿಟ್!

ದೇವರು ಕೊಟ್ಟ ತಂಗಿ ಧ್ವನಿಸುರುಳಿ ಹಿಟ್!

Subscribe to Filmibeat Kannada

ಸಾಯಿಪ್ರಕಾಶ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದೇವರು ಕೊಟ್ಟ ತಂಗಿ' ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳೆಲ್ಲಾ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಇದೀಗ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಕಳೆದ ತಿಂಗಳು ಬಿಡುಗಡೆಯಾದ ಚಿತ್ರದ ಧ್ವನಿಸುರುಳಿಗಳು ರಾಜ್ಯಾದ್ಯಂತ ಭರ್ಜರಿ ಮಾರಾಟ ಕಂಡು ಕ್ಯಾಸೆಟ್ ಕಂಪೆನಿಗೆ ಈಗಾಗಲೇ ಲಾಭ ತಂದುಕೊಟ್ಟಿವೆ.

ನಾಯಕನಾಗಿ ಶಿವರಾಜ್‌ಕುಮಾರ್, ತಂಗಿಯಾಗಿ ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಗೂ ನಾಯಕಿಯಾಗಿ ಚೆನ್ನೈ ಹುಡುಗಿ ಮೋನಿಕಾ ಅಭಿನಯಿಸಿದ್ದಾರೆ. ವಿಶೇಷ ಎಂದರೆ, ಈ ಇಬ್ಬರೂ ನಟಿಯರು ರಾಜ್ಯಪ್ರಶಸ್ತಿ ಪಡೆದವರು. ಇದು ಶಿವಣ್ಣ - ಸಾಯಿಪ್ರಕಾಶ್ ಜೋಡಿಯ 9ನೇ ಚಿತ್ರ.

ಮಾಲೀಕನ ಮನೆಗೆ ತನ್ನ ತಂಗಿ ಸೊಸೆಯಾಗಿ ಬಂದ ಮೇಲೆ ಅಲ್ಲಿ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು. ಈ ಅಣ್ಣ-ತಂಗಿ ಬಡವರಾದರೂ ಹೃದಯ ಶ್ರೀಮಂತಿಕೆ ಉಳ್ಳವರಾಗಿರುತ್ತಾರೆ. ರಾಜಮ್ಮ ಸಾಯಿಪ್ರಕಾಶ್ ಅವರ ನಿರ್ಮಾಣದ ಈ ಚಿತ್ರಕ್ಕೆ ಬಿ.ಎ. ಮಧುರವರ ಸಂಭಾಷಣೆ, ಆರ್. ಗಿರಿ ಅವರ ಛಾಯಾಗ್ರಹಣ ಹಾಗೂ ಕೌರವ್ ವೆಂಕಟೇಶ್‌ರವರ ಸಾಹಸ ಸಂಯೋಜನೆ ಇದೆ.

ಚಿತ್ರದ ಆರು ವಿಭಿನ್ನ ಹಾಡುಗಳಿಗೆ ಹಂಸಲೇಖರ ಸಾಹಿತ್ಯ-ಸಂಗೀತ ಇದೆ. ಶಿವಾನಿಯ ಸೂರಜ್ ತಂಗಿಯ ಗಂಡನಾಗಿ ಅಲ್ಲದೆ, ಅವಿನಾಶ್, ಸುಮಿತ್ರಾ, ಸಾಧು ಕೋಕಿಲಾ, ಎಂ.ಎನ್. ಲಕ್ಷ್ಮೀದೇವಿ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada