»   » ನನಗಿನ್ನೂ 18 ವರ್ಷ: ಲತಾ ಮಂಗೇಶ್ಕರ್

ನನಗಿನ್ನೂ 18 ವರ್ಷ: ಲತಾ ಮಂಗೇಶ್ಕರ್

Subscribe to Filmibeat Kannada

ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಫ್ರಾನ್ಸ್ ನ ಅತ್ಯ್ಯುನ್ನತ ನಾಗರಿಕ ಪ್ರಶಸ್ತಿ 'Officier de la Legion d'Honneur' ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಲತಾ ಮಂಗೇಶ್ಕರ್ ಮಾತನಾಡುತ್ತಾ, ಕಳೆದ ಸೆಪ್ಟೆಂಬರ್ ವೇಳೆಗೆ ನನಗೆ 81 ವರ್ಷ ತುಂಬಿತು. ಆದರೆ ಮಾನಸಿಕವಾಗಿ ನಾನಿನ್ನೂ ಯವ ವಯಸ್ಸಿನಲ್ಲಿದ್ದೇನೆ. ಹಾಗಾಗಿ 81ಕ್ಕೆ ಬದಲಾಗಿ ಅಂಕಿಗಳನ್ನು ಒಂಚೂರು ಬದಲಾಯಿಸಿ 18 ವರ್ಷಗಳೆಂದೇ ಅನ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಫ್ರಾನ್ಸ್ ಮತ್ತು ಭಾರತ ಯಾವಾಗಲು ಸೋದರತ್ವ, ಸಮಾನತೆಯ ನಿಲುವಿಗೆ ಬದ್ಧವಾಗಿವೆ. ಅತ್ಯುನ್ನತ ಪ್ರಶಸ್ತಿ ನೀಡಿ ನನ್ನನ್ನು ಗೌರವಿಸಿರುವುದಕ್ಕೆ ಫ್ರಾನ್ಸ್ ಸರಕಾರವನ್ನು ಅಭಿನಂದಿಸುತ್ತೇನೆ " ಫ್ರಾನ್ಸ್, ಧೈರ್ಯವಂತರ ಮತ್ತು ಸೌಂದರ್ಯದ ನೆಲೆವೀಡು ಎಂದು ಲತಾ ಮಂಗಶ್ಕೇರ್ ಹೇಳಿದ್ದಾರೆ.

ಆ ದೇಶದ ಸುಗಂಧ ದ್ರವ್ಯ, ವೈನ್, ಶಾಂಪೇನ್ ಜಗತ್ತಿನಾದ್ಯಂತ ಮನೆಮಾತಾಗಿದೆ. ನಾನು ಫ್ರಾನ್ಸ್ ದೇಶದ ದೊಡ್ಡ ಅಭಿಮಾನಿ " ಎಂದು ಎಂದಿನಂತೆ ಸರಳ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಲತಾ ಹೇಳಿದರು. ಭಾರತೀಯ ಸಂಗೀತವನ್ನು ಶ್ರೀಮಂತಗೊಳಿಸಿದ ಕಾರಣಕ್ಕೆ ಈ ಪ್ರಶಸ್ತಿಯನ್ನು ಲತಾ ಅವರಿಗೆ ನೀಡಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada