»   » ಹಾಡು ಹಳೆಯದಾದರೇನು ಭಾವ ನವನವೀನ

ಹಾಡು ಹಳೆಯದಾದರೇನು ಭಾವ ನವನವೀನ

Posted By:
Subscribe to Filmibeat Kannada

ಹಳೆಯ ಜನಪ್ರಿಯ ಹಾಡುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ. ಕನ್ನಡ ಹಾಗೂ ಹಿಂದಿಯ ಹಳೆಯ ಚಿತ್ರಗೀತೆಗಳನ್ನು ಕೇಳಿಸಲು ಪ್ರಿಸಂ ಫೌಂಡೇಷನ್ ಮತ್ತು ಶಿವಶಕ್ತಿ ಆರ್ಟ್ಸ್ ಮುಂದಾಗಿವೆ. ಮೇ 15ರಂದು ವಸಂತನಗರದ ಅಂಬೇಡ್ಕರ್ ಭವವನದಲ್ಲಿ ''ಮ್ಯಾಕ್ಸ್ ವರ್ತ್ ಮಧುರ ಸಂಗೀತ'' ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿತ್ರನಟ ಶಿವರಾಂ ಮಾತನಾಡುತ್ತಾ, ಕಾರ್ಯಕ್ರಮದಲ್ಲಿ ಹಳೆಯ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಹಿಂದಿನ ಮಧುರ ಹಾಡುಗಳನ್ನು ಇಂದಿನವರೂ ಒಪ್ಪಿಕೊಳ್ಳುತ್ತಾರೆ. ಯುವಕರಲ್ಲಿ ಹಳೆಯ ಹಾಡುಗಳ ಟ್ರೆಂಡ್ ಸೃಷ್ಟಿಯಾಗಿದೆ ಎಂದರು.

ಕಾರ್ಯಕ್ರಮದಿಂದ ಬಂದ ಹಣವನ್ನು ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿರುವ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ಶಿವರಾಂ ತಿಳಿಸಿದರು.ಸಂಗೀತ ಸಂಸ್ಥೆ ಪ್ರಿಸಂ ಫೌಂಡೇಷನ್ ಅಧ್ಯಕ್ಷ ರಾಮ್ ಮಾತನಾಡುತ್ತಾ, ಕಾರ್ಯಕ್ರಮದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನೋಜ್ ಕುಮಾರ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಚಿತ್ರನಟರಾದ ಅಂಬರೀಷ್, ಭಾರತಿ ವಿಷ್ಣುವರ್ಧನ್, ಜಯಂತಿ ಹಲವು ಖ್ಯಾತ ತಾರೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಿಂದಿ ಗಾಯಕರಾದ ಓಂ ಪ್ರಕಾಶ್ ಚತುರ್ವೇದಿ, ಡಾ.ಸಲೀಂ ಸೇರಿದಂತೆ ಕನ್ನಡ ಗಾಯಕಿ ಚಂದ್ರಿಕಾ ಗುರುರಾಜ್ ಮತ್ತಿತ್ತರು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada