»   » ಇದೇ ತಿಂಗಳಲ್ಲಿ ಮ್ಯಾಜಿಕ್ ಸ್ಟಾರ್ ಯಕ್ಷ ಧ್ವನಿಸುರುಳಿ

ಇದೇ ತಿಂಗಳಲ್ಲಿ ಮ್ಯಾಜಿಕ್ ಸ್ಟಾರ್ ಯಕ್ಷ ಧ್ವನಿಸುರುಳಿ

Posted By:
Subscribe to Filmibeat Kannada

ಮ್ಯಾಜಿಕ್ ಸ್ಟಾರ್ ಯೋಗೀಶ್ ಅಭಿನಯಿಸುತ್ತಿರುವ ಯಕ್ಷ ಚಿತ್ರದ ಚಿತ್ರೀಕರಣ ಮುಗಿದಿದೆ. ಮಂಜರಿ ಸ್ಟುಡಿಯೋದಲ್ಲಿ ಯಕ್ಷ ಚಿತ್ರಕ್ಕೆ ಡಿ ಟಿ ಎಸ್ ಅಳವಡಿಕೆ ಪೂರ್ಣಗೊಂಡಿದ್ದು ಇದೇ ತಿಂಗಳಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರಮೇಶ್‌ಭಾಗವತ್ ತಿಳಿಸಿದ್ದಾರೆ. ಶ್ಯಾಮಿ ಅಸೋಸೆಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಯೋಗೀಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟರಾದ ನಾನಾಪಟೇಕರ್ ಮತ್ತು ಅತುಲ್‌ಕುಲಕರ್ಣಿ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಅವರೇ ಕಂಠದಾನ ಮಾಡಿರುವುದು ಈ ಚಿತ್ರದ ವಿಶೇಷ. ಚಿತ್ರದಲ್ಲಿ ನಟಿಸಿರುವ ಖ್ಯಾತ ನಟಿ ಶರಣ್ಯ ಅವರು ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಡಬ್ಬಿಂಗ್‌ನಲ್ಲಿ ಭಾಗವಹಿಸಿದ್ದರು ಎನ್ನುತ್ತಾರೆ ನಿರ್ಮಾಪಕ ಸಿದ್ದರಾಜು.

ರಮೇಶ್ ಭಾಗವತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನುಪ್‌ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಶರಣ್ಯ, ಮಾಸ್ಟರ್ ಹಿರಣ್ಣಯ್ಯ, ಕೋಮಲ್, ಮಹೇಶ್, ಗಿರೀಶ್‌ಮಟ್ಟಣ್ಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada