For Quick Alerts
  ALLOW NOTIFICATIONS  
  For Daily Alerts

  ದಕ್ಷಿಣದ ಜನಪ್ರಿಯ ಟಾಪ್ 20 ಹಾಡುಗಳಲ್ಲಿ ಪಾರಿಜಾತ

  By Rajendra
  |

  ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದ ಸಂಗೀತ ನಿರ್ದೇಶಕರಲ್ಲಿ ಮನೋ ಮೂರ್ತಿ ಕೂಡ ಒಬ್ಬರು. ಇತ್ತೀಚೆಗಿನ ಅವರ ಸಂಗೀತ ನಿರ್ದೇಶನದ 'ಲೈಫು ಇಷ್ಟೇನೆ' ಹಾಗೂ 'ಪಂಚರಂಗಿ' ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು. ಈಗ ಮತ್ತೊಮ್ಮೆ 'ಪಾರಿಜಾತ'ದ ಪರಿಮಳ ದಕ್ಷಿಣದಲ್ಲೆಲ್ಲಾ ಪಸರಿಸುವಂತೆ ಮಾಡಿದ್ದಾರೆ.

  ದಕ್ಷಿಣ ಭಾರತದ ಜನಪ್ರಿಯ ಟಾಪ್ 20 ಹಾಡುಗಳಲ್ಲಿ 'ಪಾರಿಜಾತ' ಚಿತ್ರದ "ಓ ಪಾರಿಜಾತ..." ಎಂಬ ಹಾಡು ನಾಲ್ಕನೆ ಸ್ಥಾನದಲ್ಲಿದೆ. ಈ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಈ ಮಾಹಿತಿಯನ್ನು ನೋಕಿಯಾ ಓವಿ ಸ್ಟೋರ್ ಪ್ರಕಟಿಸಿದೆ. ದಿಗಂತ್ ಹಾಗೂ ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.

  ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಧನುಷ್ ಅವರ "ಕೊಲಾವರಿ ಡಿ.." ಹಾಡು ನಿರೀಕ್ಷೆಯಂತೆ ಮೊದಲ ಸ್ಥಾನದಲ್ಲಿದೆ. ಈ ಬಾರಿಯ ದಕ್ಷಿಣದ ಜನಪ್ರಿಯ ಟಾಪ್ 20 ಹಾಡುಗಳಲ್ಲಿ ಸ್ಥಾನ ಸಂಪಾದಿಸಿರುವ ಏಕೈಕ ಕನ್ನಡ ಚಿತ್ರ 'ಪಾರಿಜಾತ' ಎಂಬುದು ಮತ್ತೊಂದು ವಿಶೇಷ.

  ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಹೊರಹೊಮ್ಮಿರುವ ಮತ್ತೊಂದು ಹಾಡು "ಏ ಚಂದ್ರಿಕಾ..." ಟಾಪ್ 12ನೇ ಸ್ಥಾನದಲ್ಲಿದೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿರುವ ಈ ಹಾಡು ಈಗಾಗಲೆ ಟಿವಿ ವಾಹಿನಿಗಳಲ್ಲೂ ಸಾಕಷ್ಟು ಜನಪ್ರಿಯವಾಗಿದೆ. ಹಾಡಿನ ಚಿತ್ರೀಕರಣ, ಐಂದ್ರಿತಾ ರೇ ಅವರ ವಸ್ತ್ರವಿನ್ಯಾಸ ಎಲ್ಲವೂ ಸೂಪರ್ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)

  English summary
  Kannada movie Parijatha's two songs placed in Nokia Ovi Store data. The song Oh Parijatha and A Chandrika is in the fourth and 12th position respectively place among the South India’s top 20 songs list. Music by Mano Murthy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X