'ಕೊಲವೆರಿ ದಿ' ಗೊತ್ತೇ ಇರಲಿಲ್ಲ: ಎಂ ಬಾಲಮುರಳಿಕೃಷ್ಣ

ಅಂತಾರಾಷ್ಟ್ರೀಯ ಖ್ಯಾತಿಯ, ಕರ್ನಾಟಕದ ಗಾಯಕ ಬಾಲಮುರಳಿಕೃಷ್ಣ ಅವರನ್ನು ಸಹಜವಾಗಿಯೇ ಸಂಗೀತಕ್ಕೆ ಸಂಬಂಧಿಸಿದ ಇತ್ತೀಚಿನ ರಾಷ್ಟ್ರೀಯ ಸೆನ್ಸೇಷನ್ 'ಕೊಲವೆರಿ ದಿ' ಬಗ್ಗೆ ಕೇಳಲಾಯಿತು. ಆಗ, ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ನಂತರ ಆ ಹಾಡು ಹಾಡಿದ್ದು ರಜನಿ ಅಳಿಯ ಎಂಬುದು ತಿಳಿದ ಮೇಲೆ 'ರಜನಿ ಅಳಿಯ ಹಾಡಿದ್ದರಿಂದಲೇ ಆ ಹಾಡು ಜನಪ್ರಿಯ ಆಗಿರಬೇಕು" ಎಂದಿದ್ದಾರೆ.
ರಜನಿಕಾಂತ್ ಅಳಿಯ ಧನುಷ್, ತಮ್ಮ '3' ಚಿತ್ರಕ್ಕಾಗಿ ಹಾಡಿರುವ ಈ ಹಾಡಿನ ಬಗ್ಗೆ ಈಗಾಗಲೇ ಜಾವೇದ್ ಅಖ್ತರ್, ರಾಮ್ ಗೋಪಲ್ ವರ್ಮಾ ಮುಂತಾದ ಕೆಲ ಖ್ಯಾತನಾಮರು "ಅದು ರಜನಿ ಅಳಿಯ ಹಾಡಿದ್ದಕ್ಕೆ ಹಿಟ್ ಆಗಿದ್ದು" ಎಂದಿದ್ದರು. ಇದೀಗ ಖ್ಯಾತ ಗಾಯಕ ಬಾಲಮುರಳಿಕೃಷ್ಣ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಹಾಡೊಂದು ಈ ಪರಿ ಚರ್ಚೆಗೆ ಗುರಿಯಾಗಿದ್ದು ಇದೇ ಮೊದಲು. "ಲೋಕೋ ಭಿನ್ನ ರುಚಿಃ" ಎನ್ನಬಹುದೇನೋ. (ಒನ್ ಇಂಡಿಯಾ ಕನ್ನಡ)
More from Filmibeat
English summary
International fame, Karnataka Singer M Balamuralikrishna told that he don't know about 'Kolaveri D' sing.


Click it and Unblock the Notifications











