»   »  ಹಂಸಲೇಖರ ರು.120 ಕೋಟಿ ಮೆಗಾ ಪ್ರಾಜೆಕ್ಟ್!

ಹಂಸಲೇಖರ ರು.120 ಕೋಟಿ ಮೆಗಾ ಪ್ರಾಜೆಕ್ಟ್!

Subscribe to Filmibeat Kannada

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ದೇಸಿ ಸಂಗೀತ ವಿಶ್ವವಿದ್ಯಾಲಯಕ್ಕೆ ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಂದು ಅಡಿಗಲ್ಲು ಬೀಳಲಿದೆ. ರು.120ಕೋಟಿ ವೆಚ್ಚದಲ್ಲಿ 50 ಎಕರೆಗಳಷ್ಟು ವಿಶಾಲ ಸ್ಥಳದಲ್ಲಿ 'ಹಂಸಲೇಖಾ ಪ್ರದರ್ಶನ ಕಲೆಗಳ ಕಾಲೇಜು ಮತ್ತು ಸಂಶೋಧನಾ ಕೇಂದ್ರ' ಸ್ಥಾಪನೆಯಾಗಲಿದೆ. ಚನ್ನಪಟ್ಟಣದ ಮೂಡಿಗೆರೆ ಗ್ರಾಮದ ಬಳಿ ಮಹಾವಿದ್ಯಾಲಯಕ್ಕೆ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದೆ.

ಈ ಮೂಲಕ ಸಂಗೀತ ವಿದ್ಯಾಲಯ ಸ್ಥಾಪಿಸಬೇಕೆಂಬ ಛಲ ತೊಟ್ಟ ಏಕಮಾತ್ರ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹಂಸಲೇಖ ಪಾತ್ರರಾಗಿದ್ದಾರೆ. ಸದ್ಯಕ್ಕೆ ಬೆಂಗಳೂರು ಮಹಾಲಕ್ಷ್ಮಿಪುರಂನಲ್ಲಿ ನೆಲೆನಿಂತಿರುವ ಹಂಸಲೇಖ ಕಾಲೇಜು ದ್ರಾವಿಡಿಯನ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.

ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಹಂಸಲೇಖ ಕಾಲೇಜು ಪಿಯುಸಿ, ಪದವಿ ಶಿಕ್ಷಣವನ್ನು ನೀಡುತ್ತಿದೆ. 60 ಜನರ ಅಧ್ಯಾಪಕ ವೃಂದ ಹೊಸ ಪಠ್ಯಕ್ರಮವನ್ನೂ ರೂಪಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸ್ವತಂತ್ರ ಶಿಕ್ಷಣ ಸಂಸ್ಥೆ ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಆಲೋಚನೆ ಹಂಸಲೇಖ ಅವರದು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada