»   » ಬಾತ್ ರೂಮಿನಲ್ಲಿ ಬಿದ್ದ ಎಸ್ ಜಾನಕಿ ಆಸ್ಪತ್ರೆಗೆ ದಾಖಲು

ಬಾತ್ ರೂಮಿನಲ್ಲಿ ಬಿದ್ದ ಎಸ್ ಜಾನಕಿ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada
Playback Singer S Janaki
ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರು ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದ ಕಾರಣ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೆ ಅವರನ್ನು ಚಿಕಿತ್ಸೆಗಾಗಿ ತಿರುಪತಿಯ Sri Venkateswara Institute of Medical Sciences (SVIMS) ಸ್ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ತಿರುಪತಿಯಲ್ಲಿ ಸೋಮವಾರ (ಫೆ.7) ಬೆಳಗ್ಗೆ ನಡೆದಿದೆ.

ಜಾನಕಿ ಅವರು ಬಿದ್ದ ರಭಸಕ್ಕೆ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿರುಪತಿಯ ಸ್ವಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು ಜಾನಕಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ತಿರುಪತಿಯ ಭೀಮಾಸ್ ಹೋಟೆಲ್‌ನಲ್ಲಿ ಜಾನಕಿ ಅವರು ಉಳಿದುಕೊಂಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಅನ್ನಮ್ಮಯ್ಯ ಸಂಕೀರ್ತನಾ ಯಜ್ಞದಲ್ಲಿ ಅವರು ಭಾಗವಹಿಸುತ್ತಿದ್ದರು. ಆದರೆ ಇಂದು ಮುಂಜಾನೆ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ತಲೆಗೆ ತೀವ್ರವಾಗಿ ಗಾಯವಾಗಿದ್ದು, ಕಾಲು ಉಳುಕಿದೆ.

ಜಾನಕಿ ಅವರಿಗೆ ನ್ಯೂರೋ ಸರ್ಜರಿ ಮಾಡಲಾಗುತ್ತಿದೆ ಎಂದು ಸ್ವಿಮ್ಸ್ ವೈದ್ಯರು ತಿಳಿಸಿದ್ದಾರೆ. ಜಾನಕಿ ಅವರು ಶೀಘ್ರ ಗುಣಮುಖರಾಗಲಿ ಎಂದು ಅವರ ಅಪಾರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನೂ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. (ಒನ್‍ಇಂಡಿಯಾ ಕನ್ನಡ)

English summary
Renowned playback singer S.Janaki fell down in bathroom at Tirupati hotel. She admitted to Sri Venkateswara Institute of Medical Sciences (svims) hospital.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X