»   »  ಅರಮನೆ ಮೈದಾನದಲ್ಲಿ ಸೋನು ಸಂಗೀತ ಸಂಜೆ

ಅರಮನೆ ಮೈದಾನದಲ್ಲಿ ಸೋನು ಸಂಗೀತ ಸಂಜೆ

Subscribe to Filmibeat Kannada

ಬೆಂಗಳೂರಿನ ಸಂಗೀತ ಪ್ರಿಯರ ಮನತಣಿಸಲು ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಹಾಡಲಿದ್ದಾರೆ. ಅಕ್ಟೋಬರ್ 11ರ ರಸಸಂಜೆ ಸವಿಯಲು ಅರಮನೆ ಮೈದಾನದಲ್ಲಿ ವೇದಿಕೆ ಸಿದ್ಧವಾಗಿದೆ. 'ವರ್ಲ್ಡ್ ಆಫ್ ಟೈಟಾನ್ ಪ್ರೆಸೆಂಟ್ಸ್ ಸೋನು ನಿಗಮ್ ಲೈವ್' ಹೆಸರಿನ ಕಾರ್ಯಕ್ರಮವನ್ನು ಲೈವ್ ಟ್ರೀ ಎಂಟರ್ ಟೈನ್ ಮೆಂಟ್ ಸಂಸ್ಥೆ ಆಯೋಜಿಸಿದೆ.

ಸೋನು ನಿಗಮ್ ಅವರ ಚೊಚ್ಚಲ ಕನ್ನಡ ಆಲ್ಬಂ 'ನೀನೆ ಬರಿ ನೀನೆ' ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ನೇರ ಪ್ರದರ್ಶನ ಮೂಲಕ ಸೋನು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಅಕ್ಟೋಬರ್ 11, 2009ರ ಸಂಜೆ 6.30ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ಜನಪ್ರಿಯ ಕನ್ನಡ ಚಿತ್ರಗೀತೆಗಳೊಂದಿಗೆ ಹಿಂದಿ ಗೀತೆಗಳ ಸೋನೆ ಮಳೆ ಸುರಿಸಲಿದ್ದಾರೆ ಸೋನು.

ಲೈವ್ ಶೋನ ಟಿಕೆಟ್ ಗಳು ವರ್ಲ್ಡ್ ಆಫ್ ಟೈಟಾನ್ ಮಳಿಗೆಗಳಲ್ಲಿ ದೊರೆಯುತ್ತವೆ. ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಖರೀದಿಸಲು ಲೈವ್ ಟ್ರೀ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಬಹುದು. ಟಿಕೆಟ್ ಗಳ ಬೆಲೆ ನೆಬುಲಾ ಗೋಲ್ಡ್ ರು.2200, ರಾಗ ಫ್ಲೋರಾ ಸಿಲ್ವರ್ ರು.1,100, ಎಡ್ಜ್ ಕ್ಲಾಸಿಕ್ ಟಿಕೆಟ್ ಬೆಲೆ ರು.550.

ಕನ್ನಡದಲ್ಲಿ ಸೋನು ನಿಗಮ್, ಮನೋಮೂರ್ತಿ ಹಾಗೂ ಜಯಂತ್ ಕಾಯ್ಕಿಣಿ ತ್ರಿಮೂರ್ತಿಗಳು ಚಲನಚಿತ್ರ ಗೀತೆಗಳಿಗೆ ಹೊಸ ಜೀವ ತುಂಬಿದರು. ಮುಂಗಾರು ಮಳೆ ಚಿತ್ರದ ಅನಿಸುತಿದೆ...ಹಾಡಿನಿಂದ ಶುರುವಾದ ಸೋನು ಕನ್ನಡದ ನಂಟು ಮಿಲನ, ಜೊತೆಜೊತೆಯಲಿ, ಮುಸ್ಸಂಜೆ ಮಾತು, ನವಗ್ರಹ... ಚಿತ್ರಗಳ ಮೂಲಕ ಮುಂದುವರಿದಿದೆ. ಹಿಂದಿ ಭಾಷೆಗಿಂತಲೂ ಕನ್ನಡವನ್ನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದ ಗಾಯಕ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada