»   »  ಲೂಸ್ ಮಾದನ ಡ್ಯಾನ್ಸ್ ಗೆ ಬೆರಗಾದ ಪುನೀತ್ !

ಲೂಸ್ ಮಾದನ ಡ್ಯಾನ್ಸ್ ಗೆ ಬೆರಗಾದ ಪುನೀತ್ !

Subscribe to Filmibeat Kannada
Yogish
ಒಂದು ಯಶಸ್ವಿ ಚಿತ್ರದ ಹಾಡೊಂದರ ಸಾಲನ್ನು ಶೀರ್ಷಿಕೆಯಾಗಿ ಬಳಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಪ್ರೀತ್ಸೆ' ಚಿತ್ರದ ಜನಪ್ರಿಯ ಹಾಡು ಪ್ರೀತ್ಸೆ ಪ್ರೀತ್ಸೆ ಎಂಬ ಸಾಲಿನ ಪದವೇ ಇದೀಗ ಚಿತ್ರವಾಗಿದೆ.

ಪ್ರೀತ್ಸೆ ಪ್ರೀತ್ಸೆ ಇದು ನಮ್ಮ ಲೂಸ್ ಮಾದ ಅಲಿಯಾಸ್ ಯೋಗಿಶ್ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಮೋಹನ್ ಕುಮಾರ್ ತನ್ನ ಸ್ನೇಹಿತ ಕೃಷ್ಣಯ್ಯ ಜೊತೆ ಈ ಚಿತ್ರ ನಿರ್ಮಿಸಲಿದ್ದಾರೆ. ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು ಇದೇ ತಿಂಗಳು ತೆರೆಕಾಣಲಿದೆ. ಸಿನಿಮಾ ರಂಗದ ಆಳ ಅರಿತಿರುವ ಮೋಹನ್ ಕುಮಾರ್ ಗೆ ನಿರ್ಮಾಣದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ತಮ್ಮ ಮೊದಲ ಚಿತ್ರ ಹೇಗಾದರೂ ಗೆಲ್ಲಲೇ ಬೇಕೆನ್ನುವ ಛಲವಿದೆ. ಹೆಚ್ಚುಕಮ್ಮಿ ಕೋಟಿ ಖರ್ಚು ಮಾಡಿ ಚಿತ್ರ ಮುಗಿಸಿದ್ದಾರೆ. ಆಕ್ಷನ್, ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಚಿತ್ರದಲ್ಲಿದೆ ಎಂದು ಹೇಳಿದ್ದಾರೆ.

ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಪುನೀತ್ ರಾಜಕುಮಾರ್ ಸಹ ಯೋಗೇಶ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಗೆಳೆಯ ಯೋಗೇಶ್ ನನಗೆ ತುಂಬಾ ಇಷ್ಟ. ಅವರ ಡ್ಯಾನ್ಸ್ ಮತ್ತು ಅಭಿನಯ ಎರಡೂ ದಿಫರೆಂಟ. ಅವರಿಗೊಂದು ವಿಶೇಷ ಸ್ಟೈಲ್ ಇದೆ ಅದು ನನಗೆ ತುಂಬಾ ಇಷ್ಟ. ಸಣ್ಣ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದು ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ಈ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಪುನೀತ್ ಹೇಳಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!
ಜೂನ್ 11ರಿಂದ ಯೋಗೀಶ್ ಪುಂಡ
ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada