»   » ಮುಂಬೈನಲ್ಲಿ 'ಪೃಥ್ವಿ'ಗಾಗಿ ಹಾಡಿದ ಶ್ರುತಿ ಹಾಸನ್

ಮುಂಬೈನಲ್ಲಿ 'ಪೃಥ್ವಿ'ಗಾಗಿ ಹಾಡಿದ ಶ್ರುತಿ ಹಾಸನ್

Posted By:
Subscribe to Filmibeat Kannada

ಖ್ಯಾತ ನಟ ಕಮಲ ಹಾಸನ್ ಅವರ ಮಗಳು ಶ್ರುತಿ ಹಾಸನ್ ಕನ್ನಡದಲ್ಲಿ ಹಾಡಲಿದ್ದಾರೆ ಎಂಬ ಸುದ್ದಿ ಕಡೆಗೂ ನಿಜವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಪೃಥ್ವಿ' ಚಿತ್ರಕ್ಕಾಗಿ ಶ್ರುತಿ ಹಾಸನ್ ಹಾಡೊಂದನ್ನು ಹಾಡಿದ್ದು ಅದರ ಧ್ವನಿಮುದ್ರಣ ಕಾರ್ಯ ಮುಂಬೈನ ಬಾಂಬೆ ಬ್ರದರ್ಸ್ ಸ್ಟುಡಿಯೋದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

'ಪೃಥ್ವಿ' ಚಿತ್ರದ ನಿರ್ಮಾಪಕರಾದ ಸೂರಪ್ಪಬಾಬು, ಎನ್ ಎಸ್ ರಾಜಕುಮಾರ್ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಎರಡು ಗಂಟೆಗಳ ಕಾಲ 'ಪೃಥ್ವಿ' ಚಿತ್ರಕ್ಕಾಗಿ ಶ್ರುತಿ ಹಾಸನ್ ಹಾಡಿದ ಡ್ಯುಯೆಟ್ ಹಾಡನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದೆ.

ಹಾಡಿನ ಧ್ವನಿಮುದ್ರಣದ ಬಳಿಕ ಶ್ರುತಿ ಹಾಸನ್ ದೂರವಾಣಿಯಲ್ಲಿ ಪುನೀತ್ ರಾಜ್ ಕುಮಾರ್ ಸಂಪರ್ಕಿಸಿ ಕೆಲಹೊತ್ತು ಮಾತನಾಡಿದ್ದಾಗಿ ಮೂಲಗಳು ತಿಳಿಸಿವೆ. ಉತ್ತಮ ಕತೆ ಸಿಕ್ಕರೆ ಕನ್ನಡ ಚಿತ್ರದಲ್ಲಿ ನಟಿಸುವುದಾಗಿ ಶ್ರುತಿ ಹಾಸನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ನೆನಪಿದು...ನೆನಪಿದು...ಎಂಬ ಹಾಡನ್ನು ಶ್ರುತಿ ಹಾಸನ್ ಹಾಡಿದ್ದಾರೆ. ಪಾರ್ವತಿ ಮೆನನ್ ಮತ್ತು ಪುನೀತ್ ರಾಜ್ ಕುಮಾರ್ ಚಿತ್ರದ ಮುಖ್ಯಪಾತ್ರಧಾರಿಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada