For Quick Alerts
  ALLOW NOTIFICATIONS  
  For Daily Alerts

  ಮಧು ಬಂಗಾರಪ್ಪ ತೆಕ್ಕೆಗೆ 'ಸೂಪರ್' ಆಡಿಯೋ ಹಕ್ಕು

  By Rajendra
  |

  ಉಪೇಂದ್ರ ನಿರ್ದೇಶನದ ಮತ್ತು ಮಹತ್ವಾಕಾಂಕ್ಷೆಯ ತ್ರಿಭಾಷಾ ಚಿತ್ರ "ಸೂಪರ್" ಚಿಹ್ನೆಯ ಚಿತ್ರದ ಆಡಿಯೋ ಹಕ್ಕು ಮಧು ಬಂಗಾರಪ್ಪ ಒಡೆತನದ ಆಕಾಶ್ ಆಡಿಯೊ ಪಾಲಾಗಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಭಾರೀ ಮೊತ್ತ ಎನ್ನಬಹುದಾದ ರು.1.25 ಕೋಟಿಗೆ ಮಧು ಬಂಗಾರಪ್ಪ ಚಿತ್ರದ ಆಡಿಯೊ ರೈಟ್ಸ್ ಪಡೆದುಕೊಂಡಿದ್ದಾರೆ.

  ಚಿತ್ರದ ಧ್ವನಿಸುರುಳಿ ಇದೇ ನವೆಂಬರ್ 14ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಅಧಿಕೃತವಾಗಿ ಧ್ವನಿಸುರುಳಿ ಬಿಡುಗಡೆ ಸಮಾರಂಭ ನವೆಂಬರ್ 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಚಿತ್ರದ ಮಹೂರ್ತಕ್ಕೆ ಡಿಫರೆಂಟ್ ಆಗಿ ಚಾಲನೆ ನೀಡಿದ್ದ ಉಪೇಂದ್ರ, ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಕಾಶ್ ಆಡಿಯೊ ಇನ್ನೂ ವರ್ಣರಂಜಿತವಾಗಿ ನಡೆಸಿಕೊಡಲಿದೆ ಎಂದು ಖಾಸಗಿ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಉಪೇಂದ್ರ ತಿಳಿಸಿದ್ದಾರೆ.

  ಕಳೆದ ನಾಲ್ಕು ತಿಂಗಳಿನಿಂದ ಗರಿಗೆದರಿದಂತೆ ಕಾಣುತ್ತಿರುವ ಕನ್ನಡ ಚಿತ್ರೋದ್ಯಮ ಈ ವರ್ಷ ಉತ್ತಮ ಸಾಧನೆ ತೋರಿದೆ. ಕೆಲವೊಂದು ಚಿತ್ರಗಳು ಯಶಸ್ವಿ ಆಗದಿದ್ದರೂ ಚಿತ್ರಗಳ ಆಡಿಯೊಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವುದು ಸಂತಸದ ವಿಚಾರ.

  ಸೂಪರ್ ಚಿತ್ರಕ್ಕೆ ಸದ್ಯದ ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ನೀಡಿದವರಲ್ಲಿ ಯೋಗರಾಜ್ ಭಟ್, ವಿ ಮನೋಹರ್ ಮತ್ತು ಉಪೇಂದ್ರ ಪ್ರಮುಖರು. ಉಪೇಂದ್ರ, ನಯನತಾರಾ, ಟುಲಿಪ್ ಜೋಷಿ, ಸಾಧು ಕೋಕಿಲಾ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X