»   »  ಯೋಗರಾಜ ಭಟ್ಟರ ಹಾಡುಗಳಿಗೆ ಸಖತ್ ಬೇಡಿಕೆ

ಯೋಗರಾಜ ಭಟ್ಟರ ಹಾಡುಗಳಿಗೆ ಸಖತ್ ಬೇಡಿಕೆ

Subscribe to Filmibeat Kannada
Yograj Bhat
'ಮೊಗ್ಗಿನ ಮನಸು' ಖ್ಯಾತಿಯ ನಿರ್ದೇಶಕ ಶಶಾಂಕ್ ನಿರ್ದೇಶಿಸಲಿರುವ ಮುಂದಿನ ಚಿತ್ರಕ್ಕೆ ಯೋಗರಾಜ ಭಟ್ಟರು ಹಾಡೊಂದನ್ನು ಬರೆದುಕೊಟ್ಟಿದ್ದಾರಂತೆ. ಈ ಸಂಭ್ರಮವನ್ನು ಶಶಾಂಕ್ ತಮ್ಮ ಅನೇಕ ಗೆಳೆಯರಿಗೆ ಎಸ್ ಎಂ ಎಸ್ ಕಳುಹಿಸುವ ಮೂಲಕ ಹಂಚಿಕೊಂಡಿದ್ದಾರೆ.

ಜಂಗ್ಲಿ ಚಿತ್ರಕ್ಕೆ ಹಳೆ ಪಾತ್ರೆ, ಹಳೆ ಕಬ್ಬಿಣ...ಎಂದು ಬರೆದು ತಮ್ಮ ಲೇಖನಿಯ ಹರಿತವನ್ನು ಗಾಂಧಿನಗರಕ್ಕೆ ಈಗಾಗಲೇ ತೋರಿಸಿದ್ದಾರೆ. ಈಗ ಯೋಗರಾಜ್ ಭಟ್ಟರ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಯೋಗರಾಜ್ ಭಟ್ಟರ ಚಿತ್ರಸಾಹಿತ್ಯಕ್ಕೆ ಇರುವ ಬೇಡಿಕೆ ನೋಡಿದರೆ, ಅವರು ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ!

ಆದರೆ, ಜಂಗ್ಲಿ ಚಿತ್ರದ ಹಳೆ ಪಾತ್ರೆ...ಹಳೆ ಕಬ್ಬಿಣ...ಇದೂ ಒಂದು ಸಾಹಿತ್ಯವೇ? ಎಂದು ಆ ಹಾಡಿನ ಸಾಹಿತ್ಯದ ಬಗ್ಗೆ ಕಲಾತಪಸ್ವಿ ರಾಜೇಶ್ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಚಿತ್ರಗಳಿಗೆ ಜನ ತಕ್ಕ ಪಾಠ ಕಲಿಸಬೇಕಾಗಿದೆ. ಸಮಾಜದಲ್ಲಿ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಈ ರೀತಿಯ ಚಿತ್ರಗಳನ್ನು ನಾವ್ಯಾಕೆ ನೋಡಬೇಕು ಎಂದು ಅವರು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!
ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada