For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹಾಡಿದ ಮೈಲಾಪುರದ ಮೈಲಾರಿ ಹಾಡು

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮೈಲಾರಿ' ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಶಿವರಾಜ್ ಕುಮಾರ್ ಅವರ ವೃತ್ತಿಜೀವನದಲ್ಲಿ 'ಮೈಲಾರಿ" ಪ್ರಮುಖ ಮೈಲುಗಲ್ಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲ್ಲರಿಗೂ ಗೊತ್ತಿರುವ ವಿಚಾರ ಅಂದರೆ ಮೈಲಾರಿ ಹಾಡುಗಳು ಈಗಾಗಲೆ ಸಾಕಷ್ಟು ಜನಪ್ರಿಯವಾಗಿವೆ.

  'ಮೈಲಾರಿ' ಚಿತ್ರದ ಮೈಲಾಪುರದ ಮೈಲಾರಿ ಎಂಬ ಹಾಡಿನ ಸಾಹಿತ್ಯವನ್ನು ಇಲ್ಲಿ ನೀಡಲಾಗಿದೆ. ಈ ಹಾಡನ್ನು ಬರೆದವರು ಕವಿರಾಜ್. ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಆರ್ ಚಂದ್ರು ನಿರ್ದೇಶನದ ಚಿತ್ರ ಇದಾಗಿದ್ದು ಕನಕಪುರ ಶ್ರೀನಿವಾಸ್, ಕೆ ಪಿ ಶ್ರೀಕಾಂತ್ ನಿರ್ಮಿಸಿದ್ದಾರೆ.

  ಹಾಡಿನ ಸಾಹಿತ್ಯದಲ್ಲಿ ಅಂತಹ ವಿಶೇಷವಿಲ್ಲದಿದ್ದರೂ ಒಂದೆರಡು ಹಿತನುಡಿಗಳಿವೆ. ಅಲ್ಲಲ್ಲಿ ಗಾದೆಮಾತುಗಳನ್ನು ಪೋಣಿಸಿ ಹಾಡನ್ನು ಹೆಣೆದಿದ್ದಾರೆ ಕವಿರಾಜ್. ಈ ಹಾಡಿನ ಮತ್ತೊಂದು ವಿಶೇಷವೆಂದರೆ ಪುನೀತ್ ರಾಜ್ ಕುಮಾರ್ ಹಾಡಿರುವುದು. ಪ್ರಾಸಬದ್ಧವಾಗಿರುವ ಈ ಹಾಡು ನಿಮಗಾಗಿ. ಅಂದಹಾಗೆ ಮೈಲಾರಿ ಡಿಸೆಂಬರ್ 17ರಂದು ತೆರೆಕಾಣಲಿದೆ.

  ದೊಗಳೆ ಚಡ್ಡಿ ಹಾಕಿಕೊಂಡು

  ಕೆಂಪು ಬಸ್ಸು ಹತ್ತಿಕೊಂಡು

  ಬಂದಾನೋ ಬೆಂಗಳೂರಿಗೆ... ಬೋರೇಗೌಡ

  ಬಂದಾನೋ ಬೆಂಗಳೂರಿಗೆ

  ಮೋಟು ಜುಟ್ಟು ಬಿಟ್ಟು ಕೊಂಡು

  ಹಣೇಲಿ ಬೊಟ್ಟು ಇಟ್ಟುಕೊಂಡು

  ಬಂದಾನೋ ಬೆಂಗಳೂರಿಗೆ...ಬೋರೇಗೌಡ

  ಬಂದಾನೋ ಬೆಂಗಳೂರಿಗೆ

  ಊರಿಂದ ಓಡಿಬಂದ

  ಜೋಗಿ ನಾನಲ್ಲಾರಿ

  ಓಮಿಂದ ಎದ್ದುಬಂದ

  ಸತ್ಯಾನು ಅಲ್ಲಾರಿ

  ಹಳ್ಳಿಯ ಸೀದಾ ಸಾದಾ ಹೈದ

  ಮೈಲಾಪುರದ ಮೈಲಾರಿ...

  ಹೊಟ್ಟೆತುಂಬ ರಾಗಿ ಮುದ್ದೆ

  ಕಣ್ ತುಂಬ ಒಳ್ಳೆ ನಿದ್ದೆ

  ಹಳ್ಳೀನೆ ಸೊಂಪು ಗುರೂ

  ಕೆಟ್ಟು ಪಟ್ನ ಸೇರೋ

  ಪೋಲಿ ಈ ಹುಡುಗರೂ

  ಕಟ್ದಾಗ ಕೆಂಪೇಗೌಡ

  ಬೆಂಗಳೂರು ಕಾಡುಗುಡ್ಡ

  ಹಳ್ಳೀನೆ ದಿಲ್ಲಿ ಆಗೊದು

  ಮತ್ತ್ಯಾಕೋ ಓಡ್ಬಂದಿದ್ದು

  ಕಾಯ್ಬೇಕಿತ್ತಲ್ಲೇ ಇದ್ದು

  ನಿಯ್ಯತ್ತು ನಮ್ಮ ಸೊತ್ತು

  ಜಗ್ಗಲ್ಲ ನಾವ್ಯಾವತ್ತು

  ಗೊತ್ತಿಲ್ಲ ಹಾಕೋಕ್ ಸ್ಕೆಚ್ಚು

  ಕೈಗೆ ಸಿಕ್ರೆ ಮಚ್ಚು

  ರೌಡಿ ಆಗೋ ಹುಚ್ಚು

  ಹಳ್ಳೀಲಿ ಪ್ರೀತಿ ಸ್ನೇಹ

  ಪೇಟೇಲಿ ನೋಟಿನ್ ಮೋಹ

  ಕೆಟ್ಟೋಯ್ತು ಕಾಲ ಇಲ್ಲಿ

  ಸತ್ಯ ನಿನ್ ಮಾತಲ್ಲಿ

  ಹಳ್ಳಿ ಹಸನಾಗಲಿ

  English summary
  Shivarajkumar Mylari Lyrics by Kaviraj. Gurukiran scores music and Puneeth Rajkumar sing the song. Mylari movie is suppose to release on Dec 17, 2010. Sada, Sanjana, Ravi Kale and Raju Talikote are in lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X