»   » ಅಂತರ್ಜಾಲದಲ್ಲಿ ಹೊಸಗನ್ನಡ ರೇಡಿಯೋ

ಅಂತರ್ಜಾಲದಲ್ಲಿ ಹೊಸಗನ್ನಡ ರೇಡಿಯೋ

Subscribe to Filmibeat Kannada
ಎಸ್ ಎನ್ ಅಭಿಷೇಕ್, ಬಿ ಇ , ವಯಸ್ಸು 24ವರ್ಷ, ಸಿಸ್ಕೋ ಟೆಕ್ನಾಲಜೀಸ್ ನಲ್ಲಿ ಸಾಪ್ಟ್ ವೇರ್ ಇಂಜಿನಿಯರ್. ಇದು ಕನ್ನಡ ಚಿತ್ರ ಗೀತೆಗಳಿಗಾಗಿ ಪ್ರತ್ಯೇಕ ರೇಡಿಯೋ ವಾಹಿನಿ ಆರಂಭಿಸಿರುವ ಸಾಹಸಿಯ ಹೆಸರು.

24 ಘಂಟೆ ನಿರಂತರವಾಗಿ ಹೊಸ ಮತ್ತು ಹಳೆ ಕನ್ನಡ ಚಿತ್ರಗಳನ್ನ ಪ್ರಸಾರ ಮಾಡುವ, ಕೇಳಿದ ಹಾಡಗಳನ್ನೇ ಘಂಟೆಕಳೆದು ಪುನಾರ್ವರ್ತನೆ ಮಾಡದ ಮತ್ತು ಮುಖ್ಯವಾಗಿ ರೇಡಿಯೋ ಜಾಕಿ ಅಥವಾ ಜಾಹಿರಾತಿನ ಕಾಟವಿಲ್ಲದ ರೇಡಿಯೋ ಸ್ಟೇಷನ್.

"ಮಜಾ ಮಾಡಿ ರೇಡಿಯೋ" ಇದು ಬಾನುಲಿಯಲ್ಲಿ ಪ್ರಸಾರವಾಗಿ ತರಂಗಾಂತರಗಳ ಮೂಲಕ ಆಂಟೆನಾ ಹೊಕ್ಕು, ರೇಡಿಯೋ ಸ್ಪೀಕರ್ ಮೂಲಕ ಮೂಡುವ ಹಾಡುಗಳಲ್ಲ. ಇಂಟರ್ನೆಟ್ ನಲ್ಲಿ ಪ್ರಸಾರವಾಗುತ್ತಿರುವ ಆನ್ ಲೈನ್ ರೇಡಿಯೋ ಸ್ಟೇಷನ್. ಕನ್ನಡದ ಹಿಟ್ ಹಾಡುಗಳನ್ನ ಶೋತೃಗಳಿಗೆ ಮುಟ್ಟಿಸುತ್ತಿರುವ ಅಂತರ್ಜಾಲ ರೇಡಿಯೋ ವಾಹಿನಿ.

ಇದನ್ನ ಕೇಳಬೇಕಾ, ನೀವು ಮಾಡಬೇಕಾದ್ದು ಇಷ್ಟೇ ಈ ತಾಣಕ್ಕೆ ಭೇಟಿ ಕೊಡಿ. ಈ ಕೇಂದ್ರದಲ್ಲಿ ಬರುವ ಸೂಪರ್ ಹಿಟ್ ಹಾಡುಗಳನ್ನ winamp/real player/iTunes/windows media player ತಂತ್ರಾಂಶದಲ್ಲಿ ಆಲಿಸಬಹುದು. ನಿಮ್ಮ ಗಣಕದಲ್ಲಿ ಯಾವ ತಂತ್ರಾಂಶ ಇಲ್ಲದಿದ್ದರೂ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬರಿ ಹಾಡುಗಳಲ್ಲ ಇತ್ತೀಚಿನ ಕನ್ನಡ ಸಿನಿಮಾ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಕೂಡ ಇಲ್ಲಿಯ ಬ್ಲಾಗ್ ನಲ್ಲಿ ಚರ್ಚೆ ನಡೆಯುತ್ತದೆ.

ಈ ಅಂತರ್ಜಾಲ ತಾಣಕ್ಕೆ ಇದುವರೆಗೆ ಸುಮಾರು 1ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. 3500 ಮಂದಿ ಸದಸ್ಯರಾಗಿದ್ದಾರೆ. ಈ ಅಂತರ್ಜಾಲ ರೇಡಿಯೋ ಆರಂಭವಾಗಿ ಒಂದುವರೆ ವರ್ಷ ಕಳೆದಿದೆಯಷ್ಟೆ."ಸಿರಿಗನ್ನಡಂ ಗೆಲ್ಗೆ" ಅನ್ನುವ ಅಂತರ್ಜಾಲ ರೇಡಿಯೋ ಕೇಂದ್ರವನ್ನು ಆರಂಭಿಸಿದ ತರುಣ ಟೆಕ್ಕಿಯ ಕನ್ನಡ ಪ್ರೇಮಕ್ಕೆ ಬೆನ್ನು ತಟ್ಟೋಣ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada