For Quick Alerts
  ALLOW NOTIFICATIONS  
  For Daily Alerts

  ಗುರುಕಿರಣ್ ಸಂಗೀತದಲ್ಲಿ ಪಲ್ಲವಿಸಿದ 'ಆಪ್ತರಕ್ಷಕ'

  |

  ವಿ. ಹರಿಕೃಷ್ಣ ಸಂಗೀತ ಅಬ್ಬರದ ನಡುವೆ ಏನೋ.. ಒಂಥರಾ ಮಂಕಾಗಿದ್ದಗುರುಕಿರಣ್ 'ಆಪ್ತರಕ್ಷಕ'ನ ಮೂಲಕ ಭರ್ಜರಿ ರಿ-ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಗಾಯಕ/ಗಾಯಕಿಯರಿಗೆ ಕನ್ನಡದಲ್ಲಿ ಮಣೆ ಹಾಕಲಾಗುತ್ತಿದೆ. ನಮ್ಮವರನ್ನು ಕಡೆಗಣಿಸಲಾಗುತ್ತಿದೆ ಎಂಬಕೂಗಿಗೆ ಸ್ಪಂಧಿಸಿರುವ ಗುರು ಎಲ್ಲಾ ಹಾಡುಗಳನ್ನು (ಎಸ್ಪಿಬಿ ಅವರನ್ನೂ ನಮ್ಮವರು ಅಂದುಕೊಂಡರೆ) ಇಲ್ಲಿಯವರಿಂದಲೇ ಹಾಡಿಸಿರುವುದು ವಿಶೇಷ.

  ಅಭಿನಯ ಭಾರ್ಗವ ವಿಷ್ಣುವರ್ಧನ್ ಅಭಿನಯದ ಕೊನೆಯ ಚಿತ್ರ ಹಾಗೂ 200ನೇ ಚಿತ್ರ ಆಪ್ತರಕ್ಷಕ. ಈ ಚಿತ್ರವನ್ನು ವಿಷ್ಣು ಅಭಿಮಾನಿಗಳನ್ನು ಕಾತುರದಿಂದ ನಿರೀಕ್ಷಿಸುವಂತೆ ಮಾಡಿದೆ. ಕನ್ನಡ ಚಿತ್ರೋದ್ಯಮ ಸಹ 'ಆಪ್ತರಕ್ಷಕ' ಚಿತ್ರದ ಬಗ್ಗೆ ತೀವ್ರ ಕುತೂಹಲ ಇಟ್ಟುಕೊಂಡಿದೆ. ಚಿತ್ರದ ಧ್ವನಿಸುರುಳಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಭರದಿಂದ ಮಾರಾಟವಾಗುತ್ತಿವೆ. ಚಿತ್ರದ ಹಾಡುಗಳು ಳಿ ಹೇಗಿವೆ ಎನ್ನುವ ಬಗ್ಗೆ ಒಂದು ಪುಟ್ಟ ವಿಮರ್ಶೆ.

  1."ಸಿಂಹಾ.., ಚಾಮುಂಡಿ ತಾಯಿಯಾಣೆ ನಾನೆಂದೂ ನಿಮ್ಮವನೇ"
  ಸಾಹಿತ್ಯ : ಕವಿರಾಜ್
  ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ

  2."ಕಬಾಡಿ ಕಬಾಡಿ, ಕಣ್ಣುಮುಚ್ಚಾಲೆ ಗಾಡೆಗೂಡೆ"
  ಸಾಹಿತ್ಯ: ಕವಿರಾಜ್
  ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ, ಶಮಿತಾ ಮಲ್ನಾಡ್

  3. "ಗರನೇ ಗರ ಗರನೇ, ಏ ನಾಗವಲ್ಲಿ"
  ಸಾಹಿತ್ಯ: ಕವಿರಾಜ್
  ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ

  4. ರಕ್ಷಕ ಆಪ್ತರಕ್ಷಕ ಎಲ್ಲರಿಗೂ ಒಬ್ಬನೇ
  ಸಾಹಿತ್ಯ : ವಿ ಮನೋಹರ್
  ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ, ರಾಜೇಶ್ ಕೃಷ್ಣ , ನಂದಿತಾ

  5. ಓಂಕಾರ ಅಭಿನಯ ವೇದ
  ಸಾಹಿತ್ಯ: ಗೋಟುರಿ
  ಹಾಡಿರುವವರು: ಲಕ್ಷ್ಮಿನಟರಾಜ್

  6."ಕಬಾಡಿ ಕಬಾಡಿ, ಕಣ್ಣುಮುಚ್ಚಾಲೆ ಗಾಡೆಗೂಡೆ"
  ಸಾಹಿತ್ಯ : ಕವಿರಾಜ್
  ಹಾಡಿರುವವರು: ಕಾರ್ತಿಕ್, ಶಮಿತಾ ಮಲ್ನಾಡ್

  ಪ್ರತಿಭೆಗಳಿಗೆ ತನ್ನ ಚಿತ್ರಗಳಲ್ಲಿ ಅವಕಾಶ ನೀಡುವ ಗುರುಕಿರಣ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ "ಕಾನ್ಫಿಡೆಂಟ್ ಸ್ಟಾರ್ ಸಿಂಗರ್' ವಿಜೇತೆ ಲಕ್ಷ್ಮಿ ನಟರಾಜ್ ಗೆ ಚಿತ್ರದ ಒಂದು ಮೆಲೋಡಿಯಸ್ ಹಾಡನ್ನು ಹಾಡುವ ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ಲಕ್ಷ್ಮೀ ಉತ್ತಮವಾಗಿ ಬಳಸಿಕೊಂಡು ಜನಪ್ರಿಯ ಗಾಯಕಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಅಲ್ಲದೇ ಮುಂದೆ ಅವಕಾಶ ಒದಗಿ ಬಂದರೆ ತಾನೂ ಕನ್ನಡದ ಶ್ರೇಯಾ ಘೋಷಾಲ್ ಆಗಬಹುದೆಂಬಭರವಸೆ ನೀಡಿದ್ದಾರೆ.

  ಮೂರು ಹಾಡುಗಳು ಉತ್ತಮ (ಚಾಮುಂಡಿ ತಾಯಿಯಾಣೆ,ಗರನೇ ಗರ ಗರನೇ ಹಾಗೂ ಓಂಕಾರ ಅಭಿನಯ ವೇದ)ಮತ್ತು ಎರಡು ಹಾಡುಗಳು ಓಕೆ. ಒಂದು ಹಾಡು ಆಪ್ತಮಿತ್ರ ಚಿತ್ರದ ರಾರಾ.. ಹಾಡನ್ನು ನೆನಪಿಸುವಂತಿದೆ. 'ಚಾಮುಂಡಿ ತಾಯಿಯಾಣೆ' ಹಾಡಿನ ಟ್ಯೂನ್ ಈ ಹಿಂದೆ ಬಂದ ವಿಷ್ಣು ಚಿತ್ರದ ಟ್ಯೂನ್ ನಂತಿದೆ. ಒಟ್ಟಿನಲ್ಲಿ ಉತ್ತಮ ಎನ್ನಬಹುದಾದ ಸಂಗೀತ ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಹಾಡುಗಾರರಿಗೆ ಅವಕಾಶ ನೀಡಿದ ಗುರುಕಿರಣ್ ಅಭಿನಂದನಾರ್ಹರು.ಚಿತ್ರದ ಹಾಡುಗಳು ಜನಪ್ರಿಯಗೊಳ್ಳುವುದರಲ್ಲಿ ಸಂಶಯವಿಲ್ಲ.

  ಓಂಕಾರ ಅಭಿನಯ ವೇದ...ಹಾಡಿನ ಸಾಹಿತ್ಯ ಬೊಂಬಾಟ್. ರಕ್ಷಕ ಆಪ್ತರಕ್ಷಕ ಎಲ್ಲರಿಗೂ ಒಬ್ಬನೇ...ವಿ ಮನೋಹರ್ ಸಾಹಿತ್ಯಕ್ಕೆ ಗುರುಕಿರಣ್ ಸಂಗೀತ ಕೊಂಚ ಸಪ್ಪೆ ಎನ್ನಿಸಿದರೂ ಸಹಿಸಿಕೊಳ್ಳಬಹುದು. ಕವಿರಾಜ್ ರಚನೆಯ ಎರಡು ಹಾಡುಗಳ (ಚಾಮುಂಡಿ ತಾಯಿಯಾಣೆ ಮತ್ತು ಗರನೇ ಗರ ಗರನೇ)ಸಾಹಿತ್ಯ ಮಿಂಚಿನ ವೇಗವಿದೆ. ಈ ಎರಡು ಹಾಡುಗಳಿಗೆ ಗುರುಕಿರಣ್ ಸಂಗೀತ ಸಹ ನಿರಾಸೆ ಮೂಡಿಸದು. ಸಿಡಿ ಮತ್ತು ಧ್ವನಿಸುರುಳಿ ಕೊಳ್ಳುವುದರಿಂದ ಜೇಬಿಗೆ ಯಾವುದೇ ರೀತಿಯ ನಷ್ಟವಿಲ್ಲ ಎಂಬ ಭರವಸೆ ನಮ್ಮದು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X