»   »  ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!

ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!

Posted By:
Subscribe to Filmibeat Kannada
Book on Rajini to release in cassettes and CDs
ಮೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ ''ರಜನಿ:ವಿಶಿಷ್ಟ, ವಿಚಿತ್ರ, ವಿಕ್ಷಿಪ್ತ'' ಎಂಬ ಕೃತಿ ನೆನಪಿರಬೇಕಲ್ಲ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕುರಿತು ಪತ್ರಕರ್ತ ದೇವಶೆಟ್ಟಿ ಮಹೇಶ್ ಬರೆದ ಲೇಖನಗಳನ್ನು ಒಳಗೊಂಡ ಕೃತಿ. 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಹಲವಾರು ಕಂತುಗಳಲ್ಲಿ ಪ್ರಕಟವಾಗಿತ್ತು. ಅಷ್ಟೇ ಜನಪ್ರಿಯವೂ ಆಗಿತ್ತು. ಶಂಕರ್ ನಿರ್ದೇಶನದ ರಜನಿಕಾಂತ್ ಅಭಿನಯದ 'ಶಿವಾಜಿ' ಚಿತ್ರದ ದಿನವೇ ಆ ಕೃತಿ ಬಿಡುಗಡೆಯಾಗಿತ್ತು. ಈಗ ಅದೇ ಕೃತಿ ಧ್ವನಿ ಸುರುಳಿ ಮತ್ತು ಸಿಡಿ ರೂಪದಲ್ಲಿ ಹೊರಬರುತ್ತಿದೆ.

ಈ ಬಗ್ಗೆ ಲಹರಿ ಆಡಿಯೋ ಕಂಪನಿಯ ತುಳಸಿರಾಮ್ ವೇಲು ಮಾಹಿತಿ ನೀಡಿದರು. ನಮ್ಮ ಕಂಪನಿ ಮೂಲಕ ಪುಸ್ತಕವೊಂದು ಸಿಡಿ ಮತ್ತು ಆಡಿಯೋ ರೂಪದಲ್ಲಿ ಹೊರತರುತ್ತಿರುವುದು ಇದೇ ಮೊದಲು. ಲಹರಿ ಕಂಪನಿ ಕೈಗೆತ್ತಿಕೊಂಡಿರುವ ಅತಿ ದೊಡ್ಡ ಪ್ರಾಜೆಕ್ಟ್ ಇದಾಗಿದೆ . ಸಿನಿಮಾ ಶೀರ್ಷಿಕೆಗಳು ಸೇರಿದಂತೆ ಒಟ್ಟು 140,000 ಶೀರ್ಷಿಕೆಗಳ ಧ್ವನಿಸುರುಳಿಗಳನ್ನು ನಮ್ಮ ಕಂಪನಿ ಹೊಂದಿದೆ. ಅಷ್ಟೇ ಅಲ್ಲ ಪ್ರೇಮ ಲೋಕ ಸೇರಿದಂತೆ ಬಾಂಬೆ, ರೋಜಾ, ಘರಾನಾ ಮೊಗುಡು ಚಿತ್ರದ ಹಕ್ಕುಗಳನ್ನು ಪಡೆದಿದ್ದೇವೆ ಎಂದು ವೇಲು ತಿಳಿಸಿದರು.

ಲಹರಿ ವಿಷನ್ಸ್ ಬ್ಯಾನರಿನಡಿ ಕನ್ನಡದ ಜನಪ್ರಿಯ ಪುಸ್ತಕಗಳನ್ನು ಆಡಿಯೋ ಆಲ್ಬಂಗಳ ರೂಪದಲ್ಲಿ ಹೊರತರುತ್ತಿದ್ದೇವೆ. ಇದರ ಮೊದಲ ಪ್ರಯತ್ನವೇ ರಜನಿಕಾಂತ್ ಕುರಿತು ದೇವಶೆಟ್ಟಿ ಮಹೇಶ್ ಬರೆದ ಕೃತಿ. ಬಹಳಷ್ಟು ಮಂದಿಗೆ ಪುಸ್ತಕಗಳನ್ನು ಓದಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ನಾವು ಹೊರತರುತ್ತ್ತಿರುವ ಸಿಡಿ ಆಲ್ಬಂ ಖಂಡಿತ ನೆರವಾಗುತ್ತದೆ ಎನ್ನುತ್ತಾರೆ ವೇಲು.

''ರಜನಿ:ವಿಶಿಷ್ಟ, ವಿಚಿತ್ರ, ವಿಕ್ಷಿಪ್ತ'' ಕೃತಿಯನ್ನು ರಚಿಸಲು ದೇವಶೆಟ್ಟಿ ಮಹೇಶ್ ಬಹಳಷ್ಟು ಶ್ರಮಿಸಿದ್ದರು. ರಜನಿಕಾಂತ್ ಜೀವನ ಸಂಘರ್ಷದಲ್ಲಿದ್ದ ದಿನಗಳಲ್ಲಿ ಅವರಿಗೆ ನೆರವಾದ ಗೆಳೆಯರನ್ನು ದೇವಶೆಟ್ಟಿ ಮಹೇಶ್ ಸಂದರ್ಶಿಸಿದ್ದರು. ''ನಟನಾಗಬೇಕೆಂಬ ತಮ್ಮ ಕನಸನ್ನು ನನಸು ಮಾಡಲು ಬಹಳಷ್ಟು ಮಂದಿ ರಜನಿಕಾಂತ್ ಗೆ ನೆರವಾಗಿದ್ದಾರೆ. ರಜನಿಕಾಂತ್ ವ್ಯಕ್ತಿತ್ವದ ಹಿಂದಿರುವ ರಹಸ್ಯಗಳನ್ನು ಪುಸ್ತಕ ಬಿಚ್ಚಿಡುತ್ತದೆ'' ಎನ್ನುತ್ತಾರೆ ದೇವಶೆಟ್ಟಿ ಮಹೇಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
ಕನ್ನಡಿಗರಿಗೆದುರು ಕ್ಷಮೆ ಕೇಳೇ ಇಲ್ಲ : ರಜನಿಕಾಂತ್
ರಜನಿಕಾಂತ್ ರೊಂದಿಗೆ ಕೈಜೋಡಿಸಿದ ವಿಷ್ಣು
ದಳವಾಯಿ ಪಾತ್ರ ರಜನಿಗೆ ಒಪ್ಪುವುದಿಲ್ಲ: ಭರಣ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X