»   » ಮಾರುಕಟ್ಟೆಗೆ 'ಪೃಥ್ವಿ' ಧ್ವನಿಸುರುಳಿ ಬಿಡುಗಡೆ

ಮಾರುಕಟ್ಟೆಗೆ 'ಪೃಥ್ವಿ' ಧ್ವನಿಸುರುಳಿ ಬಿಡುಗಡೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರದ ಧ್ವನಿಸುರುಳಿ ಭಾನುವಾರ ಮಾರುಕಟ್ಟೆಗೆ ಬಿಡುಗಡೆಯಾಯಿತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಧ್ವನಿಸುರುಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಗೀತ ಸಾಹಿತಿ ಕೆ ಕಲ್ಯಾಣ್ ಮಾತನಾಡುತ್ತಾ, ವಿಶ್ವದಾದ್ಯಂತ ಸವಾರಿ ಮಾಡಿದ ಅನುಭ 'ಪೃಥ್ವಿ' ಚಿತ್ರ ನೀಡಿದೆ ಎಂದರು. ಚಿತ್ರ ನಾಯಕಿ ಪಾರ್ವತಿ ಮೆನನ್ ಮಾತನಾಡುತ್ತಾ, ಪುನೀತ್ ಅವರ ಸೌಮ್ಯ ಸ್ವಭಾವ ಹಾಗೂ ಉತ್ತೇಜಿಸುವ ಮನೋಭಾವ ಚಿತ್ರದ ಪ್ರಮುಖ ಆಕರ್ಷಣೆ. ಸೂರಪ್ಪ ಬಾಬು ಅವರಂತಹ ಸದಭಿರುಚಿಯ ನಿರ್ಮಾಪಕರು ಸಿಕ್ಕಿದ್ದು ನನ್ನ ಅದೃಷ್ಟ ಎಂದರು.

ತಾಂತ್ರಿಕವಾಗಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸಂಭಾಷಣೆ ಪರಿಣಾಮಕಾರಿಯಾಗಿ ಮೂಡಿಬರಲು ಸಹಕರಿಸಿದ ಹೇಮಂತ್ ಮತ್ತು ನಂದೀಶ್ ಅವರಿಗೆ ಕೃತಜ್ಞತೆಗಳನ್ನು ಪುನೀತ್ ತಿಳಿಸಿದರು. ಪೃಥ್ವಿ ಚಿತ್ರ ಸೂರಪ್ಪ ಬಾಬು ಅವರಿಗೆ ಖಂಡಿತ ಒಳ್ಳೆಯ ಲಾಭ ತರಲಿದೆ ಎಂಬ ಮಾತನ್ನು ರಾಕ್ ಲೈನ್ ವೆಂಕಟೇಶ್ ಹೇಳಿದರು. ಪುನೀತ್ ರಾಜ್ ಕುಮಾರ್ ಅವರು ಕೇವಲ ನಿರ್ದೇಶಕರ ನಟ ಮಾತ್ರವಲ್ಲ ನಿರ್ಮಾಪಕರ ಡಾರ್ಲಿಂಗ್ ಎಂದರು.

ಆನಂದ್ ಆಡಿಯೋ ಹೊರತಂದಿರುವ 'ಪೃಥ್ವಿ' ಧ್ವನಿಸುರುಳಿಯಲ್ಲಿ ಒಟ್ಟು ಆರು ಹಾಡುಗಳಿವೆ. ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕಿದೆ. ಪೃಥ್ವಿ ಧ್ವನಿಸುರುಳಿ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸವನ್ನು ಆನಂದ್ ಆಡಿಯೋದ ಮೋಹನ್ ವ್ಯಕ್ತಪಡಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada