»   » ಪ್ರೇಮಿಗಳ ಇಂಚರ ಪ್ರೀತಿಯ ಹಂಗಾಮ

ಪ್ರೇಮಿಗಳ ಇಂಚರ ಪ್ರೀತಿಯ ಹಂಗಾಮ

Posted By:
Subscribe to Filmibeat Kannada

ಹದಿಹರೆಯದ ಹುಚ್ಚು ವಯಸ್ಸದು. ಪ್ರೀತಿಯ ಬಲೆಯಲ್ಲಿ ಬಿದ್ದ ಪ್ರೇಮಿಗಳು ಬಾನಲ್ಲಿ ಹಾರುವ ಹಕ್ಕಿಗಳ ಹಾಗೆ ಒಮ್ಮೆ ಜಗಳ ಮತ್ತೊಮ್ಮೆ ಪ್ರೀತಿ ಹೀಗೆ ಯುವಜೋಡಿ ವಿವೇಕ್‌ರಾಜ್ ಹಾಗೂ ಶುಭಾಪುಂಜಾ ನಟನೆಯ ಪ್ರೀತಿಯ ಹಂಗಾಮ ಚಿತ್ರ ಕೂಡ ಸಾಗುತ್ತದೆ. ಕವಿರಾಜ್ ಬರೆದಿರುವ ಹಾಡುಗಳು ಜನಪ್ರಿಯತೆ ಗಳಿಸುವ ಎಲ್ಲ ಲಕ್ಷಣಗಳಿವೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಜೊತೆಗೆ ನಾಯಕನಾಗಿ ಕೂಡ ವಿವೇಕ್ ರಾಜ್ ಕಾಣಿಸಲಿದ್ದಾರೆ. ಪ್ರೀತಿಯ ಹಂಗಾಮ ಚಿತ್ರದ ಧ್ವನಿಸುರಳಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಶುಭ ಹಾರೈಸಲು ನಿರ್ಮಾಪಕ ಗಂಗರಾಜು, ಹಿರಿಯ ನಿರ್ದೇಶಕ ನಾಗಾಭರಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.

ಮೊದಲ ಬಾರಿಗೆ ಪತ್ರಕರ್ತೆಪಾತ್ರ ಮಾಡಿರುವ ಶುಭಾ ಪೂಂಜಾ, ಸಿನಿ ಪತ್ರಕರ್ತರು ಪರದಾಟದ ಅನುಭವ ಸಿಕ್ಕ ಮೇಲೆ ನಿಜಕ್ಕೂ ನಿಮ್ಮ ಕೆಲಸ ತುಂಬಾ ಕಷ್ಟ ಎಂದು ಸುದ್ದಿಗಾರರ ಕಡೆ ತಿರುಗಿ ಹೇಳಿ ಮನಸಾರೆ ನಕ್ಕರು. ತುಂಬಾ ಲವಲವಿಕೆಯ ಪಾತ್ರ, ನಿರ್ದೇಶಕ ವಿವೇಕ್ ರಾಜ್ ಸೊಗಸಾಗಿ ಕಥೆ ಹೆಣೆದಿದ್ದಾರೆ ಎಂದು ವಿವೇಕ್ ಗೆ ಶುಭಾ ಫುಲ್ ಮಾರ್ಕ್ ಕೊಟ್ಟರು.ಬಹುತೇಕ ಕಥೆಗಳು ಪ್ರೀತಿ ಸುತ್ತಲೇ ಸುತ್ತಿದರೂ ನಿರೂಪಣೆಯಲ್ಲಿ ಸ್ವಂತಿಕೆ ಮೆರೆಯಬೇಕು. ಚಿತ್ರದ ಹಾಡುಗಳು ಭರವಸೆ ಮೂಡಿಸುವಂತಿದೆ ಎಂದು ನಾಗಾಭರಣ, ಚಿತ್ರ ತಂಡವನ್ನು ಹರಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada