»   »  ಮಾರುಕಟ್ಟೆಗೆ ಮುಸ್ಸಂಜೆಯ ಗೆಳತಿ ಧ್ವನಿಸುರುಳಿ

ಮಾರುಕಟ್ಟೆಗೆ ಮುಸ್ಸಂಜೆಯ ಗೆಳತಿ ಧ್ವನಿಸುರುಳಿ

Posted By:
Subscribe to Filmibeat Kannada
Mussanjeya Gelathi still
'ಮುಸ್ಸಂಜೆಯ ಗೆಳತಿ'ಯಾಗಿ ಬಿ ಪಿ ಶ್ರೀನಿವಾಸ್ ಅವರ ಮಗಳು ಶಾಲಿನಿ ಶೀಘ್ರದಲ್ಲೇ ದರ್ಶನ ನೀಡಲಿದ್ದಾರೆ. ಆದರೆ ತೆರೆಯ ಮೇಲೆ ಇವರಿಬ್ಬರದ್ದೂ ಅಪ್ಪ ಮಗಳ ಸಂಬಂಧ ಅಲ್ಲ. ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರರೂ ಆಗಿರುವ ಬಿ ಪಿ ಶ್ರೀನಿವಾಸ್ ಅವರು ಪ್ರೊಫೆಸರ್ ಆಗಿ ಈ ಚಿತ್ರದಲ್ಲಿ ನಟಿಸುತ್ತಿರೆ, ಮಗಳು ಶಾಲಿನಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಶಾಲಿನಿ ಅವರ ಪ್ರೀತಿಯ ಬಲೆಗೆ ಪ್ರೊಫೆಸರ್ ಸಿಲುಕಿಕೊಳ್ಳುತ್ತಾರೆ. ಇದು ಮುಸ್ಸಂಜೆಯ ಗೆಳತಿ ಚಿತ್ರದ ಕಥಾ ಸಾರಾಂಶ.

ಈ ವಿಭಿನ್ನ ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಚಿತ್ರದಲ್ಲಿ ಅಸಭ್ಯ ತನ ಇಲ್ಲ. ನಮ್ಮ್ಮಿಬ್ಬರ ಪಾತ್ರಗಳಲ್ಲಿ ತಂದೆ ಮತ್ತು ಮಗಳು ಎಲ್ಲಿಯೂ ಕಾಣಿಸುವುದಿಲ್ಲ. ಪಾತ್ರದಲ್ಲಿ ನಮ್ಮನ್ನು ನಾವು ಅಷ್ಟೊಂದು ತೊಡಗಿಸಿಕೊಂಡಿದ್ದೇವೆ ಎಂದರು.

ಮುಸ್ಸಂಜೆಯ ಗೆಳತಿ ಚಿತ್ರಕ್ಕೆ ಸಂಗೀತ ನೀಲ್. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಲಕ್ಷ್ಮಿ, ಸುಪ್ರಿಯಾ ಆಚಾರ್ಯ, ನೀಲ್ ಮತ್ತು ಚಿತ್ರಾ ಅವರ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ. ಶಿವಸಮಯ ಮತ್ತು ಚುಕ್ಕಿ ಅವರ ಸಾಹಿತ್ಯ ಚಿತ್ರಕ್ಕಿದೆ. ತಮ್ಮ ಪಾತ್ರದ ಬಗ್ಗೆ ಶಾಲಿನಿ ಖುಷಿಯಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'
ಸುದೀಪ್, ರಮ್ಯಾ ಜೋಡಿಯ ಕಿಚ್ಚ ಹುಚ್ಚ್ಚ ಆರಂಭ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada