For Quick Alerts
  ALLOW NOTIFICATIONS  
  For Daily Alerts

  ಫೆ.11ಕ್ಕೆ ಬೆಂಗಳೂರಿನಲ್ಲಿ ಸೋನು ನಿಗಮ್ ಗಾನಸುಧೆ

  By Rajendra
  |

  ಸೋನು ನಿಗಮ್ ಹಾಡಿರುವ ಹಾಡುಗಳನ್ನು ಕೇಳುತ್ತಿದ್ದರೆ ಇವರು ಪರಭಾಷಾ ಗಾಯಕ ಎಂದು ಅನ್ನಿಸುವುದೇ ಇಲ್ಲ. ಇವರ ಹಾಡುಗಳಲ್ಲಿ ಅಷ್ಟೊಂದು ದೈನ್ಯತೆ ಕಾಣುವುದೇ ಇದಕ್ಕೆ ಕಾರಣ. "ಮಿಂಚಾಗಿ ನೀನು ಬರಲು, ಕಣ್ಣ ಕಣ್ಣ ಸಲಿಗೆ, ನೀ ಸನಿಹಕೆ ಬಂದರೆ ಹೃದಯದ ಗತಿ ಏನು?" ಹಾಡುಗಳೇ ಇದಕ್ಕೆ ಸಾಕ್ಷಿ.

  ಇಷ್ಟೆಲ್ಲಾ ಹೇಳಲು ಕಾರಣ ಸೋನು ನಿಗಮ್ ಗಾಯನ ಕಾರ್ಯಕ್ರಮ ಫೆ.11ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಸುದರ್ಶನ ಸೇವಾ ಟ್ರಸ್ಟ್ ಹಾಗೂ ನವಕರ್ನಾಟಕ ಸೋಷಿಯಲ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿವೆ. ಸಂಜೆ 6ಗಂಟೆಗೆ ಕಾರ್ಯಕ್ರಮ.

  ಈ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ, ವಸತಿ ಹೀನರ ಉದ್ಧಾರಕ್ಕೆ ಹಾಗೂ ಎಚ್‌ಐವಿ ಬಾಧಿತರಿಗೆ ಔಷಧಿ ಪೂರೈಸಲು ಬಳಸಿಕೊಳ್ಳಲಾಗುತ್ತದೆ ಎಂದು ಕಾರ್ಯಕ್ರಮದ ಸಂಘಟಕ ಸುಜಾತ ಶ್ರೀನಾಥ್ ತಿಳಿಸಿದ್ದಾರೆ. ಟಿಕೆಟ್ ಮತ್ತು ಹೆಚ್ಚಿನ ಮಾಹಿತಿಗಾಗಿ 98802 00246 ಇಮೇಲ್: skvenkatesh@gmail.com ಸಂಪರ್ಕಿಸಬಹುದು. (ಒನ್‌ಇಂಡಿಯಾ ಕನ್ನಡ)

  English summary
  Playback singer Sonu Nigam performs live in Palace Grounds Bangalore this 11th February, 2012. The programme should be held at 6 pm. More details contact 98802 00246.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X