»   » ರೇಡಿಯೋ ಸಿಟಿಯಲ್ಲಿ ಕೋಮಲ್ ಕಮಾಲ್

ರೇಡಿಯೋ ಸಿಟಿಯಲ್ಲಿ ಕೋಮಲ್ ಕಮಾಲ್

Subscribe to Filmibeat Kannada

ರೇಡಿಯೋ ಸಿಟಿ 91.1 ಎಫ್ ಎಂನಲ್ಲಿ ಮಂಗಳವಾರ ಸಂಜೆ 6ರಿಂದ 8ರವರೆಗೆ ಹಾಸ್ಯ ನಟ ಕೋಮಲ್ ಅವರು ಆರ್ ಜೆ ವಿನಾಯಕ್ ಜೋಷಿಅವರೊಂದಿಗೆ 'ಸಿಟಿ ಮಾತು' ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಣಕು, ಕೀಟಲೆ, ಹಾಸ್ಯಮಯ ರೀತಿಯಲ್ಲಿ ಸಾಗುವ ಸಂಭಾಷಣೆಯನ್ನು ಕೇಳುತ್ತಾ ಸುಶ್ರಾವ್ಯ ಸಂಗೀತವನ್ನು ಕೇಳುಗರು ಸವಿಯಬಹುದು.

ಇದೇ ಮೊದಲ ಸಲ ಈ ಕಾರ್ಯಕ್ರಮವನ್ನು ರೇಡಿಯೋ ಸಿಟಿ 91.1 ಎಫ್ ಎಂ ನಡೆಸಿಕೊಡುತ್ತಿದೆ. ಪ್ರತಿ ದಿನ 'ಜೋಕ್ ಆಫ್ ದಿ ಡೇ' ಮೂಲಕ 'ಸಿಟಿ ಮಾತು' ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿದ ಕೋಮಲ್, ರೇಡಿಯೋ ಕಾರ್ಯಕ್ರಮ ನನಗೆ ಹೊಸದು. ಮದುವೆಯಾಗಿ ಗಂಡನ ಮನೆ ಸೇರಿದ ಹೊಸ ಸೊಸೆಯಂತಿದೆ ನನ್ನ ಪರಿಸ್ಥಿತಿ. ಆದರೆ ವಿಧಿಯಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಲಾವಿದರಿಗೆ ರೇಡಿಯೋ ಮೂಲಕ ಸಿಗುವ ಆನಂದವೇ ಬೇರೆ. ಈ ಮೂಲಕ ಆ ರೀತಿಯ ಥ್ರಿಲ್ ನನಗೆ ಸಿಗುತ್ತಿದೆ. ನನ್ನ ತರ್ಲೆಗಳು ಇಲ್ಲೂ ಬೈಸಿಕೊಳ್ಳುವಂತೆ ಮಾಡುತ್ತವೆ. ಆದರೂ ಮಜಾ ಇದೆ ಬಿಡಿ ಎನ್ನುತ್ತಾರೆ ಕೋಮಲ್. ಸಿಟಿ ಮಾತಿನಲ್ಲಿ ರು.5000 ಬಹುಮಾನ ಗೆಲ್ಲುವ ಅವಕಾಶ ಕೇಳುಗರಿಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada