ಸುವರ್ಣ ಸಂಭ್ರಮದಲ್ಲಿ ಗಾಯಕ ಕೆಜೆ ಯೇಸುದಾಸ್

ಈ ಐದು ದಶಕಗಳಲ್ಲಿ, ಮಲೆಯಾಳಮ್, ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ, ಗುಜರಾತಿ, ಒರಿಯಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು, ಮಲಯ, ರಷ್ಯನ್, ಅರಬ್ಬಿ, ಲ್ಯಾಟಿನ್ ಹಾಗೂ ಅರಬ್ಬಿ ಭಾಷೆಗಳಲ್ಲಿ ಹಾಡಿದ್ದಾರೆ. ಹಲವಾರು ಮಲೆಯಾಳಂ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಅತ್ಯುತ್ತಮ ಹಿನ್ನೆಲೆ ಗಾಯಕ 'ರಾಷ್ಟ ಪ್ರಶಸ್ತಿ'ಯನ್ನು ಏಳು ಬಾರಿ ಪಡೆದಿದ್ದಾರೆ. 30 ಕ್ಕೂ ಹೆಚ್ಚು ಬಾರಿ ಹಿನ್ನೆಲೆ ಗಾಯನಕ್ಕಾಗಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು 'ರಾಜ್ಯ ಪ್ರಶಸ್ತಿ' ನೀಡಿ ಗೌರವಿಸಿವೆ. ಈ ಖ್ಯಾತ ಗಾಯಕರು ಜನಿಸಿದ್ದು ಕೊಚ್ಚಿಯ ಕ್ಯಾಥೋಲಿಕ್ ಕುಟುಂಬದಲ್ಲಿ.
ತಂದೆ ಆಗಸ್ಟೀನ್ ಜೋಸೆಫ್ ಇವರ ಮೊದಲ ಗುರು. ನಂತರ ದಿವಂಗತ ಶ್ರೀನಿವಾಸ್ ಅಯ್ಯರ್, ಚೆಂಬೈ ವೈದ್ಯನಾಥ ಭಾಗವತರ್ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಗಾಯಕನಾಗಿ ಈ ಎತ್ತರಕ್ಕೆ ಏರಿದ್ದಾರೆ. ನಮ್ಮ ದೇಶದ ಹೆಮ್ಮೆಯ ಗಾಯಕ ಜೇಸುದಾಸ್ ಅವರಿಗೆ ಸುವರ್ಣ ಸಂಭ್ರಮದ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)
English summary
Playback Singer KJ Yesudas celebrates Golden Jubilee as a singer on Monday Nov 14, 2011. The music legend KJ Yesudas began his career as a playback singer in a Maleyalam Film, 'kalpadukal' in the year 1961. We extend our best wishes to him.
ಸಂಗೀತ ಹಿನ್ನೆಲೆ ಗಾಯಕ ಕನ್ನಡ ಸಿನಿಮಾ ಹಾಡು ಹಕ್ಕಿ ಕನ್ನಡ ಸಾಹಿತ್ಯ music playback singer kannada cinema kannada lyrics


Click it and Unblock the Notifications