»   »  ಲಕ್ಷ್ಮಿನಾರಾಯಣ್ ಮದುವೆಗೆ ವಿಭಿನ್ನ ಕರೆಯೋಲೆ!

ಲಕ್ಷ್ಮಿನಾರಾಯಣ್ ಮದುವೆಗೆ ವಿಭಿನ್ನ ಕರೆಯೋಲೆ!

Subscribe to Filmibeat Kannada
Music director Narayan
ತರಹೇವಾರಿ ಆಮಂತ್ರಣ ಪತ್ರಗಳನ್ನು ನೋಡಿರಬಹುದು.ಆದರೆ ಸುಡು ಬೇಸಿಗೆಯಲ್ಲಿ 'ಲಸ್ಸಿ' ಕೊಟ್ಟು ಆಹ್ವಾನಿಸುವುದನ್ನು ನೋಡಿದ್ದೀರಾ? ಇಲ್ಲಿ 'ಲಸ್ಸಿ' ಎಂದರೆ ತಣ್ಣನೆಯ ಪೇಯ 'ಲಸ್ಸಿ'ಯಲ್ಲ ಅದೇ ಹೆಸರಿನ ಲಗ್ನ ಪತ್ರಿಕೆ. ವಿಷಯ ಇಷ್ಟೇ, ಸಂಗೀತ ನಿರ್ದೇಶಕ ಎಸ್.ಲಕ್ಷ್ಮಿನಾರಾಯಣ್(ವೆಂಕಟ್ ಜೋಡಿ) ತಮ್ಮ ಮದುವೆಗೆ ಆಡಿಯೋ ಮೂಲಕ ಆಹ್ವಾನ ನೀಡಿದ್ದಾರೆ. ಲಗ್ನ ಪತ್ರಿಕೆಗೆ ಹ್ರಸ್ವವಾಗಿ 'ಲಸ್ಸಿ' ಎಂದು ಹೆಸರಿಟ್ಟಿದ್ದಾರೆ ಅಷ್ಟೇ!

'ಲಸ್ಸಿ' ಎಂದರೆ ವರ ಲಕ್ಷ್ಮಿನಾರಾಯಣ್ ಮತ್ತು ವಧು ಸೀತಾಲಕ್ಷ್ಕಿ ಅವರಿಬ್ಬರು ಹೆಸರುಗಳ ಸಂಗಮ! ಒಂದೇ ಒಂದು ಹಾಡನ್ನು ಒಳಗೊಂಡಿರುವ ಈ ಆಡಿಯೋ ಸಿಡಿ ಕನ್ನಡ, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿದೆ. ಪಾಂಚಜನ್ಯ ಅವರ ಸಾಹಿತ್ಯಕ್ಕೆ ಲಕ್ಷ್ಮಿನಾರಾಯಣ್ ಅವರ ಸಹೋದರ ರೇಮೋ ಸಂಗೀತ ಸಂಯೋಜಿಸಿದ್ದಾರೆ. ಲಸ್ಸಿಯಲ್ಲಿನ ಹಾಡನ್ನು ಲಕ್ಷ್ಮಿನಾರಾಯಣ್ ಅವರ ತಾಯಿ ಗಿರಿಸುಂದರಿ ಹಾಡಿದ್ದಾರೆ. ಅಲ್ಲಿಗೆ ಪರಿವಾರ ಸಮೇತ ಆಹ್ವಾನ ಕೊಟ್ಟಂತಾಯಿತು.

''ಸಾಮಾನ್ಯ ಲಗ್ನ ಪತ್ರಿಕೆಯಾದರೆ ಮದುವೆಯಾದ ಬಳಿಕ ಅದನ್ನು ಮರೆತುಬಿಡುತ್ತಾರೆ. ಆಡಿಯೋ ಆಮಂತ್ರಣ ಪತ್ರಿಕೆ ಕೊಟ್ಟ ಕಾರಣ ಸ್ವಲ್ಪ ಕಾಲ ನೆನಪಿನಲ್ಲಿರುತ್ತೆ. ಆದಕಾರಣ ಈ ವಿಭಿನ್ನವಾಗಿ ಆಹ್ವಾನ ನೀಡುತ್ತಿದ್ದೇನೆ ಎನ್ನುತ್ತಾರೆ ನಾರಾಯಣ್. ಹತ್ತು ನಿಮಿಷ ಕಾಲವಧಿಯ ಹಾಡಿನಲ್ಲಿ ನಾರಾಯಣ್ ತಾವು ಈ ಹಂತಕ್ಕೆ ಬರಲು ನೆರವಾದವರನ್ನು ಸ್ಮರಿಸಿದ್ದಾರೆ.

ಸಿಡಿ ಒಂದಕ್ಕೆ ಕನಿಷ್ಠ ರು.100 ಖರ್ಚಾಗುತ್ತಿತ್ತು, ಆದರೆ ಇದು ತಮ್ಮದೇ ಕಂಪನಿಯಲ್ಲಿ ಮುದ್ರಣವಾದ ಕಾರಣ ಸಿಡಿ ಒಂದಕ್ಕೆ ರು.40.50 ಖರ್ಚಾಗಿದೆ. ಈಗಾಗಲೇ ಬಂಧು ಬಾಂಧವರಿಗೆ ಒಂದು ಸಾವಿರ ಸಿಡಿಗಳನ್ನು ಹಂಚಿರುವುದಾಗಿ ಲಕ್ಷ್ಮಿನಾರಾಯಣ್ ವಿವರ ನೀಡಿದರು. ಕಲಾಸಿಪಾಳ್ಯ, ನಲ್ಲ, ಹಾರ್ಟ್ ಬೀಟ್ಸ್, ರಾಕಿ, ತಿಮ್ಮ ಸೇರಿದಂತೆ ಬಹಳಷ್ಟು ಕನ್ನಡ ಚಿತ್ರಗಳಿಗೆ ವೆಂಕಟ್, ಲಕ್ಷ್ಮಿನಾರಾಯಣ್ ಜೋಡಿ ಸಂಗೀತ ಸಂಯೋಜಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ
ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!
ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada