'ವೈ ದಿಸ್ ಕೊಲವೆರಿ ಡಿ' ಕಾಪಿ ರೈಟ್ಸ್‌ಗೆ ಕಾಂಗ್ರೆಸ್ ಕಸರತ್ತು

ಈ ಜನಪ್ರಿಯ ಹಾಡಿನ ಕಾಪಿ ರೈಟ್ಸ್ ಪಡೆಯಲು ಕಾಂಗ್ರೆಸ್ ಪಕ್ಷ ಮುಂದಾಗಿದ್ದು ನಟ ಧನುಷ್‌ರನ್ನು ಸಂಪರ್ಕಿಸಿದೆ. ಈ ಹಿಂದೆ ಎ ಆರ್ ರೆಹಮಾನ್ ಅವರ "ಜೈ ಹೋ" ಗೀತೆಯ ರೈಟ್ಸ್ ಕಾಂಗ್ರೆಸ್ ಪಡೆದಿತ್ತು. ಈಗ "ವೈ ದಿಸ್ ಕೊಲವೆರಿ ಡಿ" ಹಿಂದೆ ಬಿದ್ದಿರುವ ಅಂಶ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಈ ಹಾಡಿನ ರೈಟ್ಸ್ ನೀಡಲು ಧನುಷ್ ನಿರಾಕರಿಸಿದ್ದರು. ಬಳಿಕ ನಟ ಹಾಗೂ ಸಂಸದ ರಾಜ್ ಬಬ್ಬರ್ ಮಧ್ಯಸ್ಥಿಕೆ ವಹಿಸಿದ ಕಾರಣ ಧನುಷ್ ಹಾಡಿನ ರೈಟ್ಸ್ ನೀಡಲು ಒಪ್ಪಿದ್ದದಂತೆ ತಲೆಯಾಡಿಸಿದ್ದಾರೆ. ಆದರೆ ಇನ್ನೂ ಏನೂ ಹೇಳಿಲ್ಲ. ಈ ಹಾಡಿನ ರೈಟ್ಸ್ ಹೇಗಾದರೂ ಸರಿ ಪಡೆಯಬೇಕು ಎಂಬ ಉಮೇದಿನಲ್ಲಿ ಕಾಂಗ್ರೆಸ್ ಪಕ್ಷವಿದೆ.
ಬಳಿಕ ಮಾತನಾಡಿರುವ ಧನುಷ್, "ಈಗಾಗಲೆ ಕಾಪಿ ರೈಟ್ ಸೋನಿ ಸಂಸ್ಥೆ ಪಾಲಾಗಿರುವ ಕಾರಣ ಕಾಂಗ್ರೆಸ್ ಅವರ ಬಳಿಯೇ ಮಾತನಾಡಬೇಕು ಎಂದಿದ್ದಾರೆ. ಈ ಹಾಡನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, "ಇದು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ ಹಾಡಲ್ಲ" ಎಂದಿದ್ದಾರೆ ಮಾರ್ಮಿಕವಾಗಿ ನುಡಿದಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ಗೆ ಈ ಹಾಡು ಸಿಗುವುದು ಅನುಮಾನ. (ಏಜೆನ್ಸೀಸ್)


Click it and Unblock the Notifications











