»   »  ಸಂಗೀತಾಸಕ್ತರದಾಹ ನೀಗುತ್ತಿರುವ ಹಂಸಲೇಖ!

ಸಂಗೀತಾಸಕ್ತರದಾಹ ನೀಗುತ್ತಿರುವ ಹಂಸಲೇಖ!

Posted By:
Subscribe to Filmibeat Kannada

ಸಂಗೀತ ಸಂಯೋಜಕ, ಚಿತ್ರ ಸಾಹಿತಿ ಹಂಸಲೇಖ ಅವರ ಸಂಗೀತ ಕಳಕಳಿಯನ್ನು ಬೆಟ್ಟು ಮಾಡಿ ತೋರಿಸುವಂತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಂಗೀತಕ್ಕೆಂದೇ ಒಂದು ಕಾಲೇಜನ್ನು ಅವರು ತೆರೆದಿದ್ದಾರೆ. 'ಹಂಸಲೇಖಾ ಪ್ರದರ್ಶನ ಕಲೆಗಳ ಕಾಲೇಜು ಮತ್ತು ಸಂಶೋಧನಾ ಕೇಂದ್ರ' ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿ ತಲೆಎತ್ತಿದೆ.

ಅಂದಹಾಗೆ ಈ ಕಾಲೇಜು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ಜೂ.24, 2004ರಲ್ಲಿ ಕಾರ್ಯಾರಂಭ ಮಾಡಿದ ಈ ಕಾಲೇಜು ಹಲವಾರು ಸಂಗೀತಾಸಕ್ತರ ದಾಹವನ್ನು ತಣಿಸಿದೆ ಎನ್ನಬಹುದು.ಸಂಗೀತ, ನಾಟಕ ಕಲೆಗಳನ್ನು ಕರಗತ ಮಾಡಿಸಿ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದೆ.

''ಪ್ರದರ್ಶನ ಕಲೆ ಮತ್ತು ಸಂಗೀತ ನನ್ನ ನೆಚ್ಚಿನ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿ ವೃತ್ತಿಜೀವನ ಆರಂಭಿಸಬೇಕೆಂದಿರುವ ಆಸಕ್ತರಿಗೆ ಸಂಗೀತ ಕಲಿಸಬೇಕು ಎಂಬುದು ನನ್ನ ಇಚ್ಛೆ ''ಎನ್ನುತ್ತಾರೆ ಹಂಸಲೇಖ. ಕರ್ನಾಟಕ ಸರಕಾರ ಸಂಗೀತ ವಿವಿಯನ್ನು ತೆರೆಯಲು ಹೆಣಗಾಡುತ್ತಿದೆ. ಹಂಸಲೇಖ ಅದಕ್ಕೂ ಮುನ್ನ ಕಾಲೇಜು ತೆರೆದು ಸಂಪೂರ್ಣವಾಗಿ ಸಂಗೀತ ಕಲಿಕೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada